ತುಮಕೂರು: ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ‘ಸಾರ್ಥಕ ಸೇವೆಯ ಸಮರ್ಪಣೆ’ಗೆ ರಾಜ್ಯದ ಮೂಲೆ, ಮೂಲೆಗಳಿಂದ ಬಂದಿದ್ದ ಸಾವಿರಾರು ಜನರು ಸಾಕ್ಷಿಯಾದರು.

ಸೋಮವಾರ ರಾತ್ರಿ ಸುರಿದ ಮಳೆ ತಂಪೆರೆದಿತ್ತು. ಹಾಗಾಗಿ ನಗರದಲ್ಲಿ ಮಂಗಳವಾರ ಬಿಸಿಲು ಕೊಂಚ ತಗ್ಗಿ ಆಹ್ಲಾದಕರ ವಾತಾವರಣವಿತ್ತು. ಬೆಳಗ್ಗೆಯಿಂದಲೇ ಗುಂಪು ಗುಂಪಾಗಿ ಜನರು ನಗರದ ಜೂನಿಯರ್ ಕಾಲೇಜು ಮೈದಾನದ ಕಡೆಗೆ ಹೆಜ್ಜೆ ಹಾಕಿದರು.

2,500ಕ್ಕೂ ಹೆಚ್ಚು ಬಸ್ಗಳಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಬಂದಿದ್ದರು. ಮಧ್ಯಾಹ್ನ 12ರ ಹೊತ್ತಿಗೆ ಕಾಲೇಜು ಮೈದಾನದಲ್ಲಿ ಸಾವಿರಾರು ಜನ ಸೇರಿದ್ದರು. ಎಲ್ಲರಿಗೂ ಅಚ್ಚುಕಟ್ಟಾಗಿ ಆಸನ, ಊಟ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ರೈತರು ಕೃಷಿ ಕೆಲಸಗಳಿಗೆ ವಿರಾಮ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸರ್ಕಾರದ ಮೂರು ವರ್ಷದ ಸಾಧನೆಯನ್ನು ಚಿತ್ರಗಳಲ್ಲಿ ಕಟ್ಟಿ ಕೊಡಲಾಗಿತ್ತು. ಜೊತೆಗೆ ಅದಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿತ್ತು. ಕಂದಾಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಳಗೊಂಡಂತೆ ಇತರೆ 11 ಇಲಾಖೆಗಳ ಸಾಧನೆ ಮತ್ತು ಸರ್ಕಾರದ ಸವಲತ್ತು ಕುರಿತು ಮಾಹಿತಿ ನೀಡಲು ಬೃಹತ್ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು 800 ಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು.

ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಾಲ್ವರು ಪೊಲೀಸ್ ವರಿಷ್ಠಾಧಿಕಾರಿಗಳು, ಒಂಬತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 26 ಡಿವೈಎಸ್ಪಿ ಸೇರಿ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸಮಾವೇಶಕ್ಕೆ ಭದ್ರತೆ ಒದಗಿಸಿದ್ದರು.

ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ನಾಯಕರ ಹಟ್ಟಿ ನಿವಾಸಿಗಳಿಗೆ ಸಮಾವೇಶದ ಮೂಲಕ ಕಂದಾಯ ದಾಖಲೆ ಒದಗಿಸಲಾಯಿತು. ಕೊರಟಗೆರೆ ತಾಲ್ಲೂಕಿನ ಕಾಶಾಪುರದ ಹಕ್ಕಿಪಿಕ್ಕಿ ಕಾಲೊನಿಯಿಂದ ಹಿಡಿದು, ಪಾವಗಡದ ತಿರುಮಣಿವರೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಸವಲತ್ತು ತಲುಪಿಸಲಾಯಿತು. ಇ–ಪೌತಿ ಖಾತೆ, ದರಖಾಸ್ತು ಪೋಡಿ, ಕಂದಾಯ ಗ್ರಾಮದ ಹಕ್ಕುಪತ್ರ ವಿತರಿಸಲಾಯಿತು.

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಕ್ಕುಪತ್ರ ಪಡೆದು ನಗೆ ಬೀರಿದರು. ನೇಮಕಾತಿ ಆದೇಶ ಪತ್ರ ಪಡೆದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಖುಷಿಯಿಂದ ವೇದಿಕೆಯಿಂದ ಇಳಿದರು. ಹಕ್ಕುಪತ್ರ, ಕಂದಾಯ ಇಲಾಖೆಯ ಇತರೆ ದಾಖಲೆ ಪಡೆದ ಫಲಾನುಭವಿಗಳು ಕೃತಜ್ಞತಾ ಭಾವದಿಂದ ಊರುಗಳಿಗೆ ಮರಳಿದರು.

ಗಮನ ಸೆಳೆದ ಅಭಿವೃದ್ಧಿ ಮಾದರಿ: ‘ನವ ಕರ್ನಾಟಕ’ ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಜಿಲ್ಲೆಯ ಆಡಳಿತದ ಕಳೆದ ಮೂರು ವರ್ಷದ ಹಾದಿಯನ್ನು ಚಿತ್ರಗಳಲ್ಲಿ ಕಟ್ಟಿಕೊಡಲಾಯಿತು.

ಬೆಂಗಳೂರಿನ ಮಾದಾವರದಿಂದ ತುಮಕೂರಿನ ತನಕ ಮೆಟ್ರೊ ವಿಸ್ತರಿಸಿದರೆ ನಗರದ ಚಿತ್ರಣ ಹೇಗಿರುತ್ತದೆ ಎಂಬುದನ್ನು ವಸ್ತು ಪ್ರದರ್ಶನದ ಮೂಲಕ ಜನರಿಗೆ ತಿಳಿಸಲಾಯಿತು.

ಮೆಟ್ರೊ ನಿಲ್ದಾಣ, ಸಾಗುವ ಮಾರ್ಗ, ದೂರದ ಕುರಿತು ಮಾಹಿತಿಯೂ ಒಳಗೊಂಡಿತ್ತು. ಇದು ಜನರ ಗಮನ ಸೆಳೆಯಿತು. ಜನರು ಮೆಟ್ರೊ ಮಾದರಿ ಜತೆಗೆ ಫೋಟೊ ತೆಗೆದುಕೊಂಡರು.

‘ತುಮಕೂರು ದಸರಾ’, ರಾಜ್ಯ ಒಲಿಂಪಿಕ್ಸ್, ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್, ‘ತುಮಕೂರು ಓಪನ್’ ವಿಶ್ವ ಟೆನಿಸ್ ಟೂರ್ನಿಗಳು ಹಾಗೂ ಪಾವಗಡ ಸೋಲಾರ್ ಪಾರ್ಕ್, ಹಿಂದಿನ ಮತ್ತು ಈಗಿನ ತುಮಕೂರು ಅಮಾನಿ ಕೆರೆ ಚಿತ್ರ ಪ್ರದರ್ಶನ ವಿಶೇಷವಾಗಿತ್ತು.

ಕೃಷಿ, ಮೀನುಗಾರಿಕೆ, ಬೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ, ಕೆಎಸ್ಆರ್ಟಿಸಿ ಸೇರಿ ವಿವಿಧ ಇಲಾಖೆಗಳಿಂದ ಮಳಿಗೆ ತೆರೆಯಲಾಗಿತ್ತು. ಸಾರ್ವಜನಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯದ ಅರಿವು ಮೂಡಿಸಲಾಯಿತು.

ತೋಟಗಾರಿಕೆ ಇಲಾಖೆಯಿಂದ ಸ್ಥಳೀಯ ಮಾವಿನ ತಳಿಯ ಜತೆಗೆ ಮಿಯಾಜಕಿ, ಕೊಲಂಬಿಯಾ, ಬಟನ್, ದಶೇರಿ, ಕೋಕೊನೆಟ್, ಬಾದಾಮಿ ಮಾವಿನ ಹಣ್ಣು ಪ್ರದರ್ಶನಕ್ಕೆ ಇಡಲಾಗಿತ್ತು. ರೈತರಿಗೆ ಸಮಗ್ರ ಕೃಷಿಗೆ ಪೂರಕವಾದ ಮಾಹಿತಿ ಒದಗಿಸಲಾಯಿತು.

ಕೆಎಸ್ಆರ್ಟಿಸಿ ಮಳಿಗೆಯಲ್ಲಿ ಬಸ್ಗಳ ಮಾದರಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪುಟ್ಟ, ಪುಟ್ಟ ಬಸ್ಗಳನ್ನು ಜನ ವೀಕ್ಷಿಸಿದರು. ಡಿ.ದೇವರಾಜ ಅರಸು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮಾದರಿ ನೋಡುಗರನ್ನು ಆಕರ್ಷಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-161457747

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.