ತುಮಕೂರು: ಜಿಲ್ಲೆಯ ಜನರ ಸಮಸ್ಯೆ ನಿವಾರಣೆ ಮಾಡದೆ, ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನಹರಿಸದೆ ಸಚಿವ ಜಿ.ಪರಮೇಶ್ವರ ಅವರು ತುಮಕೂರು ಜಿಲ್ಲೆಯನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು ನಾಮಕರಣ ಮಾಡಲು ಮುಂದಾಗಿರುವುದಕ್ಕೆ ಬಿಜೆಪಿ ಜಿಲ್ಲಾ ಘಟಕ ವಿರೋಧ ವ್ಯಕ್ತಪಡಿಸಿದೆ.

‘ತುಮಕೂರು’ ಹೆಸರಿಗೆ ಏನಾಗಿದೆ? ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಾಯಿಸಿದರೆ ಜಿಲ್ಲೆಯ ಜನರಿಗೆ ಯಾವ ಸೌಭಾಗ್ಯ ಸಿಗಲಿದೆ ಎಂಬುದನ್ನು ಸಚಿವರು ಜನರಿಗೆ ತಿಳಿಸಬೇಕು. ಇದು ಜಿಲ್ಲೆ ಅಸ್ಮಿತೆ ಹಾಳು ಮಾಡುವ ಪ್ರಯತ್ನ. ಹೆಸರು ಬದಲಾವಣೆ ಮಾಡುವ ಮೊದಲು ಅಲ್ಲಿನ ಜನರ ಅಭಿಪ್ರಾಯ, ಭಾವನೆ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ ಒತ್ತಾಯಿಸಿದ್ದಾರೆ.

ಜಿಲ್ಲೆಗೆ ಅದರದ್ದೇ ಆದ ಇತಿಹಾಸ, ಸಾಂಸ್ಕೃತಿಕ, ಧಾರ್ಮಿಕ ಪರಂಪರೆ ಇದೆ. ಅಂತಹ ಹೆಸರು ಉಳಿಸಬೇಕಾದ ಸಚಿವರು, ಹೆಸರು ಕೆಡಿಸುವ ಕೆಲಸ ಮಾಡಲು ಹೊರಟಿದ್ದಾರೆ. ಹೆಸರು ಬದಲಾಯಿಸಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ ಮಾಡಿಕೊಡುವ, ತಮ್ಮ ಶಿಕ್ಷಣ ಸಂಸ್ಥೆಗಳ ಕಿಮ್ಮತ್ತು ಹೆಚ್ಚಿಸಿಕೊಳ್ಳುವ ಉದ್ದೇಶ ಇರಬಹುದೇ ಹೊರತು, ಇದರಿಂದ ಜಿಲ್ಲೆ ಜನರಿಗೆ, ಬೆಳವಣಿಗೆಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ರಸ್ತೆಗಳು ಗುಂಡಿ ಬಿದ್ದು ಅಧ್ವಾನದ ಸ್ಥಿತಿಯಲ್ಲಿವೆ. ಕುಡಿಯುವ ನೀರಿಗೆ ಹಾಹಾಕಾರವಿದೆ. ಶೈಕ್ಷಣಿಕ, ಆರೋಗ್ಯ ಸೇವೆಗಳು ಸಾಮಾನ್ಯ ಜನರಿಗೆ ಎಟುಕದಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರ ತುಂಬಿದೆ. ಜನರ ಸಮಸ್ಯೆ ಪರಿಹರಿಸಲು ಮೊದಲು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-17-1420724494

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.