ತುಮಕೂರು: ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಮಿಕರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಸರ್ಕಾರ ಮುಂದಾಗಿಲ್ಲ.

ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಿಗೆ 355 ಹುದ್ದೆ ಮಂಜೂರಾಗಿದ್ದು, 178 ಮಂದಿ ಸ್ವಚ್ಛತಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 177 ಹುದ್ದೆಗಳು ಖಾಲಿ ಉಳಿದಿವೆ. ಶೇ 50 ರಷ್ಟು ಸ್ಥಾನಗಳು ಭರ್ತಿಯಾಗಿಲ್ಲ. ಹೆಚ್ಚು 42 ಗ್ರಾ.ಪಂ ಹೊಂದಿರುವ ಶಿರಾ ತಾಲ್ಲೂಕಿನಲ್ಲಿ ಅಧಿಕ 28 ಹುದ್ದೆ ಭರ್ತಿಯಾಗಬೇಕಿದೆ.

ಗ್ರಾಮೀಣ ಭಾಗದ ಸ್ವಚ್ಛತೆ ಕಾಪಾಡುವಲ್ಲಿ ಕಾರ್ಮಿಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಕಸ ಸಂಗ್ರಹ, ಚರಂಡಿ, ಸಾರ್ವಜನಿಕ ಸ್ಥಳಗಳ ನಿರ್ವಹಣೆ ಇವರ ಹೊಣೆ. ಹಳ್ಳಿಯ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಾರೆ. ಇದೀಗ ಎಲ್ಲ ಪಂಚಾಯಿತಿಗಳಿಗೆ ಕಸ ಸಂಗ್ರಹ ವಾಹನಗಳನ್ನು ನೀಡಿದ್ದು, ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಮಹಿಳೆಯರೇ ಹೆಚ್ಚಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕಾರ್ಮಿಕರಿಗೆ ಸರ್ಕಾರದಿಂದ ಅಗತ್ಯ ಸೌಕರ್ಯ ಮರೀಚಿಕೆಯಾಗಿದೆ. ನಿಗದಿತ ಸಂಬಳ ಇಲ್ಲದೆ ಬದುಕು ಸಾಗಿಸುವುದಕ್ಕೆ ಪರದಾಡುತ್ತಿದ್ದಾರೆ. ಕೆಲ ಪಂಚಾಯಿತಿಗಳಲ್ಲಿ ₹3 ಸಾವಿರ ವೇತನ ನೀಡಿದರೆ, ಇನ್ನೂ ಕೆಲ ಪಂಚಾಯಿತಿಗಳಲ್ಲಿ ₹6 ಸಾವಿರ ಇದೆ. ಕೆಲಸಕ್ಕೆ ಕನಿಷ್ಠ ಕೂಲಿಯೂ ಸಿಗದಂತಹ ಸ್ಥಿತಿಯಲ್ಲಿ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ. ಸಂಬಳವೂ ಪ್ರತಿ ತಿಂಗಳು ಜಮಾ ಆಗುತ್ತಿಲ್ಲ. 4 ತಿಂಗಳಿಗೊಮ್ಮೆ ನೀಡಲಾಗುತ್ತಿದೆ.

ಬಹುತೇಕ ಕಡೆಗಳಲ್ಲಿ ಸುರಕ್ಷತಾ ಪರಿಕರ ವಿತರಿಸುತ್ತಿಲ್ಲ. ಮಧುಗಿರಿಯಲ್ಲಿ 2025ರ ಏಪ್ರಿಲ್ನಲ್ಲಿ ಕೊನೆಯ ಬಾರಿಗೆ ಪರಿಕರ ನೀಡಲಾಗಿದೆ. ಪಾವಗಡದಲ್ಲಿ ಜೂನ್ ತಿಂಗಳಲ್ಲಿ, ತುಮಕೂರು, ಶಿರಾ, ತಿಪಟೂರು ವ್ಯಾಪ್ತಿಯಲ್ಲಿ ಕಳೆದ ಡಿಸೆಂಬರ್ನಲ್ಲಿ ಪರಿಕರ ತಲುಪಿಸಲಾಗಿದೆ. ಉಳಿದ ತಾಲ್ಲೂಕುಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು ಎಂಬ ನಿಯಮ ಇದೆ. ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಸಕಾಲಕ್ಕೆ ಕಾರ್ಮಿಕರ ಆರೋಗ್ಯ ಪರೀಕ್ಷಿಸುವ ಕೆಲಸ ಆಗುತ್ತಿಲ್ಲ. ಆರು ತಿಂಗಳು, ವರ್ಷಕ್ಕೊಮ್ಮೆ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ರಕ್ಷಣೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ.

‘ಆಯಾ ತಿಂಗಳಲ್ಲಿ ಸಂಬಳ ನೀಡಿದರೆ ನಮಗೂ ಅನುಕೂಲವಾಗುತ್ತದೆ. ಪಂಚಾಯಿತಿಗಳಿಂದ ಗುತ್ತಿಗೆ ಪಡೆದ ಏಜೆನ್ಸಿಯವರು ವೇತನ ನೀಡಲು ವಿಳಂಬ ಮಾಡುತ್ತಾರೆ. ಹೀಗಾಗಿ ತುಂಬಾ ಜನ ಕೆಲಸ ಬಿಟ್ಟು ಹೋಗಿದ್ದಾರೆ. ಮನೆಯಲ್ಲಿ ಕಷ್ಟ ಇರುವವರು, ಸಂಬಳದ ಅವಶ್ಯಕತೆ ಇದ್ದವರು ಮಾತ್ರ ಕೆಲಸದಲ್ಲಿ ಮುಂದುವರಿದಿದ್ದಾರೆ’ ಎಂದು ಶಿರಾ ತಾಲ್ಲೂಕಿನ ಸ್ವಚ್ಛತಾ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

177 ಹುದ್ದೆಗಳು ಖಾಲಿ

ಸಕಾಲಕ್ಕೆ ಸಿಗದ ಸಂಬಳ

ಆರೋಗ್ಯ ತಪಾಸಣೆಯೂ ವಿಳಂಬ

ಹಾಸ್ಟೆಲ್ನಲ್ಲಿ ಪ್ರತ್ಯೇಕ ಕಾರ್ಮಿಕರಿಲ್ಲ

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಜಿಲ್ಲೆಯ ಯಾವುದೇ ಹಾಸ್ಟೆಲ್ಗಳಲ್ಲಿ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿ ಕೊಂಡಿಲ್ಲ.

ಅಡುಗೆ ಸಿಬ್ಬಂದಿಯೇ ಶೌಚಾಲಯ, ಹಾಸ್ಟೆಲ್ ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾರೆ. ಕಾರ್ಮಿಕರನ್ನು ನೇಮಿಸಿಕೊಂಡು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ಹಲವು ವರ್ಷಗಳ ಬೇಡಿಕೆ ಇದುವರೆಗೆ ಈಡೇರಿಲ್ಲ. ಪರಿಶಿಷ್ಟರ ಕುಂದುಕೊರತೆ ಸಭೆ, ಪೌರ ಕಾರ್ಮಿಕರ ಸಭೆಗಳಲ್ಲಿ ಹಲವು ಬಾರಿ ಈ ವಿಚಾರ ಚರ್ಚೆಗೆ ಬಂದಿದೆ. ಆಡಳಿತ ವರ್ಗದಿಂದ ಕಾರ್ಮಿಕರನ್ನು ನೇಮಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.