ಬೆಂಗಳೂರು: ಜರ್ಮನಿ ಮೂಲದ ಮಾನ್+ಹುಮ್ಮೆಲ್ ಕಂಪನಿಯು ತುಮಕೂರಿನಲ್ಲಿ ಅತ್ಯಾಧುನಿಕ ‘ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯ ಕೇಂದ್ರ’ ಆರಂಭಿಸಲಿದೆ.

ಕಂಪನಿಯು ವಾಹನಗಳು, ಕೈಗಾರಿಕೆಗಳಲ್ಲಿ ಬಳಕೆಯಾಗುವ ಶುದ್ಧೀಕರಣ ಉತ್ಪನ್ನಗಳನ್ನು ತಯಾರಿಸುತ್ತದೆ. ತುಮಕೂರಿನಲ್ಲಿ ಗುರುವಾರ ಆರಂಭವಾಗಲಿರುವ ಕೇಂದ್ರವು ಕಂಪನಿಯ ಪಾಲಿಗೆ ಜರ್ಮನಿಯ ಹೊರಗಿನ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯ ಕೇಂದ್ರ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸುದೀಶ್ ಕರಿಬಿಂಗಲ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದರು.

ಕಂಪನಿಯು ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಇದಕ್ಕಾಗಿ ₹100 ಕೋಟಿ ಹೂಡಿಕೆ ಮಾಡಲಿದೆ. ಎಂಜಿನಿಯರಿಂಗ್, ನಾವೀನ್ಯ ಮತ್ತು ಸುಧಾರಿತ ಫಿಲ್ಟರೇಶನ್ ತಂತ್ರಜ್ಞಾನಗಳಿಗೆ ಭಾರತವನ್ನು ಪ್ರಮುಖ ಕೇಂದ್ರವನ್ನಾಗಿ ಮಾಡಲಿದೆ. ಸುಧಾರಿತ ಸಂಶೋಧನಾ ಪ್ರಯೋಗಾಲಯಗಳು,ಪರೀಕ್ಷಾ ಮೂಲಸೌಕರ್ಯಗಳು, ಡಿಜಿಟಲ್ ಎಂಜಿನಿಯರಿಂಗ್ ಮತ್ತು ದತ್ತಾಂಶ ವಿಶ್ಲೇಷಣೆಯು ತುಮಕೂರಿನ ಈ ಒಂದೇ ಕೇಂದ್ರದಲ್ಲಿ ದೊರೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.