ತುಮಕೂರು: ಮೈಕ್ರೊ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ವಿಷ ಮನುಷ್ಯನ ದೇಹ ಸೇರುತ್ತಿದೆ. ಕ್ಯಾನ್ಸರ್ನಂತಹ ಮಾರಕ ರೋಗಕ್ಕೆ ಜನ ತುತ್ತಾಗುತ್ತಿದ್ದಾರೆ ಎಂದು ಜೆಸಿಐ ವಲಯ 14ರ ಅಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಆತಂಕ ವ್ಯಕ್ತಪಡಿಸಿದರು.

ನಗರದ ಟೌನ್ಹಾಲ್ನಲ್ಲಿ ಶನಿವಾರ ಜೆಸಿಐ ತುಮಕೂರು ಮೆಟ್ರೊ ವತಿಯಿಂದ ಪ್ಲಾಸ್ಟಿಕ್ ಮುಕ್ತ ದೇಶ ಅಭಿಯಾನದಡಿ ಆಟೊ ಚಾಲಕರು, ಸಾರ್ವಜನಿಕರಿಗೆ ನೀರಿನ ಸ್ಟೀಲ್ ಬಾಟಲಿ ವಿತರಿಸಿ ಮಾತನಾಡಿದರು.

‘ಮನುಷ್ಯ ತನಗೆ ಅರಿವಿಲ್ಲದೆ ಪ್ರತಿ ನಿತ್ಯ ಹಾನಿಕಾರಕ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾನೆ. ಇದನ್ನು ತಪ್ಪಿಸುವ ಉದ್ದೇಶದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯುವ ಜನರಲ್ಲಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಕೈಗೊಳ್ಳಲಾಗಿದೆ’ ಎಂದರು.

ಯುವ ಜನರನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮೇಲೆ ತರಲು ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಅವರಲ್ಲಿ ನಾಯಕತ್ವದ ಗುಣ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.

ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜಿತೇಶ್ ಅದ್ವಾನಿ, ಜೆಸಿಐ ತುಮಕೂರು ಮೆಟ್ರೊ ಅಧ್ಯಕ್ಷೆ ಮಮತಾ ರಾಜ್, ಪದಾಧಿಕಾರಿಗಳಾದ ಬೆಳ್ಳಿ ಲೋಕೇಶ್, ಸುನಿತ್ ರಾಜ್, ಶ್ರೀನಿವಾಸಮೂರ್ತಿ, ಉಮಾಮಹೇಶ್, ಸಂಜಯ್, ಅನು, ನಾಗೇಂದ್ರನಾಥ್, ನಾಗಭೂಷಣ್, ವೇಣುಗೋಪಾಲ್, ನಟರಾಜಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-1350992456

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.