ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ರಸ್ತೆಯಲ್ಲಿನ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ರಾಗಿ ಖರೀದಿಸುವ ಪ್ರಕ್ರಿಯೆ ಮೇ 15ಕ್ಕೆ ಕೊನೆಯಾಗಲಿದ್ದು, ರಸ್ತೆ ಬದಿಯಲ್ಲಿ 50ಕ್ಕೂ ಹೆಚ್ಚು ರಾಗಿ ತಂಬಿದ ಟ್ರ್ಯಾಕ್ಟರ್ಗಳು ನಿಂತಿವೆ.

ದಬ್ಬೇಘಟ್ಟ ರಸ್ತೆಯ ಬಲಭಾಗದ ಎಪಿಎಂಸಿ ಕಚೇರಿಯಿಂದ ಹೇಮಾವತಿ ಕಚೇರಿವರೆಗೆ 50ಕ್ಕೂ ಹೆಚ್ಚು ರಾಗಿ ತುಂಬಿದ ಟ್ರ್ಯಾಕ್ಟರ್ಗಳು ಸಾಲಿನಲ್ಲಿ ನಿಂತಿವೆ. ಈಗಾಗಲೇ ಜೇಷ್ಠತೆ ಪ್ರಕಾರ ರಾಗಿ ಖರೀದಿಸಲಾಗುತ್ತಿದೆ.

‘ರಾಗಿ ತುಂಬಿದ ಟ್ರ್ಯಾಕ್ಟರ್ಗಳನ್ನು ದಿನದ ಲೆಕ್ಕದಲ್ಲಿ ಬಾಡಿಗೆಗೆ ತರಲಾಗಿದೆ. ಟ್ರ್ಯಾಕ್ಟರ್ ಚಾಲಕರಿಗೆ ಬಾಡಿಗೆ ಕೊಡುವುದಲ್ಲದೆ ಬೆಳಗ್ಗೆ, ಸಂಜೆಯೂ ಊಟ, ತಿಂಡಿ ಕೊಡಿಸಬೇಕು. ರಾಗಿ ತುಂಬಿದ ಚೀಲಗಳು ಮಳೆಗೆ ನೆನೆದು ಮೊಳಕೆಯೊಡೆಯುತ್ತವೆ. ಟಾರ್ಪಲ್ ಅನ್ನು ಎರವಲು ಪಡೆದುಕೊಂಡು ತಂದಿದ್ದೇವೆ. ಅವುಗಳು ಅಲ್ಲಲ್ಲಿ ಹರಿದು ಹಾಳಾಗಿವೆ. ಈ ರಾಗಿ ಮಾರಿದ ಹಣವನ್ನು ಸರ್ಕಾರ ಯಾವಾಗ ಹಾಕುತ್ತದೆಯೊ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಈಗಾಗಲೇ 6,921 ರೈತರಿಂದ 17,5000 ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಇನ್ನೂ 2,880 ರೈತರಿಂದ 50 ಸಾವಿರ ಕ್ವಿಂಟಲ್ ರಾಗಿ ಖರೀದಿಸಬೇಕಿದೆ. ಮಾರ್ಚ್ 17ರ ವರೆಗೆ ರಾಗಿ ಮಾರಾಟ ಮಾಡಿದ ರೈತರ ಖಾತೆಗೆ ನೇರವಾಗಿ ಹಣ ಹಾಕಲಾಗಿದೆ. ಎಲ್ಲ ರೈತರ ಹಣವನ್ನು ಹಂತ ಹಂತವಾಗಿ ಹಾಕಲಾಗುವುದು’ ಎಂದು ಖರೀದಿ ಕೇಂದ್ರದ ಸಿಬ್ಬಂದಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-17-1035787171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.