ತುರುವೇಕೆರೆ: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಶುಕ್ರವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಭೂಮಿಯನ್ನು ತಂಪೆರೆಯಿತು.

ತಾಲ್ಲೂಕಿನ ಸಂಪಿಗೆ ಪಂಚಾಯಿತಿ, ಕೊಂಡಜ್ಜಿ, ಸಂಪಿಗೆ ಹೊಸಹಳ್ಳಿ, ಹುಲ್ಲೇಕೆರೆ, ಕಸಬಾ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಹದ ಹಳೆಯಾಗಿದ್ದು, ರೈತ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇದುವರೆಗೂ ಮಳೆಯಾಗಿರಲಿಲ್ಲ. ನಾಲ್ಕು ಹೋಬಳಿಯ ರೈತ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆಗೆಂದು ರೈತರು ಹೆಸರು, ಅಲಸಂದೆ, ಉದ್ದು, ತೊಗರಿ ಹಾಗೂ ರಾಸಾಯಿನಿಕ ಗೊಬ್ಬರಗಳನ್ನು ಮೊದಲೇ ತಂದಿಟ್ಟುಕೊಂಡಿದ್ದರು ಸರಿಯಾಗಿ ಮಳೆ ಬಾರದ ಕಾರಣ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿತ್ತು.

ಈಗಾಗಲೇ ಮಳೆ ಇದ್ದ ಭಾಗಗಳಲ್ಲಿ ರೈತರು ಭೂಮಿಯನ್ನೇನೋ ಹದ ಮಾಡಿಕೊಂಡಿದ್ದರು. ಈಗ ಮುಂಗಾರು ಬಿತ್ತನೆ ಮಾಡಿದರೆ ರಾಗಿ ಬಿತ್ತನೆಗೆ ಹಿನ್ನಡೆಯಾಗುತ್ತದೆ ಎಂದು ಸುಮ್ಮನಾಗಿದ್ದರು.

ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಇನ್ನಿತರ ಬೆಳೆಗಳಿಗೆ ಚೇತರಿಕೆ, ಅಡಿಕೆ ಕಾಯಿ ಬೆಳವಣಿಗೆಗೆ ನೆರವಾಗುತ್ತದೆ ಎನ್ನುತ್ತಾರೆ ಬಂಗಿಕೊಪ್ಪಲು ರೈತ ನಂಜುಂಡಯ್ಯ.

ಶುಕ್ರವಾರ ರಾತ್ರಿ ಬೀಸಿದ ಗಾಳಿಗೆ ಸಂಪಿಗೆ ಗ್ರಾಮದ ಸುತ್ತಲಿನ ತೆಂಗು, ಅಡಿಕೆ, ವಿದ್ಯುತ್ ಪರಿವರ್ತಕಗಳು ನೆಲಕಚ್ಚಿವೆ. ದಂಡಿನಶಿವರ ಹೋಬಳಿಯ ದುಂಡಾ ಗ್ರಾಮದ ಹೊರ ವಲಯದಲ್ಲಿ ಫಲ ಬಿಟ್ಟಿದ್ದ 00 ಅಡಿಕೆ ಸಸಿ, 16 ತೆಂಗಿನ ಗಿಡಿಗಳ ಬುಡಸಮೇತ ಬಿದ್ದು ಹೋಗಿದೆ.

ದುಂಡಾ ಹೊಸೂರು ಗ್ರಾಮದಲ್ಲಿ 10, ತಳವಾರನಹಳ್ಳಿಯ ವಿದ್ಯುತ್ ಪರಿರ್ವಕ, ಬಿ.ಸಿ ಕಾವಲ್ನಲ್ಲಿ 4, ಡಿ ಪಾಳ್ಳ ಗೇಟ್ನಲ್ಲಿ 2, ಬಾಣಸಂದ್ರ ಪಾಳ್ಯದಲ್ಲಿ 3, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಶುಕ್ರವಾರ ರಾತ್ರಿ ಕಂಬಗಳು ಮುರಿದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿದೆ ಎಂದು ಬೆಸ್ಕಾಂ ಅಧಿಕಾರಿ ಸೋಮಶೇರ್, ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-17-2104862852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.