ತಿಪಟೂರು: ಕಾರ್ಮಿಕರು ಶ್ರಮ ಜೀವಿಗಳಾಗಿದ್ದು ಪದಾಧಿಕಾರಿಗಳು ಅವರಿಂದ ವಿನಾಃ ಕಾರಣ ಹಣ ವಸೂಲಿ ಮಾಡಬೇಡಿ. ಕಾರ್ಮಿಕರ ಹಿತ ಕಾಯುವ ಕೆಲಸ ಸಂಘ ಮಾಡಬೇಕಿದೆ. ಸರ್ಕಾರದಿಂದ ಬರುವ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಹೇಳಿದರು.

ವಿನಾಯಕನಗರದ ರಾಘವೇಂದ್ರ ಕಾಲೋನಿಯಲ್ಲಿ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ತಾಲ್ಲೂಕು ಶಾಖೆಯ ನೂತನ ಕಚೇರಿ ಉದ್ಘಾಟಿಸಲಾಯಿತು.

ಕಲಾಕೃತಿ ಸಂಸ್ಥೆಯ ಕಾರ್ಯದರ್ಶಿ ತಿಪಟೂರು ಕೃಷ್ಣ ಮಾತನಾಡಿ, ಕಾರ್ಮಿಕ ಮಂಡಳಿಯಲ್ಲಿ ಸಾಕಷ್ಟು ಹಣವಿದ್ದರೂ ಅದು ಸದುಪಯೋಗವಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸಂಘಟನೆಗಳು ನಿಗಾವಹಿಸಿ ಹಣ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು. ತಾಲ್ಲೂಕಿನಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು ಅವರನ್ನು ನೋಂದಾಯಿಸಿ ಸವಲತ್ತು ತಲುಪುವಂತೆ ಮಾಡುವ ಕೆಲಸ ಸಂಘ ಮಾಡಬೇಕಿದೆ ಎಂದರು.

ರಾಜ್ಯಾಧ್ಯಕ್ಷ ಸತೀಶ್ ಶಿವಮೊಗ್ಗ ಮಾತನಾಡಿ, ಸಂಘವೂ ಇದೂವರೆಗೂ ಸಾಕಷ್ಟು ಹೋರಾಟ ಮಾಡಿ, ಕಾರ್ಮಿಕರ ಹಿತಕಾಯುವ ಕೆಲಸ ಮಾಡಿದೆ. ಮುಂದೆ ಮಂಡಳಿಯಲ್ಲಿ ನಾನಾ ಬೇಡಿಕೆಗಾಗಿ ಹೋರಾಟ ಮಾಡಲಿದೆ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಸತೀಶ್.ಎಚ್.ದೇವು, ರಾಜ್ಯ ಕಾರ್ಯದರ್ಶಿ ಶಿವರಾಜ್ ತುಮಕೂರು, ರಾಮಲಿಂಗಯ್ಯ, ಚಂದ್ರನಾಯಕ್, ದಾದಾ ಪೀರ್, ಶಂಕರ್, ಶಿವಪ್ಪ ಧನಂಜಯ್.ಟಿ.ಕೆ, ಅಶೋಕ್ರಾಜ್.ಟಿ.ವಿ, ಬಿ.ಜಿ ಪ್ರತಾಪ್, ನಾಗರಾಜ್, ತಿರುಮಲೇಶ್, ವೆಂಕಟೇಶ್.ಎ.ಕೆ, ಚಂದ್ರು ಕುಮಾರ್ ಜೆ, ನಾಗರಾಜು.ಎಂ.ಡಿ, ಶೇಖರ್.ಟಿ.ಕೆ, ಆನಂದ್, ವಸಂತ್, ತೀರ್ಥ ಪ್ರಸಾದ್, ಶಿವಕುಮಾರ್ ಮಹಲಿಂಗಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-18-325389684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.