ತುರುವೇಕೆರೆ: ಪೂರ್ವಜರು ಕಟ್ಟಿದ ಕೆರೆ– ಕಟ್ಟೆಗಳನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ದಂಡಿನಶಿವರ ಹೋಬಳಿ ಸಾರಿಗೆಹಳ್ಳಿ ಕೆರೆಯ ಹತ್ತಿರ ಕಾಮಗಾರಿಗೆ ಕಾವೇರಿ ನೀರಾವರಿ ನಿಗಮ ಎಡದಂಡೆ ವಿಭಾಗದಿಂದ ಮಂಜೂರಾದ ₹3.82 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನಡೆಸಿ ಮಾತನಾಡಿದರು.

ತಾಲ್ಲೂಕಿನ ಮಲ್ಲಾಘಟ್ಟ ಕೆರೆಯನ್ನು ₹15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅದೇ ರೀತಿ ಸಾರಿಗೆಹಳ್ಳಿ ಕೆರೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ನಾವು ಕೆರೆಯನ್ನು ಕಟ್ಟಲು ಸಾದ್ಯವಿಲ್ಲ. ಇರುವ ಕೆರೆಗಳನ್ನು ಉಳಿಸಲು ಪಣ ತೊಡಬೇಕಿದೆ. ಕೆರೆ ಏರಿ, ಕಾಲುವೆ, ಸೇತುವೆ ನಿರ್ಮಿಸಿ ರೈತರಿಗೆ ಅನುಕೂಲವಾಗುವ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.

ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಕುಮಾರ್ ಸ್ವಾಮಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಾಚೇನಹಳ್ಳಿ ಲೋಕೇಶ್ ಹಾಗೂ ಹಟ್ಟಿಹಳ್ಳಿರಮೇಶ್, ದೇವರಾಜು, ಜಯಕುಮಾರ್ ಸ್ವಾಮಿ, ಲೋಕೇಶ್ ಬಾಬು, ಹುಲ್ಲೇಕೆರೆ ಬಾಬು, ಪಿ.ಟಿ.ಗಂಗಾಧರ್, ಜ್ಞಾನೇಶ್, ಪಿಡಿಒ ಕುರುವಯ್ಯ, ಹೇಮಾವತಿ ಇಲಾಖೆ ಎಇಇ ಶಿವಕುಮಾರ್, ಎ.ಇ ಮಂಜುನಾಥ್, ಗುತ್ತಿಗೆದಾರ ಮಣಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-494377137

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.