ತುಮಕೂರು: ಅಭಿವೃದ್ಧಿ ಹೆಸರಿನಲ್ಲಿ ನದಿಗಳು ವಿನಾಶವಾಗುತ್ತಿರುವುದು ಶೋಚನೀಯ ಸಂಗತಿ ಎಂದು ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಶನಿವಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠ, ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಆದರ್ಶ್ ಮತ್ತು ಧಾನ್ಯ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಜಯಮಂಗಲಿ ನದಿ ಪುನಶ್ಚೇತನಾ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನದಿಗಳು ಬತ್ತಿ ಹೋಗಿದ್ದು, ಕೊಳವೆಬಾವಿ ಅವಲಂಬನೆ ಹೆಚ್ಚಾಗಿದೆ. ಕಲುಷಿತ ನೀರು ನದಿಗೆ ಹರಿಯುತ್ತಿದೆ. ಅಭಿವೃದ್ಧಿ ಕಡೆಗೆ ಸಾಗುವ ಭರದಲ್ಲಿ ಕೆರೆ, ಕುಂಟೆ ರಕ್ಷಣೆ ಮಾಡುತ್ತಿಲ್ಲ. ನೀರು ಸಂಗ್ರಹ ಕಾರ್ಯ ಮರೆತಿದ್ದೇವೆ. ನದಿ ಮತ್ತು ನೀರಿನ ಮೂಲ ಹಾಳು ಮಾಡುವಲ್ಲಿ ಮನುಷ್ಯನಿಗೆ ಮೊದಲ ಸ್ಥಾನ ಸಿಗುತ್ತದೆ ಎಂದು ವಿಷಾದಿಸಿದರು.

ನದಿ ದಡದಲ್ಲಿನ ಮರ ನಾಶ ಮಾಡುವುದರಿಂದ ಪ್ರವಾಹ ಸ್ಥಿತಿ ಎದುರಾಗುತ್ತದೆ. ಪರಿಸರಕ್ಕೆ ಹಾನಿ ಮಾಡುವುದರಿಂದ ಬೇಸಿಗೆ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬದುಕು, ಭಾಷೆ, ಸಂಸ್ಕೃತಿ ಹಾಗೂ ಉದ್ಯಮ ಕಲಿಸಿದ ನದಿಗಳನ್ನು ನಾವು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಅಕ್ರಮ ಮರಳು ದಂಧೆಯಿಂದ ನದಿಗಳು ಸಂಪೂರ್ಣವಾಗಿ ಹಾಳಾಗಿವೆ. ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಕೆರೆ ನಿರ್ಮಾಣ, ಹೂಳು ತೆಗೆಯುವುದು, ಕಾಡು ಬೆಳೆಸುವ ಮೂಲಕ ನದಿಗಳ ಪುನಶ್ಚೇತನಕ್ಕೆ ನಾವು ಕಾರ್ಯಪ್ರವೃತ್ತರಾಗಬೇಕಿದೆ. ದಾರಿ ತಪ್ಪಿ ಅರಿವಿಲ್ಲದೆ ಸಾಗುತ್ತಿರುವ ಯುವಕರು ಕೆರೆ, ನದಿಗಳ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶಾಲೆ– ಕಾಲೇಜು, ವಿಶ್ವವಿದ್ಯಾಲಯ ಮಟ್ಟದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಬೇಕು. ನದಿ ಪುನಶ್ಚೇತನಾ ರೀತಿಯ ಕಾರ್ಯಕ್ರಮ ಎಲ್ಲ ಕಡೆ ಆಯೋಜಿಸಬೇಕು ಎಂದರು.

ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜಿ.ಪರಶುರಾಮ್, ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಎಂ.ಮುನಿರಾಜು, ಧ್ಯಾನ ಸಂಸ್ಥೆಯ ಕೃಷಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-17-1820988514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.