ತುಮಕೂರು: ನಗರ ಹೊರವಲಯದ ಮರಳೂರು ಕೆರೆಯನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದರೂ ನೀರು ಮಾತ್ರ ಶುದ್ಧಗೊಳ್ಳುತ್ತಿಲ್ಲ. ಜನ ನೀರಿಗೆ ತ್ಯಾಜ್ಯ ಸುರಿಯುವುದು ನಿಲ್ಲಿಸುತ್ತಿಲ್ಲ. ಕಲುಷಿತ ನೀರು ಗಬ್ಬು ವಾಸನೆ ಬೀರುತ್ತಿದೆ.

ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಂಗ್ರಹಕ್ಕೆ ಮೀಸಲಿಡಲು ಉದ್ದೇಶಿಸಿರುವ ಮರಳೂರು ಕೆರೆ 100 ಹೆಕ್ಟೇರ್ ವಿಸ್ತೀರ್ಣವಿದೆ. 30 ಎಂಸಿಎಫ್ಟಿ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಕೆರೆಯ ಸುತ್ತಮುತ್ತ ಒತ್ತುವರಿ ನಡೆದಿದ್ದು, ಸರ್ವೆ ಮಾಡಿಸಿ ಭದ್ರಪಡಿಸಿಲ್ಲ. ಒತ್ತುವರಿ ತೆರವು ಕಾರ್ಯವೂ ಆಗುತ್ತಿಲ್ಲ.

ಮಾಂಸದಂಗಡಿ, ಮಳಿಗೆ ಮತ್ತು ವೈದ್ಯಕೀಯ ತ್ಯಾಜ್ಯ, ಮನೆಯ ಹಳೆಯ ಹಾಸಿಗೆ– ದಿಂಬು ಎಲ್ಲವೂ ಕೆರೆಯ ಒಡಲು ಸೇರುತ್ತಿವೆ. ದಡದಲ್ಲಿ ನಿಂತು ಕೆರೆ ವೀಕ್ಷಿಸಲು ಸಾಧ್ಯವಾಗದಷ್ಟು ಕೆಟ್ಟ ವಾಸನೆ ನಾರುತ್ತಿದೆ. ರಸ್ತೆಯಲ್ಲಿ ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಪ್ರಮುಖ ಪ್ರವಾಸಿ ತಾಣ ಅಮಾನಿಕೆರೆ, ಮರಳೂರು ಕೆರೆ ಒಳಗೊಂಡಂತೆ ನಗರದ ಬಹುತೇಕ ಕೆರೆಗಳು ಕಲುಷಿತ ನೀರು ಸಂಗ್ರಹದ ತಾಣಗಳಾಗಿ ಬದಲಾಗಿವೆ. ಅಮಾನಿಕೆರೆಗೆ ಚರಂಡಿ ನೀರು ಸೇರುತ್ತಿದೆ. ಇದನ್ನು ತಡೆಯುವ ಜಿಲ್ಲಾಧಿಕಾರಿಯೂ ಈಚೆಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆರೆಗಳ ಬಳಿ ಕಸದ ರಾಶಿಗಳು ಕಾಣ ಸಿಗುತ್ತವೆ. ಕಸ ತಂದು ಸುರಿದು ಬೆಂಕಿ ಹಚ್ಚಲಾಗುತ್ತಿದೆ. ಚರಂಡಿ ಮೂಲಕ ಹರಿಯಬೇಕಿದ್ದ ತ್ಯಾಜ್ಯ ನೀರು ರಾಜಕಾಲುವೆ ಮೂಲಕ ಕೆರೆ ಸೇರುತ್ತಿದೆ. ಇದು ಜಲಚರಗಳ ಜೀವಕ್ಕೆ ಕಂಟಕವಾಗಿದೆ.

ಮರಳೂರು ಕೆರೆಗೆ ಚರಂಡಿ ನೀರು ಹರಿಯುವುದನ್ನು ತಡೆಯುವ ಕೆಲಸವೂ ಸಮರ್ಪಕವಾಗಿ ಆಗುತ್ತಿಲ್ಲ. ‘ಕಲುಷಿತ ನೀರು ಹರಿಯದಂತೆ ಕ್ರಮ ವಹಿಸಬೇಕು’ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅದು ಪಾಲನೆಯಾಗುತ್ತಿಲ್ಲ. ‘ತ್ಯಾಜ್ಯ ನೀರು ಹರಿಯುವುದನ್ನು ತಡೆಯಲಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಅದು ಸಾಧ್ಯವಾಗಿಲ್ಲ. ಕೆರೆ ದಡದಲ್ಲಿ ಕಸ ಸುರಿದರೆ ದಂಡ ಹಾಕಲಾಗುವುದು ಎಂದು ನಾಮಫಲಕ ಅಳವಡಿಸಲಷ್ಟೇ ಪಾಲಿಕೆ ಸೀಮಿತವಾಗಿದೆ.

ರಿಂಗ್ ರಸ್ತೆಯ ವಾಲ್ಮೀಕಿ ವೃತ್ತದಿಂದ ಹಿಡಿದು ಕುಣಿಗಲ್ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಕಸ ಸುರಿಯಲಾಗಿದೆ. ಮನುಷ್ಯ ಮತ್ತು ಪ್ರಾಣಿಗಳ ಉಸಿರಾಟಕ್ಕೆ ಅಡ್ಡಿಯುಂಟು ಮಾಡುವ ವೈದ್ಯಕೀಯ ತ್ಯಾಜ್ಯ ಸುರಿದು ಸುಡಲಾಗುತ್ತಿದೆ. ಇದು ವಾಯು ಮಾಲಿನ್ಯಕ್ಕೆ ಕಾರಣವಾಗುವುದರ ಜತೆಗೆ ಪ್ರಾಣಿ, ಪಕ್ಷಿಗಳ ಪ್ರಾಣಕ್ಕೆ ಕುತ್ತು ತರುತ್ತಿದೆ.

ಕೆರೆಗೆ ಎತ್ತಿನಹೊಳೆ ನೀರು ತುಂಬಿಸಿ, ನಗರದ ಜನತೆಗೆ ಕುಡಿಯಲು ಪೂರೈಸುವ ಕಾಮಗಾರಿ ಚಾಲನೆಯಲ್ಲಿದೆ. ಆದರೆ, ಈಗ ಸಂಗ್ರಹವಾಗಿರುವ ನೀರು ಬಳಕೆಗೆ ಯೋಗ್ಯವೇ ಎಂಬ ಪರೀಕ್ಷೆ ಇದುವರೆಗೆ ನಡೆದಿಲ್ಲ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಅಧಿಕಾರಿಗಳು ಕೆರೆ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಲ ಕಾಲಕ್ಕೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ.

ಒಂದು ರೀತಿಯಲ್ಲಿ ನಗರದ ಕಸ ಹಾಕುವ ಸ್ಥಳವಾಗಿ ಪರಿವರ್ತನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಂಗ್ರಹಿಸಬೇಕಾದರೆ, ಈಗಿನಿಂದಲೇ ಕೆರೆ ಕಲುಷಿತವಾಗುವುದನ್ನು ತಡೆಯಬೇಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-17-1274248927

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.