ತುರುವೇಕೆರೆ: ಸರ್ಕಾರ ಲಿಂಕ್ ಕೆನಾಲ್ ಕಾಮಗಾರಿ ಮೂಲಕ ಜಿಲ್ಲೆಯ ರೈತರ ಪಾಲಿನ ಹೇಮಾವತಿ ನೀರನ್ನು ಕಸಿದುಕೊಳ್ಳದೆ ಮೇಕೆದಾಟು ಯೋಜನೆಯನ್ನು ಮುನ್ನೆಲೆಗೆ ತರಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.

ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ರಂಗನಾಥ ಸ್ವಾಮಿ ಬೆಟ್ಟದಲ್ಲಿ ತುಮುಲ್, ಜಿಲ್ಲಾ ರೈತರ ಮತ್ತು ಎಂ.ಪಿ.ಸಿ.ಎಸ್ ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ, ತುಮಕೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಆದಿಚುಂಚನಗಿರಿ ಆಸ್ಪತ್ರೆ, ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ, ಅರೇಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಡೆದ ಆರೋಗ್ಯ ತಪಸಣಾ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಹೇಮೆ ನೀರನ್ನು ಕುಣಿಗಲ್ಗೆ ತೆಗೆದುಕೊಂಡು ಹೋಗುವುದಾಗಿ ಹೇಳಿ ಮಾಗಡಿ, ರಾಮನಗರಕ್ಕೆ ಹರಿಸುವ ಹುನ್ನಾರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆಡೆಸುತ್ತಿದ್ದಾರೆ. ಮೇಕೆದಾಟು ಯೋಜನೆ ಕೈಗೆತ್ತಿಕೊಂಡು ರಾಮನಗರ, ಮಾಗಡಿ ಸೇರಿದಂತೆ ಬೆಂಗಳೂರಿಗೂ ನೀರು ಕೊಡಲು ಅಭ್ಯಂತರವಿಲ್ಲ. ಆದರೆ ಜಿಲ್ಲೆಯ ರೈತರ ಮರಣ ಶಾಸನವಾಗಿರುವ ಲಿಂಕ್ ಕೆನಾಲ್ ಕಾಮಗಾರಿಗೆ ಮುಂದಾಗಿರುವುದು ಸರ್ಕಾರದ ರೈತ ವಿರೋಧಿ ನಡೆ ಎಂದು ಕುಟುಕಿದರು.

ತುಮಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮಾತನಾಡಿ, ತುಮುಲ್ ಲಾಭದಲ್ಲಿ ಶೇ 50ರಷ್ಟು ರೈತರಿಗೆ ನೀಡಲಾಗುತ್ತಿದೆ. ರೈತರ ಸಹಕಾರದಿಂದ ತುಮಲ್ ಲಾಭದಾಯಕವಾಗಿ ನೆಡೆಯುತ್ತಿದ್ದು ರೈತರು ಗುಣಮಟ್ಟದ ಹಾಲು ನೀಡಬೇಕು. ಸಿ.ವಿ.ಮಹಾಲಿಂಗಯ್ಯ ಐದು ವರ್ಷ ತುಮುಲ್ ಅಧ್ಯಕ್ಷರಾಗಿ ಹಲವು ರೈತಪರ ಕೆಲಸ ಮಾಡಿದ್ದಾರೆ. ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಡಲು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ ನಿಗಮದ ನಿರ್ದೇಶಕ ಸಿ.ವಿ.ಮಹಾಲಿಂಗಯ್ಯ ಮಾತನಾಡಿದರು. ಟಿಎಪಿಎಂಎಸ್ ಅಧ್ಯಕ್ಷ ರಮೇಶ್ ಗೌಡ, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ತ್ಯಾಗರಾಜು ಹಾಗೂ ಕೊಂಡಜ್ಜಿವಿಶ್ವನಾಥ್, ಪುಟ್ಟರಂಗಪ್ಪ, ರಾಮೇಗೌಡ, ಸ್ವಾಮಿ, ತುಮುಲ್ ವ್ಯವಸ್ಥಾಪಕ ಜಿ.ಶ್ರೀನಿವಾಸನ್, ಶಿವಪ್ರಸಾದ್, ಬಿ.ಶ್ರೀನಿವಾಸ್, ಚಂದ್ರಶೇಖರ ಕೇದನೂರಿ, ಅರೇಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಬಿ.ಜಗದೀಶ್, ಉಪ ವ್ಯವಸ್ಥಾಪಕ ದೀಕ್ಷಿತ್, ತಾಲ್ಲೂಕು ಮುಖ್ಯಸ್ಥ ಮಂಜುನಾಥ್, ವಿಸ್ತರಣಾಧಿಕಾರಿ ದಿವಾಕರ್, ಕಿರಣ್ ಕುಮಾರ್, ಸುನಿಲ್, ಹಾಲು ಉತ್ಪಾದಕರ ಸಹಕಾರ ಸಂಘ, ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-17-1247153411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.