ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಕುರಿಗಾಹಿ ಡಿ.ಜಿ ಕುಮಾರ್ ಮೇಲೆ ಚಿರತೆಯೊಂದು ದಾಳಿಗೆ ಯತ್ನಿಸಿದ್ದು, ಕುಮಾರ್ ಅವರು ಚಿರತೆ ಮುಖಕ್ಕೆ ಟವಲ್ ಎಸೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೋಟದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ, ಚಿರತೆ ಏಕಾಏಕಿ ಕುರಿಗಳ ಮೇಲೆ ಎರಗಿದೆ. ಎರಡು ಕುರಿಗಳ ಕುತ್ತಿಗೆ ಹಿಡಿದು ರಕ್ತ ಹೀರಿ, ಮತ್ತೊಂದು ಕುರಿಯನ್ನು ಅರ್ಧಂಬರ್ಧ ತಿಂದಿದೆ. ಇದನ್ನು ಕಂಡ ಕುಮಾರ್ ಕುರಿಗಳನ್ನು ಬಿಡಿಸಲು ಯತ್ನಿಸಿದಾಗ ಚಿರತೆ ಅವರ ಮೈ ಮೇಲೆ ದಾಳಿ ಮಾಡಿ ಕಿವಿ, ಕುತ್ತಿಗೆಗೆ ಪರಚಿ ಗಾಯ ಮಾಡಿದೆ. ಕುಮಾರ್ ಸಮಯಪ್ರಜ್ಞೆಯಿಂದ ಮೈ ಮೇಲಿದ್ದ ಟವಲ್ ಅನ್ನು ಚಿರತೆ ಮೇಲೆ ಎಸೆದು ಪಾರಾಗಿದ್ದಾರೆ. ಚಿರತೆ ಮೂರನೇ ಕುರಿಯ ರಕ್ತ ಹೀರಿ ಪರಾರಿಯಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಚಿರತೆ ಸೆರೆಗೆ ಬೋನ್ ಇಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-17-144690404

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.