ತುಮಕೂರು: ನಗರ ಹೊರವಲಯದ ಭೀಮಸಂದ್ರ ಬಳಿಯ ‘ಸಿಎಸ್ಕೆ’ ಹೋಟೆಲ್ಗೆ ಕಲ್ಲು ತೂರಿ, ಹೋಟೆಲ್ ಮಾಲೀಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಇಬ್ಬರು ಅಭಿಮಾನಿಗಳನ್ನುತಿಲಕ್ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭೀಮಸಂದ್ರದ ಸ್ವಾಮಿ, ಸುಪ್ರೀತ್ ಬಂಧಿತರು. ಸಂತೋಷ್, ಮನು ಎಂಬುವರು ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

‘ಜೂನ್ 1ರ ಬೆಳಗಿನ ಜಾವ ಹೋಟೆಲ್ ಬಳಿಗೆ ಬಂದು ‘ಸಿಎಸ್ಕೆ’ ಹೆಸರು ತೆಗೆದು ಹಾಕಿ, ‘ಆರ್ಸಿಬಿ’ ಎಂದು ಬದಲಿಸಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೆಸರು ಬದಲಾವಣೆ ಮಾಡದಿದ್ದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದರು. ಇದೇ ವೇಳೆ ಹೋಟೆಲ್ ಮೇಲೆ ಕಲ್ಲು ತೂರಿದ್ದು, ಗಾಜು ಹೊಡೆದು ಹೋಗಿದೆ’ ಎಂದು ಹೋಟೆಲ್ ಮಾಲೀಕ ಸಿ.ಎಸ್.ಅಮೀನ್ ಅಹ್ಮದ್ ಠಾಣೆಗೆ ದೂರು ಸಲ್ಲಿಸಿದ್ದರು.

‘ಸಿಎಸ್ಕೆ’ ಎಂದರೆ ‘ಚೆಂಡೂರು ಶೇಖ್ ಮೆಹಬೂಬ್ ಖುರ್ಷಿದ್ ಬೇಗಂ’ ಆಗಿರುತ್ತದೆ. ಆರ್ಸಿಬಿ ಅಭಿಮಾನಿಗಳು ಅದನ್ನು ‘ಚೆನ್ನೈ ಸೂಪರ್ ಕಿಂಗ್ಸ್’ ಎಂದು ತಪ್ಪಾಗಿ ಗ್ರಹಿಸಿ ಹೋಟೆಲ್ ಮೇಲೆ ಕಲ್ಲು ತೂರಿದರು. ಆರ್ಸಿಬಿ ತಂಡ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯ ಗೆದ್ದ ನಂತರ ಹೋಟೆಲ್ ಹತ್ತಿರ ಬಂದು ಗಲಾಟೆ ಮಾಡಿದರು. ಲಾಂಗ್ನಿಂದ ಹಲ್ಲೆ ನಡೆಸಲು ಯತ್ನಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಮೀನ್ ದೂರು ಆಧರಿಸಿ ನಾಲ್ವರ ವಿರುದ್ಧ ಬಿಎನ್ಎಸ್ ಕಲಂ 109 (ಕೊಲೆ ಯತ್ನ), 115 (ಗಾಯಗೊಳಿಸುವುದು) ಸೇರಿ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-17-1289983822

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.