ಶಿರಾ: ಮಳೆಯಿಲ್ಲದೆ ಕಂಗೆಟ್ಟಿರುವ ರೈತರು ಮಳೆಗಾಗಿ ಪ್ರಾರ್ಥಿಸಿ ಗ್ರಾಮೀಣ ಭಾಗದಲ್ಲಿ ವಿವಿಧ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ತಾಲ್ಲೂಕಿನ ಗೌಡಗೆರೆ ಹೋಬಳಿ ಬಡಮಂಗನಹಟ್ಟಿ ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರು ಕತ್ತೆ ಮೆರವಣಿಗೆ ನಡೆಸಿದ್ದಾರೆ.

ಗ್ರಾಮದಲ್ಲಿ ರಾತ್ರಿ ಗ್ರಾಮಸ್ಥರು ಸೇರಿ ಕತ್ತೆಗೆ ವಿಶೇಷವಾಗಿ ಬಟ್ಟೆ, ಹೂವಿನ ಹಾರಗಳನ್ನು ಹಾಕಿ ಶೃಂಗಾರ ಮಾಡಿದ್ದರು. ಡೋಲು, ತಮಟೆ, ಸೇರಿದಂತೆ ಅರೆವಾದ್ಯ ಕಲಾವಿದರಾದ ಬಿ.ಕೆ.ನರಸಿಂಹರಾಜು, ಕೃಷ್ಣಮೂರ್ತಿ ಅವರು ಸಾಂಪ್ರದಾಯಿಕ ವಾದ್ಯಗಳೊಂದಿಗೆ, ಉರಿಯುವ ಪಂಜುಗಳನ್ನು ಹಿಡಿದು ಗ್ರಾಮದ ಬೀದಿಗಳಲ್ಲಿ ಕತ್ತೆಯ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು.

ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ಅಂತರ್ಜಲ ಕುಸಿಯುತ್ತಿದೆ. ಶೀಘ್ರವೇ ಉತ್ತಮ ಮಳೆ ಸುರಿಸಲಿ, ಕೆರೆ-ಕುಂಟೆಗಳು ತುಂಬಲಿ ಎಂದು ಪ್ರಾರ್ಥಿಸಿದರು.

ಚಂಗಾವರ ಗ್ರಾ.ಪಂ ಮಾಜಿ ಸದಸ್ಯ ತಿಮ್ಮಣ್ಣ, ಮಾಜಿ ಅಧ್ಯಕ್ಷೆ ನಾಗಮ್ಮ, ಕಾರನಾಗಪ್ಪ, ಮೂಡಲಗಿರಿಯಪ್ಪ, ಗಿರೀಶ್, ಮಂಜುನಾಥ್, ವೀರೇಂದ್ರ, ಮಾರಣ್ಣ, ಚಿದಾನಂದ, ಈರಣ್ಣ, ಮಂಜುನಾಥ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-17-128507639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.