ಶಿರಾ: ತಾಲ್ಲೂಕಿನ ಗೌಡಗೆರೆ ಹೋಬಳಿ ಜಿ.ಹೊಸಹಳ್ಳಿ, ಗೌಡಗೆರೆ, ಹೊನ್ನೇನಹಳ್ಳಿ, ಗೋಮಾರದನಹಳ್ಳಿ, ಭೂತಪ್ಪನಗುಡಿ ಗ್ರಾಮಗಳ ರೈತರ ತೋಟಗಳಿಗೆ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಅಡಿಕೆ, ತೆಂಗು, ದಾಳಿಂಬೆ ಬೆಳೆಗಳು ಒಣಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ. ರೈತ ಸಂಕಷ್ಟದಲ್ಲಿದ್ದರೂ ಸರ್ಕಾರ, ಶಾಸಕರು ಸೇರಿದಂತೆ ತಾಲ್ಲೂಕು ಆಡಳಿತ ರೈತರ ನೋವಿಗೆ ಸ್ಪಂದಿಸದೆ ನಿರ್ಲಕ್ಷ ವಹಿಸಿದೆ. ಜಿಲ್ಲಾಡಳಿತ ತಕ್ಷಣ ಈ ರೈತರ ನೆರವಿಗೆ ಧಾವಿಸಿ ಬೆಳೆ ನಷ್ಟ ಪರಿಹಾರದ ಜೊತೆಗೆ ಈ ಭಾಗದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬೇಕು ಎಂದು ಒತ್ತಾಯಿಸಿದರು.

ಗೌಡಗೆರೆ ಹೋಬಳಿಯ ಹಲವು ಗ್ರಾಮಗಳಿಗೆ ವರದಾನವಾಗಿದ್ದ ಸಂಗಮೇಶ್ವರ ಬ್ಯಾರೇಜ್ ದುರಸ್ತಿ ಕಾರ್ಯ ನೆಪದಲ್ಲಿ ರೈತರ ಸಲಹೆಗಳನ್ನು ಕೇಳದೆ ಏಕಾಏಕಿ ಬ್ಯಾರೇಜ್ನಲ್ಲಿದ್ದ ನೀರನ್ನು ಖಾಲಿ ಮಾಡಿದ ಕಾರಣ ಅಂತರ್ಜಲ ಕುಸಿದಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶಾಸಕರು ಗಮನ ಹರಿಸದ ಕಾರಣ ಸಮಸ್ಯೆ ಉಲ್ಭಣಿಸಿದೆ. ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ರೈತರ ಜೊತೆ ಸೇರಿ ತಾಲ್ಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಕೊಳವೆ ಬಾವಿಗೆ ಮನವಿ: ಹೊನ್ನೇನಹಳ್ಳಿಯ ನೂರಾರು ಮಹಿಳೆಯರು ಖಾಲಿ ಕೊಡದೊಂದಿಗೆ ಬಂದು ‘ನಮಗೆ ಕುಡಿಯಲು ನೀರು ಕೊಡಿ’ ಎಂದು ಮನವಿ ಮಾಡಿದರು. ಅವರ ಮನವಿಗೆ ಸ್ವಂದಿಸಿದ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ, ತಕ್ಷಣ ಕೊಳವೆ ಬಾವಿ ಕೊರೆಯುವ ಮಾಲೀಕನಿಗೆ ಕರೆ ಮಾಡಿ ನಾಳೆಯೇ ಬೋರ್ ಕೊರೆಯಿರಿ. 1,200 ಅಡಿಯಾದರು ಚಿಂತೆ ಇಲ್ಲ, ಕೊಳವೆಬಾವಿಯ ಸಂಪೂರ್ಣ ಹಣವನ್ನು ನಾನೇ ಕೊಡುತ್ತೇನೆ’ ಎಂದರು.

ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಗೌಡಪ್ಪ, ಶಾಂತಕುಮಾರ್, ಶಿವು ಸ್ನೇಹಪ್ರಿಯ, ಎಪಿಎಂಸಿ ಮಾಜಿ ಸದಸ್ಯ ಸೋಮಣ್ಣ, ಈರಣ್ಣ, ವೆಂಕಟೇಶ್, ಗೋಪಿಕುಂಟೆ ಕುಮಾರ್, ಕಾಟನಹಳ್ಳಿ ಭಾಸ್ಕರ್, ಚಿಕ್ಕಣ್ಣ, ಪುಟ್ಟಪ್ಪ, ಗೋಮಾರದಹಳ್ಳಿ ಕೃಷ್ಣಪ್ಪ, ಶಿವಣ್ಣ, ಗಂಗಣ್ಣ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-17-990913501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.