ತುಮಕೂರು: ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಟೆಂಡರ್ ಪಡೆದ ಖಾಸಗಿ ಸಂಸ್ಥೆಗೆ ಕಳೆದ 5 ತಿಂಗಳಿನಿಂದ ಬಿಲ್ ಪಾವತಿಯಾಗಿಲ್ಲ. ಮಹಾನಗರ ಪಾಲಿಕೆ ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ನಗರದ ಜಿಲ್ಲಾ ಆಸ್ಪತ್ರೆ ಆವರಣ, ರೈಲು ನಿಲ್ದಾಣದ ರಸ್ತೆ, ಜೆ.ಸಿ.ರಸ್ತೆ, ಶಿರಾಗೇಟ್, ಕ್ಯಾತ್ಸಂದ್ರ ಮತ್ತು ಅಂತರಸನಹಳ್ಳಿ ಮಾರುಕಟ್ಟೆ ಸೇರಿ ಒಟ್ಟು 6 ಕಡೆ ಇಂದಿರಾ ಕ್ಯಾಂಟೀನ್ಗಳಿವೆ. ಕಳೆದ ವರ್ಷ ಹೊಸದಾಗಿ ಜಿಲ್ಲಾ ಆಸ್ಪತ್ರೆ ಮತ್ತು ಮಾರುಕಟ್ಟೆಯಲ್ಲಿಕ್ಯಾಂಟೀನ್ ಆರಂಭಿಸಲಾಯಿತು. ಇದಕ್ಕೂ ಮುನ್ನ ನಾಲ್ಕು ಕ್ಯಾಂಟೀನ್ಗಳಿಗೆ ಪ್ರತಿ ತಿಂಗಳು ₹7 ಲಕ್ಷ ಬಿಲ್ ಪಾವತಿಸಲಾಗುತ್ತಿತ್ತು.

ಪ್ರಸ್ತುತ ತಿಂಗಳಿಗೆ ₹12 ಲಕ್ಷದಿಂದ ₹13 ಲಕ್ಷ ನೀಡಲಾಗುತ್ತಿದೆ. ಫೆಬ್ರುವರಿ ತಿಂಗಳಲ್ಲಿ ತಿಂಡಿ, ಊಟಕ್ಕೆ ಬೇಡಿಕೆ ಕಡಿಮೆಯಾಗಿದ್ದು, ಬಿಲ್ ಕಡಿಮೆ ಬಂದಿದೆ. ತಿಂಗಳಿಗೆ ₹6 ಲಕ್ಷ ಬಿಲ್ ಮಾಡಲಾಗಿದೆ. ಒಟ್ಟು ಸುಮಾರು ₹50 ಲಕ್ಷದಿಂದ ₹55 ಲಕ್ಷ ಪಾವತಿಯಾಗಬೇಕಿದೆ.

ಕಳೆದ ವರ್ಷದ ಅಕ್ಟೋಬರ್ನಲ್ಲಿ ಕೊನೆಯದಾಗಿ ಬಿಲ್ ನೀಡಲಾಗಿದೆ. ಅಲ್ಲಿಂದ ಇದುವರೆಗೆ ಖಾಸಗಿ ಸಂಸ್ಥೆಗೆ ಹಣ ಸಂದಾಯವಾಗಿಲ್ಲ. ಮಹಾನಗರ ಪಾಲಿಕೆಯಿಂದ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಹಣ ಬಿಡುಗಡೆ ಮಾಡಲಾಗುತ್ತದೆ. 5 ತಿಂಗಳಿನಿಂದ ಗುತ್ತಿಗೆದಾರರಿಗೆ ಹಣ ತಲುಪಿಲ್ಲ.

6 ಕ್ಯಾಂಟೀನ್ಗಳಲ್ಲಿ 18 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅವರಿಗೆ ತಿಂಗಳಿಗೆ ₹10 ಸಾವಿರದಂತೆ ವೇತನ ನಿಗದಿ ಪಡಿಸಲಾಗಿದೆ. ಸಿಬ್ಬಂದಿಗೆ ಸಕಾಲಕ್ಕೆ ಹಣ ಸಿಗುತ್ತಿಲ್ಲ. ಮೂರು–ನಾಲ್ಕು ತಿಂಗಳಿಗೊಮ್ಮೆ ಜಮಾ ಮಾಡಲಾಗುತ್ತಿದೆ. ಇದೀಗ ಪಾಲಿಕೆ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ಸಿಬ್ಬಂದಿಗೆ 10 ತಿಂಗಳ ಸಂಬಳ ಕೊಟ್ಟಿಲ್ಲ.

‘ಸಿಬ್ಬಂದಿಗೆ ಸಂಬಳ ನೀಡುವಂತೆ ಗುತ್ತಿಗೆ ಪಡೆದ ಸಂಸ್ಥೆಗೆ ತಿಳಿಸಲಾಗಿದೆ. ನಿರ್ಲಕ್ಷ್ಯ ತೋರಿದ್ದಕ್ಕಾಗಿ ನೋಟಿಸ್ ಸಹ ಜಾರಿ ಮಾಡಲಾಗಿದೆ. ಬೇರೆಯವರಿಗೆ ಟೆಂಡರ್ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ಕಚೇರಿಯಿಂದ ಟೆಂಡರ್ ಕರೆಯಲಾಗುತ್ತದೆ’ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್ ನಿಖಿತಾ ಪ್ರತಿಕ್ರಿಯಿಸಿದರು.

ಸೌದೆ ಒಲೆಯಲ್ಲಿ ಅಡುಗೆ: ಅನಿಲ ಸಿಲಿಂಡರ್ ಸಿಗದೆ ಇಂದಿರಾ ಕ್ಯಾಂಟೀನ್ನಲ್ಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲಾಗುತ್ತಿದೆ. ಒಂದು ವಾರದಿಂದ ಅನ್ನ, ಸಾಂಬಾರ್ ಸಿದ್ಧಪಡಿಸಿ ಮಧ್ಯಾಹ್ನ ವಿತರಿಸಲಾಗುತ್ತಿದೆ. ಬೆಳಗಿನ ತಿಂಡಿ ಕಡಿತಗೊಳಿಸಲಾಗಿದೆ. ಸಿಲಿಂಡರ್ ಪೂರೈಕೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಿಂದ ಗ್ಯಾಸ್ ಏಜೆನ್ಸಿಗೆ ಪತ್ರ ಬರೆಯಲಾಗಿದೆ. ಇದುವರೆಗೆ ಸಿಲಿಂಡರ್ ದೊರೆತಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-17-1915944001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.