ತುಮಕೂರು: ನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದು ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಪಂದ್ಯಾವಳಿಯ ಯಶಸ್ವಿಗೆ ಶ್ರಮಿಸಿದ ಮ್ಯಾಚ್ ರೆಫರಿಗಳಿಗೆ ಈವರೆಗೂ ಗೌರವಧನ ನೀಡಿಲ್ಲ.

ಕರ್ನಾಟಕ ಒಲಿಂಪಿಕ್ ಸಂಸ್ಥೆ, ಜಿಲ್ಲಾ ಆಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಜನವರಿ 16ರಿಂದ 22ರ ವರೆಗೆ ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾ ಸಂಕೀರ್ಣ, ವಿಶ್ವವಿದ್ಯಾಲಯ ಆವರಣ, ಜೂನಿಯರ್ ಕಾಲೇಜು ಮೈದಾನ, ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆವರಣದಲ್ಲಿ ಪಂದ್ಯಗಳು ನಡೆದಿದ್ದವು.

ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ಬಾಲ್, ಕೆನೋಯಿಂಗ್ ಮತ್ತು ಕಯಾಕಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್, ಕಬ್ಬಡ್ಡಿ, ಕೊಕ್ಕೊ ಸೇರಿದಂತೆ 22 ಕ್ರೀಡೆಗಳಿಗೆ ನಗರ ವೇದಿಕೆ ಕಲ್ಪಿಸಿತ್ತು. 1,900 ಪುರುಷ, 1,700 ಮಹಿಳಾ ಕ್ರೀಡಾಪಟುಗಳು, 500 ಮಂದಿ ಕ್ರೀಡಾ ತಾಂತ್ರಿಕ ಸಿಬ್ಬಂದಿ ಸೇರಿ ಸುಮಾರು 4 ಸಾವಿರ ಮಂದಿ ಭಾಗವಹಿಸಿದ್ದರು.

ಅಥ್ಲೆಟಿಕ್ಸ್ನಲ್ಲಿ 30 ರೆಫರಿಗಳು, ಕಬಡ್ಡಿಗೆ 20, ವಾಲಿಬಾಲ್ ಸ್ಪರ್ಧೆಯಲ್ಲಿ 12 ಒಟ್ಟು 120 ಮಂದಿ ಮ್ಯಾಚ್ ರೆಫರಿಗಳು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಾರ್ಯ ನಿರ್ವಹಿಸಿದ್ದರು. ತುಮಕೂರು ಮತ್ತು ರಾಜ್ಯದ ಎಲ್ಲ ಜಿಲ್ಲೆಗಳ ಕ್ರೀಡಾ ತರಬೇತುದಾರರನ್ನು ರೆಫರಿಗಳನ್ನಾಗಿ ನಿಯೋಜಿಸಲಾಗಿತ್ತು. ಇವರಿಗೆ ದಿನಕ್ಕೆ ತಲಾ ₹1 ಸಾವಿರ ಗೌರವ ಧನ ನಿಗದಿ ಪಡಿಸಲಾಗಿತ್ತು. ಅಥ್ಲೆಟಿಕ್ಸ್ ಸಂಸ್ಥೆಯಿಂದ ಹಣ ಸಂದಾಯ ಆಗಬೇಕಿತ್ತು. ಇದುವರೆಗೂ ರೆಫರಿಗಳ ಖಾತೆಗೆ ಗೌರವ ಧನ ಜಮೆ ಮಾಡಿಲ್ಲ.

ಕ್ರೀಡಾ ಇಲಾಖೆ ಸಿಬ್ಬಂದಿ ಕೊರತೆಯಿಂದ ಹೆಣಗಾಡುತ್ತಿದೆ. ಎಲ್ಲ ಕ್ರೀಡಾಕೂಟ ಆಯೋಜನೆಗೆ ಹೊರ ಜಿಲ್ಲೆಗಳಿಂದ ರೆಫರಿ, ತೀರ್ಪುಗಾರರನ್ನು ನೇಮಿಸಲಾಗುತ್ತಿದೆ. ಹೊರಗಡೆಯಿಂದ ಬಂದವರಿಗೆ ಸಕಾಲಕ್ಕೆ ಗೌರವಧನ ನೀಡುತ್ತಿಲ್ಲ. ರೆಫರಿಯಾಗಿ ಕೆಲಸ ಮಾಡಿದವರು ಹಣ ಜಮಾ ಮಾಡುವಂತೆ ಅಥ್ಲೆಟಿಕ್ಸ್ ಸಂಸ್ಥೆಯ ಪದಾಧಿಕಾರಿಗಳಿಗೆ ಮನವಿ ಮಾಡಿದರೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಇಂದು–ನಾಳೆ ಎಂದು ಅವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಹಿರಿಯರ ಅಲೆದಾಟ ತಪ್ಪುತ್ತಿಲ್ಲ.

‘ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಿಗೆ ಜಿಲ್ಲೆ ಸಾಕ್ಷಿಯಾಗುತ್ತಿದೆ. ವಿಶ್ವದ ಗಮನ ಸೆಳೆದ ಕ್ರೀಡಾಪಟುಗಳು ಇಲ್ಲಿನ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದುವರೆಗೆ ನಡೆದ ಎಲ್ಲ ಕ್ರೀಡಾಕೂಟಗಳು ಯಶಸ್ವಿಯಾಗಿವೆ. ಇದರ ಹಿಂದೆ ರೆಫರಿಗಳ ಪಾತ್ರವೂ ದೊಡ್ಡದಿದೆ. ಇವರ ವಿಷಯದಲ್ಲಿ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ’ ಎಂದು ಹೆಸರೇಳಲು ಬಯಸದ ಹಿರಿಯ ತರಬೇತುದಾರರೊಬ್ಬರು ಬೇಸರ ಹೊರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.