ತುಮಕೂರು: ಮಹಾವೀರ ಜಯಂತಿ ಪ್ರಯುಕ್ತ ದಿಗಂಬರ ಜೈನ ಸಮಾಜದ ವತಿಯಿಂದ ನಗರದಲ್ಲಿ ಮಂಗಳವಾರ ಮಹಾವೀರ ಪುತ್ಥಳಿ ಮೆರವಣಿಗೆ ನಡೆಯಿತು.

ಚಿಕ್ಕಪೇಟೆಯಲ್ಲಿರುವ ಜೈನ ದೇವಾಲಯದ ಬಳಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಎಂ.ಜಿ.ರಸ್ತೆ ಮೂಲಕ ಬಿ.ಎಚ್.ರಸ್ತೆಯಲ್ಲಿ ಸಾಗಿತು. ಜೈನ ಭವನದ ಬಳಿ ಮೆರವಣಿಗೆ ಕೊನೆಯಾಯಿತು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಜೈನ ಸಮುದಾಯದ ಮುಖಂಡ ಸುರೇಶ್ ಕುಮಾರ್ ಮಾತನಾಡಿ, ‘ಜಗತ್ತು ಮಹಾವೀರರ ಅಹಿಂಸಾ ಮಾರ್ಗ ಪಾಲಿಸಬೇಕು. ಎಲ್ಲರೂ ಶಾಂತಿಯಿಂದ ಬದುಕು ನಡೆಸಬೇಕು ಎಂಬುವುದು ಮಹಾವೀರರ ಮೂಲ ಸಂದೇಶ. ಇದನ್ನು ನಾವು ಚಾಚೂ ತಪ್ಪದೇ ಪಾಲಿಸಬೇಕು’ ಎಂದರು.

ಜೈನ ಸಮುದಾಯದ ಮುಖಂಡರಾದ ಟಿ.ಡಿ.ಬಾಹುಬಲಿ ಬಾಬು, ಸುಭೋದಕುಮಾರ್ ಜೈನ್, ಟಿ.ಜೆ.ನಾಗರಾಜು, ವಿನಯ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-17-921068145

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.