ತುಮಕೂರು: ರಿಫಾ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಘಟಕದ ವತಿಯಿಂದ ರಂಜಾನ್ ಅಂಗವಾಗಿ ಈಚೆಗೆ ದಾವತ್–ಇ-ಇಫ್ತಾರ್ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಉದ್ಯಮಿಗಳು ಭಾಗವಹಿಸಿದ್ದರು. ಸೌಹಾರ್ದ ಸಂದೇಶವನ್ನು ಸಾರಿದರು.

ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಮುಮ್ತಾಜ್ ಮನ್ಸೂರಿ, ‘ಸಮುದಾಯದ ಸಣ್ಣ, ಮಧ್ಯಮ ಉದ್ಯಮಿಗಳಿಗೆ ತರಬೇತಿ, ಮಾರ್ಗದರ್ಶನ, ಆರ್ಥಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಸ್ಥೆ ಕೈಗೊಂಡಿದೆ. ಕೌಶಲಾಭಿವೃದ್ಧಿ ಮೂಲಕ ಉದ್ಯಮಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಪ್ರಮುಖ ಉದ್ದೇಶವಾಗಿದೆ’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಯಾಹ್ಯಾ ಖಾನ್, ‘ಸಮುದಾಯದ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಲಾಗಿದೆ. ಉದ್ಯಮಿಗಳು ಪರಸ್ಪರ ಪರಿಚಯಿಸಿಕೊಂಡು ವ್ಯವಹಾರ ವೃದ್ಧಿಸಿಕೊಂಡರೆ ಆರ್ಥಿಕವಾಗಿ ಬಲಿಷ್ಠ ಸಮುದಾಯ ನಿರ್ಮಾಣ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ರಿಫಾ ಚೇಂಬರ್ನ ಪ್ರಮುಖರಾದ ಹಬೀಬ್ ಉರ್ ರಹಮಾನ್, ಸಲೀಂ ಅಹಮದ್ ಖಾನ್ ಮನ್ಸೂರಿ, ತಾಜುದ್ದೀನ್ ಶರೀಫ್, ಮುಖಂಡರಾದ ಇಕ್ಬಾಲ್ ಅಹಮದ್, ತನ್ವೀರ್ ಅಹಮದ್ ಖಾನ್, ಎಸ್.ಎಂ.ಇರ್ಫಾನ್, ನದೀಂ ಪಾಷಾ, ಜಿಯಾಉಲ್ಲಾ, ರಾಮನಗರದ ಮೊಹಮ್ಮದ್ ಆರಿಫ್ ಖುರೇಷಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.