ತಿಪಟೂರು: ನಗರದ ಖಾಸಗಿ ಬಸ್ ನಿಲ್ದಾಣ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಬಯಲಿನಲ್ಲಿ ಕಲ್ಲುಗಳನ್ನಿಟ್ಟುಕೊಂಡು ಸೌದೆ ಬಳಸಿ ಒಲೆಯಲ್ಲಿ ಆಹಾರ ತಯಾರಿಸಲಾಗುತ್ತಿದೆ.

ಸೌದೆ ಒಲೆಯಲ್ಲಿ ಅಡುಗೆ ಮಾಡುವುದರಿಂದ ಉಂಟಾಗುವ ಹೊಗೆ ಅಡುಗೆಗಾರರ ಆರೋಗ್ಯದ, ಹಾಗೂ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಇದರಿಂದ ಕ್ಯಾಂಟೀನ್ ಸುತ್ತಲಿನ ವಾತಾವರಣ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ನಗರ ನಿವಾಸಿಗಳು.

ಇಂದಿರಾ ಕ್ಯಾಂಟಿನ್ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ಡಾಣದ ಬಳಿಯಿದ್ದು, ನೂರಾರು ಕೂಲಿ ಕಾರ್ಮಿಕರು, ಪ್ರಯಾಣಿಕರು, ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇವರಿಗೆ ತಿಂಡಿ ಊಟದ ಅವಶ್ಯಕತೆ ಇರುತ್ತದೆ. ಆದರೆ ಸಿಲಿಂಡರ್ ಸಮಸ್ಯೆಯಿಂದ ಆಹಾರ ತಯಾರಿಕೆಯೂ ತಡವಾಗುತ್ತಿದೆ.

‘ನಿತ್ಯ ಬೆಳಗ್ಗೆ ತಿಂಡಿ 350 ಹಾಗೂ ಮಧ್ಯಾಹ್ನ ಊಟ 350 ಜನಕ್ಕೆ ತಯಾರಿಸಬೇಕಿದೆ. ಒಂದು ವಾರಕ್ಕೆ 19 ಕೆಜಿಯ ಐದು ಸಿಲಿಂಡರ್ ಅವಶ್ಯಕತೆ ಇದೆ. ಗ್ಯಾಸ್ ಸಿಲಿಂಡರ್ಗಳ ಸಮಸ್ಯೆ ಇರುವುದರಿಂದ ಸೌದೆ ಒಲೆಯಲ್ಲಿ ಆಹಾರ ತಯಾರಿಸುವಂತಾಗಿದೆ. ಸೌದೆಯೂ ದುಬಾರಿಯಾಗಿದೆ’ ಎಂದು ವ್ಯವಸ್ಥಾಪಕ ನಿಖಿಲ್ ಹೇಳಿದರು.

‘ಸಮಸ್ಯೆ ಇದ್ದರೂ ಸಿಬ್ಬಂದಿ ತಮ್ಮ ಕೆಲಸ ನಿಲ್ಲಿಸದೆ, ಬಿಸಿಲಿನಲ್ಲೂ ನಿಂತು ಅಡುಗೆ ತಯಾರು ಮಾಡುತ್ತಿರುವುದು ಕರ್ತವ್ಯ ಪಾಲನೆ ಆಗಿದೆ. ಆದರೆ ಬಯಲಿನಲ್ಲಿ ಆಹಾರ ತಯಾರು ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಈ ಅವ್ಯವಸ್ಥೆ ಕಡೆ ಸರ್ಕಾರ ಗಮನ ಹರಿಸಬೇಕು’ ಎನ್ನುತ್ತಾರೆ ಪ್ರಯಾಣಿಕ ಮೃತ್ಯಂಜಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-17-1539572949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.