ತುರುವೇಕೆರೆ: ತಾಲ್ಲೂಕಿನ ಮಾದಪಟ್ಟಣದ ಗ್ರಾಮದೇವತೆ ಕೆಂಪಮ್ಮದೇವಿ ಜಾತ್ರೆ ಮೂರು ದಿನ ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ರಾತ್ರಿ ಗ್ರಾಮದೇವತೆ ಕೆಂಪಮ್ಮ ದೇವಿ ಜೊತೆ ಬಾಲಕಿಯರು ಸೇರಿ ನೂರಾರು ಮಹಿಳೆಯರು ಆರತಿ ಹೊತ್ತು ಸಾಗಿದರು. ಸೋಮನ ಕುಣಿತ, ಡೊಳ್ಳು ಕುಣಿತ, ಚಿಟ್ಟಿ ಮೇಳ ಸೇರಿದಂತೆ ಅನೇಕ ಜನಪದ ಕಲಾಪ್ರಕಾರ ಹಾಗೂ ಮದ್ದು ಗುಂಡುಗಳ ಚಮಾತ್ಕಾರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆಡೆಯಿತು.

ಶನಿವಾರ ಸಂಜೆ ಬಾಯಿ ಬೀಗ ಉತ್ಸವ ನಡೆಯಿತು. ಬಸವನ ಮೇಲೆ ನಗಾರಿವಾದ್ಯ, ದೊಳ್ಳುವಾದ್ಯಗಳು ರಸ್ತೆಯಲ್ಲಿ ಸಾಗಿತು. ಭಾನುವಾರ ಬೆಳಗ್ಗೆ ಕೆಂಪಮ್ಮದೇವಿಗೆ ಮತ್ತೆ ಮೂಲ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಪ್ರವೇಶ ಮಾಡಲಾಗುತ್ತದೆ.

ಭಕ್ತರು ತಮ್ಮ ಹರಕೆ ಹಾಗೂ ಕುರುಹುಗಳನ್ನು ಕೇಳುತ್ತಾರೆ. ದೇವಿಗೆ ಹಲಸಿನ ಹಣ್ಣು, ಬಾಳೆಹಣ್ಣು ಮಾಡಿದ ಫಲಹಾರವನ್ನು ದೇವಿಗೆ, ಸೋಮಗಳಿಗೆ ಮಣೇವು ಹಾಕಲಾಯಿತು.

ದೇವಾಲಯದ ಗುಡಿಗೌಡರಾದ ಚಂದ್ರಕುಮಾರ್, ಶಿವಬಸವಯ್ಯ, ಸುದೇಶ್ ಕುಮಾರ್, ಮೋಹನ್ ಕುಮಾರ್, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-1380930962

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.