ಕುಣಿಗಲ್: ತಾಲ್ಲೂಕಿನ ಕೊತ್ತಗೆರೆ ಹೋಬಳಿ ರಾಯಗೋನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಶಾಲೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ದಾಖಲಾಗಿದ್ದು, ಬುಧವಾರ ಆತನೂ ಗೈರಾದ ಕಾರಣ ಶಿಕ್ಷಕ ವೆಂಕಟೇಶ ಆತನಿಗಾಗಿ ಕಾದರು.

ಗೊಲ್ಲರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರು ಕೊಠಡಿ, ಶೌಚಾಲಯ, ಅಡುಗೆ ಕೋಣೆ, ಸುಂದರ ಉದ್ಯಾನವಿದ್ದರೂ ಪ್ರಸಕ್ತ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ದಾಖಲಾಗಿದ್ದಾನೆ. ಒಬ್ಬ ಶಿಕ್ಷಕ, ಒಬ್ಬರೇ ಅಡುಗೆ ಸಿಬ್ಬಂದಿ ಇದ್ದಾರೆ.

ರಾಯಗೋನಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಶಾಲೆ 2001ರಲ್ಲಿ ಪ್ರಾರಂಭವಾಗಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾದಂತೆ 2004ರಲ್ಲಿ ಶಾಸಕ ಎಸ್.ಪಿ. ಮುದ್ದಹನುಮೇಗೌಡರ ಅವಧಿಯಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, 2006ರಲ್ಲಿ ಶಾಸಕ ಎಚ್. ನಿಂಗಪ್ಪ ಅವಧಿಯಲ್ಲಿ ಪೂರ್ಣಗೊಂಡಿತ್ತು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೇವಲ ನಾಲ್ಕು ವಿದ್ಯಾರ್ಥಿಗಳಿದ್ದು, ಇಬ್ಬರು ಐದನೇ ತರಗತಿ ಉತೀರ್ಣರಾಗಿದ್ದಾರೆ. ಇಬ್ಬರು ಮಾತ್ರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿದಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿ ಗುಬ್ಬಿ ತಾಲ್ಲೂಕಿನ ಶಾಲೆಗೆ ಸೇರಿದ ಕಾರಣ ಒಬ್ಬ ವಿದ್ಯಾರ್ಥಿ ಉಳಿದಿದ್ದಾನೆ. (ಈ ವಿದ್ಯಾರ್ಥಿಯೂ ಅಡುಗೆ ಸಿಬ್ಬಂದಿ ಮಗ)

ಶಿಕ್ಷಕ ವೆಂಕಟೇಶ್ ಪ್ರತಿಕ್ರಿಯಿಸಿ, ಗೊಲ್ಲರಹಟ್ಟಿಯಲ್ಲಿ 55 ಮನೆಗಳಿವೆ. ಪ್ರತಿ ಮನೆಗೂ ಭೇಟಿ ನೀಡಿ ಮನವಿ ಮಾಡಿರುವೆ, ಪ್ರಯೋಜನವಾಗಿಲ್ಲ. ಒಬ್ಬನಿಗಾದರೂ ಪಾಠ ಮಾಡಲು ಕಾದಿರುವೆ, ಕಾರಣಾಂತರಗಳಿಂದ ಬಂದಿಲ್ಲ. ಒಬ್ಬನೇ ವಿದ್ಯಾರ್ಥಿಯನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವ ಪೋಷಕರು ತಮ್ಮ ಮಗುವನ್ನು ಸಮೀಪದ ಶಾಲೆಗೆ ಸೇರಿಸಲು ಸಿದ್ಧರಾಗಿದ್ದಾರೆ. ವರ್ಗಾವಣೆ ಪತ್ರ ಪಡೆದ ನಂತರ ಶಾಲೆ ಮುಚ್ಚಲಾಗುವುದು. ನಂತರ ತಮ್ಮ ಮೂಲ ಕರ್ತವ್ಯದ ಸ್ಥಳ ಗೊಟ್ಟಿಗೆರೆ ಶಾಲೆಗೆ ಹೋಗುವುದಾಗಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-17-1077330345

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.