ತಾಲ್ಲೂಕು ಆರ್ಥಿಕವಾಗಿ ಹಿಂದುಳಿದಿದೆ. ನೀರಿನ ಅಭಾವ ನಿರುದ್ಯೋಗ ಸಮಸ್ಯೆಯಿಂದ ಜನರು ಉದ್ಯೋಗ ಅರಸಿ ಪಟ್ಟಣಗಳತ್ತ ವಲಸೆ ಹೋಗುತ್ತಿದ್ದಾರೆ. ರೈಲು ಓಡಾಟ ಆರಂಭಿಸಿದರೆ ಜನರಿಗೆ ಅನುಕೂಲವಾಗಲಿದೆ.
ಮಹಾಲಿಂಗೇಶ್ ಉಪನ್ಯಾಸಕ
ರೈಲ್ವೆ ಯೋಜನೆ ನಮ್ಮ ಭಾಗದ ಜನರಿಗೆ ಕನಸಾಗಿ ಉಳಿದಿದೆ. ಮಧುಗಿರಿ ಕೊರಟಗೆರೆ ಮಾಡಕಶಿರಾ ಪಾವಗಡ ಭಾಗದ ಜನ ಎದುರು ನೋಡುತ್ತಿರುವ ಈ ಯೋಜನೆ ವಿಳಂಬದಿಂದ ರೈತರಿಗೆ ಸಾಗಣೆಗೆ ತೊಂದರೆಯಾಗುತ್ತಿದೆ.
ರಾಮಕೃಷ್ಣಪ್ಪ ನೀರಕಲ್ಲು
ರಾಮನಿಗೆ ಶಬರಿ ಕಾದಂತೆ ಇಲ್ಲಿನ ಜನರು ಕೂಡ ರೈಲ್ವೆ ಯೋಜನೆ ಶೀಘ್ರ ಪೂರ್ಣಗೊಳ್ಳಬೇಕೆಂದು ಹಪಹಪಿಸುತ್ತಿದ್ದಾರೆ. ರೈಲ್ವೆ ಮಾರ್ಗದ ಕೆಲಸ ತ್ವರಿತವಾಗಿ ಸಾಗಿ ಎಲ್ಲರಿಗೂ ಅನುಕೂಲವಾಗಲಿ.
ವೀಣಾ ಶ್ರೀನಿವಾಸ್ ಕವಯತ್ರಿ ಮಧುಗಿರಿ
ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಮಧುಗಿರಿ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದ್ದು ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆ ಜತೆಗೆ ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ ತ್ವರಿತವಾಗಿ ಸಾಗಬೇಕು.