ಸೋಮವಾರ, ಜೂಲೈ 6, 2020
27 °C

ತುಮಕೂರು | ಬಸ್ ಸಂಚಾರ: ಸಮಯ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗವು ‌ಜಿಲ್ಲಾ ವ್ಯಾಪ್ತಿಯಿಂದ ತಾಲ್ಲೂಕು ಕೇಂದ್ರಗಳಿಗೆ ಹಾಗೂ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ವಾಹನಗಳು ಸಂಚರಿಸುವ ಸಮಯ ನಿಗದಿಪಡಿಸಿದೆ.

ರಾತ್ರಿ 9ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬಸ್‌ಗಳು ಬೆಳಿಗ್ಗೆ 5ರಿಂದ ರಾತ್ರಿ 9ರ ವರೆಗೆ ಸಂಚರಿಸಲಿವೆ. ನಗರದಿಂದ ಬೆಂಗಳೂರಿಗೆ ಸಂಜೆ 7.30ಕ್ಕೆ ಕೊನೆ ಬಸ್ ಸಂಚರಿಸಲಿದೆ.

ಜಿಲ್ಲಾ ಕೇಂದ್ರದಿಂದ ತಿಪಟೂರಿಗೆ ಕೊನೆಯ ಬಸ್‌ ಸಂಜೆ 7.30, ಅಲ್ಲಿಂದ ತುಮಕೂರಿಗೆ ಸಂಜೆ 7ಕ್ಕೆ ಇರಲಿದೆ. ಕುಣಿಗಲ್‌ಗೆ ಸಂಜೆ 7.30 ಹಾಗೂ ಅಲ್ಲಿಂದ ಸಂಜೆ 7.15ಕ್ಕೆ, ತುರುವೇಕೆರೆಗೆ ಸಂಜೆ 6.30, ಅಲ್ಲಿಂದ ಸಂಜೆ 7ಕ್ಕೆ ಕೊನೆಯ ಬಸ್‌ ಸಂಚರಿಸಲಿದೆ.

ತುಮಕೂರಿನಿಂದ ಚಿಕ್ಕನಾಯಕನಹಳ್ಳಿಗೆ ಕೊನೆಯ ಬಸ್‌ ಸಂಜೆ 7.15, ಅಲ್ಲಿಂದ ಸಂಜೆ 7ಕ್ಕೆ, ಶಿರಾಕ್ಕೆ ರಾತ್ರಿ 8, ಅಲ್ಲಿಂದ 7.30ಕ್ಕೆ, ಪಾವಗಡಕ್ಕೆ ಸಂಜೆ 7, ಅಲ್ಲಿಂದ ಸಂಜೆ 6.15, ಕೊರಟಗೆರೆಗೆ ಸಂಜೆ 7.30, ಅಲ್ಲಿಂದ ಸಂಜೆ 7.30ಕ್ಕೆ ಕೊನೆ ಬಸ್‌ ಇರಲಿದೆ.

ಮಧುಗಿರಿಗೆ ಸಂಜೆ 7.15, ಅಲ್ಲಿಂದ ಸಂಜೆ 7.15, ಗುಬ್ಬಿಗೆ ರಾತ್ರಿ 8, ಅಲ್ಲಿಂದ ಸಂಜೆ 7.30 ಕೊನೆ ಬಸ್‌ ಸಂಚರಿಸಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು