ಮಳೆ ಬಾರದೆ ರಾಗಿ ಸೇರಿದಂತೆ ಇತರ ಬೆಳೆ ಒಣಗುತ್ತಿವೆ. ಆದರೆ, ಕೃಷಿ ಇಲಾಖೆ ವತಿಯಿಂದ ರೈತರು ಅರ್ಜಿ ಹಾಕಿ ತುರ್ತಾಗಿ ತುಂತುರು ನೀರಾವರಿ ಪರಿಕರ ಪಡೆಯಬಹುದಾಗಿದೆ. ಕೊಳವೆಬಾವಿ ಹಾಗೂ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಿಸಿದ್ದರೆ ಬೆಳೆಗಳಿಗೆ ನೀರುಣಿಸಿ ಜೀವ ನೀಡಬಹುದು. ತುಂತುರು ನೀರಾವರಿ ಘಟಕದ ಮೂಲಕ ನೀರು ನೀಡಿದರೆ ಮುಂದಿನ ಮಳೆ ಬರುವವರೆಗೆ ಒಣಗದೆ ಬೆಳೆ ಕಾಪಾಡಬಹುದು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಶಿವರಾಜ್‌ಕುಮಾರ್,