ಕುಣಿಗಲ್: ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳು 35 ವರ್ಷಗಳಿಂದ ತುಮುಲ್ ನಿರ್ದೇಶಕ ಡಿ.ಕೃಷ್ಣಕಮಾರ್ ಕಪಿಮುಷ್ಠಿಯಲ್ಲಿನಿಯಮಗಳನ್ನು ಗಾಳಿಗೆ ತೂರಿ ಅವ್ಯವಹಾರ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಕಪಿಮುಷ್ಠಿಯಿಂದ ಮುಕ್ತವಾಗಲಿದೆ ಎಂದು ದೊಡ್ಡಕಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಮಾಸ್ತಿ ಕರಿಗೌಡ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಕಲ್ಲಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ 20 ವರ್ಷದಿಂದ ಮುಕ್ತ ಚುನಾವಣೆಗೆ ಅವಕಾಶವಿಲ್ಲದ ಕಾರಣ ಕೃಷ್ಣಕುಮಾರ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ. 30ರಂದು ಪ್ರಥಮ ಬಾರಿಗೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ 12 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿರುವುದು ದಾಖಲೆ ಎಂದರು.

ಸತತವಾಗಿ ತುಮುಲ್ ನಿರ್ದೇಶಕರಾಗಿರುವ ಡಿ.ಕೃಷ್ಣಕುಮಾರ್ ತಾಲ್ಲೂಕಿನ ಡೇರಿ ರಾಜಕಾರಣದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಕೆಲ ಸಂಘದಲ್ಲಿ ಒಂದೇ ಕುಟುಂಬದ ವ್ಯಕ್ತಿಗಳು ನಿರ್ದೇಶಕರಾಗಿದ್ದಾರೆ, ಕಾರ್ಯದರ್ಶಿಗಳಾಗಿದ್ದಾರೆ ಮತ್ತು ಮಾಪಕರಾಗಿದ್ದಾರೆ. ಕೆಲ ಸಂಘದ ಕಾರ್ಯದರ್ಶಿಗಳಿಗೆ 65 ವರ್ಷಗಳ ನಂತರವೂ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ನೀಡಿದ್ದಾರೆ. ಚಾಕೇನಹಳ್ಳಿ ಶಿಥಿಲೀಕರಣ ಘಟಕದಲ್ಲಿ ಪ್ರತಿಹಂತದಲ್ಲೂ ಅವ್ಯವಹಾರವಾಗಿದ್ದು ಸಮಗ್ರ ತನಿಖೆಗೆ ಆಗ್ರಹಿಸಿ, ಸಹಕಾರಿ ಕ್ಷೇತ್ರದಲ್ಲಿ ನ್ಯಾಯ ಸಮ್ಮತ ಚುನಾವಣೆಗೆ ಆಗ್ರಹಿಸಿದರು.

ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಚನ್ನೆಗೌಡ, ಪದ್ಮಾ, ರಾಮಕೃಷ್ಣಯ್ಯ, ರಾಮಣ್ಣ, ಶ್ರೀನಿವಾಸ್, ಶಿವಲಿಂಗಯ್ಯ, ಸಾಕಮ್ಮ, ಸುರೇಶ್, ಜವರೆಗೌಡ, ಕೃಷ್ಣ, ತಿಮ್ಮಮ್ಮ, ಬೇಗೂರು ಮೂರ್ತಿ ಮೋಹನ್ ಹಾಜರಿದ್ದರು.

ಕುಣಿಗಲ್ ತಾಲ್ಲೂಕು ದೊಡ್ಡಕಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 20 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ನಿರ್ದೇಶಕರು ಪ್ರಥಮ ಬಾರಿಗೆ ಆಯ್ಕೆಯಾಗಿದ್ದಾರೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-17-1981952540

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.