ತುರುವೇಕೆರೆ: ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳ ಮಾರಾಟ ಸೇರಿದಂತೆ ವಿವಿಧ ವಹಿವಾಟುಗಳನ್ನು ಪೇಪರ್ಲೆಸ್ ಮಾಡಲಾಗುತ್ತಿದೆ. ಕಾವೇರಿ ತಂತ್ರಾಂಶದ ಮೂಲಕ ಪೇಪರ್ಲೆಸ್ ಮಾಡಿ ಕೇವಲ ತಂತ್ರಾಂಶದ ಮೂಲಕ ನೋಂದಣಿ ಮಾಡಿಸುವ ಸರ್ಕಾರದ ಕ್ರಮ ಖಂಡನೀಯ ಎಂದು ತಾಲ್ಲೂಕು ಪತ್ರ ಬರಹಾಗಾರ ಸಂಘ ಖಂಡಿಸಿದೆ.

ಪತ್ರ ಬರಹಗಾರರ ಸಂಘದ ಜಿಲ್ಲಾ ಸಂಘಟನಕಾರ ಬಿ.ಎನ್.ಮಂಜುನಾಥ್ (ಪಾಪು) ಮಾತನಾಡಿ, ಭೂ ಮಾಫಿಯಾದವರು ಮತ್ತು ಹ್ಯಾಕರ್ಸ್ಗಳಿಗೆ ಸರ್ಕಾರದ ಈ ಯೋಜನೆ ರತ್ನಗಂಬಳಿ ಹಾಕಿಕೊಟ್ಟಂತಾಗುತ್ತದೆ. ಕಾಗದ ರಹಿತ ಡಿಜಿಟಲ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಚಾಮರಾಜ ನಗರದಲ್ಲಿ ಜಾರಿಗೆ ತಂದಿದೆ. ಇದು ನಂತರ ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಈ ಕಾನೂನು ಜಾರಿಯಾದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈಗಿರುವ ವ್ಯವಸ್ಥೆಯಲ್ಲೇ ನೂರಾರು ತೊಂದರೆಗಳಿವೆ. ಇವುಗಳನ್ನು ಬಗೆಹರಿಸಲೇ ಹರಸಾಹಸ ಮಾಡಲಾಗುತ್ತಿದೆ. ಈಗ ಪೇಪರ್ಲೆಸ್ ವ್ಯವಸ್ಥೆ ಜಾರಿಗೆ ಬಂದರೆ ಸಾರ್ವಜನಿಕರ ಆತಂಕ ಮತ್ತಷ್ಟೂ ಹೆಚ್ಚುತ್ತದೆ ಎಂದು ಹೇಳಿದರು.

ಆಸ್ತಿ ಮಾರಾಟಗೊಂಡ ಬಗ್ಗೆಯಾಗಲಿ, ಖರೀದಿ ಮಾಡಿಕೊಂಡಿರುವ ಬಗ್ಗೆಯಾಗಲೀ ಭೌತಿಕ ಪತ್ರ ನೀಡುವುದಿಲ್ಲ. ಸಹಿಯನ್ನು ಭೌತಿಕವಾಗಿ ಮಾಡದೆ ಈ - ಸಹಿ ಮಾಡಿಸುವುದರಿಂದ ಅಮಾಯಕರನ್ನು ವಂಚಿಸಲು ರಹದಾರಿಯಾಗಲಿದೆ. ವಂಚಕರಿಗೆ ಸಲೀಸು ಮಾಡಿಕೊಟ್ಟಂತೆ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಲಾಭವೇನೂ ಇಲ್ಲ. ಆದರೆ ಜನರಿಗೆ ತೊಂದರೆಯಾಗಲಿದೆ ಎಂದರು.

ತಾಲ್ಲೂಕು ಪತ್ರ ಬರಹಗಾರರ ಸಂಘದ ಗೌರವಾಧ್ಯಕ್ಷ ಕೆ.ಎಲ್.ಶಿವಕುಮಾರ್, ಅಧ್ಯಕ್ಷ ಕೆ.ಆರ್.ರಮೇಶ್, ಉಪಾಧ್ಯಕ್ಷ ಬಿ.ಜಿ.ಶಿವಕುಮಾರ್, ಪರಮೇಶ್, ಕಾರ್ಯದರ್ಶಿ ಕೆ.ಟಿ.ಪುಟ್ಟಸ್ವಾಮಿಗೌಡ, ಖಜಾಂಚಿ ಟಿ.ಜಿ.ಶಿವಕುಮಾರಸ್ವಾಮಿ. ಸಂಘಟನಾ ಕಾರ್ಯದರ್ಶಿ ಕೆ.ಎ.ಹರೀಶ್, ನಿರ್ದೇಶಕರಾದ ಕೆ.ಗೋಪಿನಾಥ್, ಬಿ.ಎನ್.ಶಶಿಕುಮಾರ್, ಕೆ.ಎಲ್.ಕಲ್ಲೇಶ್, ಬಿ.ಕಂಚೀರಾಯ, ಬಸವರಾಜು, ಬಲರಾಮಯ್ಯ, ಶಿವಕುಮಾರ್, ಡಿ.ಎಸ್.ಶಿವಣ್ಣ ಮತ್ತು ಪುಟ್ಟರಾಮಯ್ಯ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-17-1189456179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.