ಶಿರಾ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಶೇ 80ರಷ್ಟು ಕಡೆ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಬರ ನಿರ್ವಹಣೆಯಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಶಾಸಕರು ಜನರ ಸಂಕಷ್ಟಕ್ಕೆ ಸ್ಪಂದಿಸದೆ ಕಣ್ಮರೆಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಆರೋಪಿಸಿದರು.

ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ತೋಟಗಳು ಒಣಗುತ್ತಿದ್ದು ರೈತರ ಬದುಕು ಬೀದಿಗೆ ಬೀಳುತ್ತಿದ್ದರೂ ಇದುವರೆಗೂ ಶಾಸಕರಾಗಲಿ, ಅಧಿಕಾರಿಗಳಾಗಲಿ ಒಂದೇ ಒಂದು ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

ತಾಲ್ಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳು ತುಂಬಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹಣ ನೀಡದೆ ಯಾವುದೇ ಕೆಲಸವಾಗುತ್ತಿಲ್ಲ. ಶಾಸಕರ ಕಣ್ಣು ಮುಂದೆ ಭ್ರಷ್ಟಾಚಾರ ನಡೆದರೂ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕುಡಿಯಲು ಹೇಮಾವತಿ ನೀರು ತಂದಿರುವುದಾಗಿ ಹೇಳಿಕೊಂಡು ಶಾಸಕರು ಅಧಿಕಾರ ಹಿಡಿದರು. ಆದರೆ ಹುಲಿಕುಂಟೆ, ಗೌಡಗೆರೆ ಹೋಬಳಿಯ ಸ್ಥಿತಿ ಏನಾಗಿದೆ? ಸುಮಾರು 50 ವರ್ಷ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದರೂ ಮೂಲ ಸೌಕರ್ಯಗಳನ್ನು ನೀಡಿಲ್ಲ ಎಂದು ದೂರಿದರು.

ನಗರದಲ್ಲಿ ಕನಿಷ್ಠ ಕಸ ವಿಲೇವಾರಿ ಮಾಡಲು ನಗರಸಭೆ ವಿಫಲವಾಗಿದೆ. ಎಲ್ಲಿ ನೋಡಿದರೂ ಕಸದ ರಾಶಿ ಬಿದ್ದಿದೆ. ಕರೆಯಲ್ಲಿ ನೀರಿದ್ದರೂ ಸಮರ್ಪಕವಾಗಿ ನೀರು ನೀಡಲು ಇವರಿಗೆ ಸಾಧ್ಯವಾಗುತ್ತಿಲ್ ಎಂದರು.

ರೈತರ 1400 ಎಕರೆ ಜಮೀನು ಕಿತ್ತುಕೊಂಡು ಕೈಗಾರಿಕಾ ಪ್ರದೇಶ ಮಾಡಿರುವುದಾಗಿ ಹೇಳುತ್ತಾರೆ. ಆದರೆ ಅಲ್ಲಿ ಸ್ಥಳೀಯರಿಗೆ ಕೆಲಸವೇ ಸಿಗುತ್ತಿಲ್ಲ, ವಾಚ್ಮೆನ್, ಕಸ ಕುಡಿಸುವ ಕೆಲಸ ನೀಡುತ್ತಿದ್ದು, ಮೂರು ತಿಂಗಳಿಗೆ ಕೆಲಸದಿಂದ ಕಿತ್ತು ಹಾಕುತ್ತಿದ್ದಾರೆ. ಇಲ್ಲಿ ಎಷ್ಟು ಜನ ಸ್ಥಳೀಯರಿಗೆ ಉದ್ಯಮ ಪ್ರಾರಂಭಿಸಲು ಸ್ಥಳ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಚಿಕ್ಕಣ್ಣ, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಉಮಾ ವಿಜಯರಾಜು, ಮಾಗೋಡು ಪ್ರತಾಪ್, ಎಂಜಲಗೆರೆ ಮೂರ್ತಿ, ಗಿರಿಧರ್, ನಾಗರತ್ನಮ್ಮ, ಪದ್ಮ, ಭಾಸ್ಕರ್, ತೇಜು, ಪುರುಷೋತ್ತಮ್, ಡಿ.ಎಚ್.ಗೌಡ, ಲೋಕೇಶ್, ವೀರೇಶ್, ಹರೀಶ್ ಗೋಷ್ಠಿಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-17-1762385121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.