ಹಿರೀಸಾವೆ: ‘ಕೆರೆಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವುಗಳನ್ನು ಪುನಶ್ಚೇತನ ಮಾಡುವುದರಿಂದ ಅಂತರ್ಜಲ ಹೆಚ್ಚಲಿದೆ. ಮಾನವ, ಪ್ರಾಣಿ, ಪಕ್ಷಿಗಳಿಗೆ ನೀರಿನ ಅಭಾವವು ಇರುವುದಿಲ್ಲ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿಯ ಬೆಳಗೀಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕು ಶಾಖೆ ವತಿಯಿಂದ ‘ನಮ್ಮೂರು ನಮ್ಮ ಕೆರೆ’ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆರೆಗಳು ಉತ್ತಮ ಸ್ಥಿತಿಯಲ್ಲಿ ಇದ್ದು, ನೀರು ತುಂಬಿದರೆ, ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗುತ್ತದೆ. ಕೆರೆಗಳಲ್ಲಿ ಹೂಳ ಅನ್ನು ವೈಜ್ಞಾನಿಕವಾಗಿ ಎತ್ತಬೇಕು. ಆದರೆ ನಮ್ಮ ಭಾಗದಲ್ಲಿ ಆಳವಾಗಿ ತೆಗೆಯುತ್ತಿರುವುದು ಸರಿಯಲ್ಲ. ಕೆರೆಯ ಹೂಳಿನ ಮೇಲ್ಭಾಗದ ಮೂರು ಅಡಿಯಷ್ಟು ಮಣ್ಣು ಮಾತ್ರ ತೆಂಗಿನ ಮರಗಳಿಗೆ ಮತ್ತು ಕೃಷಿಗೆ ಭೂಮಿಗೆ ಅನುಕೂಲರವಾಗಿದೆ. ಹೆಚ್ಚು ಆಳಕ್ಕೆ ಮಣ್ಣು ತೆಗೆಯುವುದರಿಂದ ನೀರು ಬೇಗ ಬಸಿದು ಹೋಗುತ್ತದೆ’ ಎಂದರು.

ತುಮಕೂರು ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ‘ಸುಮಾರು ₹13 ಲಕ್ಷದಲ್ಲಿ ಈ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಉತ್ತಮವಾದ ಕೆಲಸ ಮಾಡಲು ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಿ’ ಎಂದರು. ಯೋಜನಾಧಿಕಾರಿ ಕುಸುಮಧರ್ ಕಾಮಗಾರಿ ಮತ್ತು ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನರಸಿಂಹೇಗೌಡ, ಉಪಾಧ್ಯಕ್ಷ ವೇಣುಗೋಪಾಲ್, ಹಾಸನ ಜಿಲ್ಲಾ ಜನಜಾಗೃತಿ ವೇದಿಕೆಯ ತೋಟಿ ಜಯರಾಮ್, ಇಂದ್ರಕುಮಾರ್, ಹೊಸಹಳ್ಳಿ ಮಲ್ಲೇಗೌಡ, ಪುರದ ಶಿವಶಂಕರ್, ಗ್ರಾಮ ಪಂಚಾಯಿತಿಯ ಪಿಡಿಒ ಸತೀಶ್, ಕಾರ್ಯದರ್ಶಿ ರಾಘವೇಂದ್ರ, ಗ್ರಾಮದ ಮುಖಂಡರಾದ ಪುಟ್ಟಸ್ವಾಮಿ, ಸುಂದರ್, ತೋಟಿ ಮಂಜು, ಮೇಲ್ವಿಚಾರಕ ಹರೀಶ್, ಸೇವಾ ಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-36-189568974

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.