ಶಿರಾ: ತಾಲ್ಲೂಕಿನ ನಿಂಬೆಮರದಹಳ್ಳಿಯಲ್ಲಿ ತಂದೆ ಮಗಳನ್ನು ಕೊಲೆ ಮಾಡಿದ್ದು, ತಿಂಗಳ ನಂತರ ಕೃತ್ಯ ಗೊತ್ತಾಗಿದೆ. ಗ್ರಾಮದ ಎನ್.ಟಿ.ಮೇಘನಾ (17) ಮೃತರು. ಆರೋಪಿ ತಿಮ್ಮರಾಯಪ್ಪ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮೇಘನಾ ತನ್ನ ಸಂಬಂಧಿಕ ಹುಡುಗನನ್ನು ಪ್ರೀತಿಸುತ್ತಿದ್ದರು. 18 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಮೇಘನಾ ತಾಯಿ ಒಪ್ಪಿದ್ದರು. ಆದರೆ, ತಂದೆ ತಿಮ್ಮರಾಯಪ್ಪಗೆ ಇಷ್ಟವಿರಲಿಲ್ಲ. ಮದುವೆ ತಡೆಯಲು ಮಗಳನ್ನು ಕೊಲೆ ಮಾಡುವ ನಿರ್ಧಾರಕ್ಕೆ ಅವರು ಬಂದಿದ್ದರು.

ಏ.16ರಂದು ಸಂಜೆ ತಿಮ್ಮರಾಯಪ್ಪ ಮಗಳನ್ನು ಕರೆದುಕೊಂಡು ಹೋಗಿ ತೋಟದ ಬಾವಿಗೆ ತಳ್ಳಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ಗುಂಡಿ ತೆಗೆದು ಹೂತಿದ್ದರು. ಇದಾದ ಬಳಿಕ ಮೂರು–ನಾಲ್ಕು ದಿನ ಮಗಳನ್ನು ಹುಡುಕಾಡುತ್ತಿರುವಂತೆ ನಾಟಕವನ್ನೂ ಮಾಡಿದ್ದರು.

ಏ.19ರಂದು ಮೇಘನಾ ತಾಯಿ ನಿರ್ಮಲಾ ಮಗಳು ನಾಪತ್ತೆ ಆಗಿದ್ದಾರೆ ಎಂದು ಕಳ್ಳಂಬೆಳ್ಳ ಠಾಣೆಗೆ ದೂರು ನೀಡಿದ್ದರು. ವಾರದ ಬಳಿಕ ತಿಮ್ಮರಾಯಪ್ಪ ಸಹ ನಾಪತ್ತೆಯಾಗಿದ್ದರು. ‘ಪತಿಯೂ ಕಾಣಿಸುತ್ತಿಲ್ಲ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಹುಡುಕಿಕೊಡಿ’ ಎಂದು ನಿರ್ಮಲಾ ಮತ್ತೊಂದು ದೂರು ಸಲ್ಲಿಸಿದ್ದರು.

ಕಾರ್ಯಪ್ರವೃತ್ತರಾದ ಪೊಲೀಸರು ಶನಿವಾರ ತಿಮ್ಮರಾಯಪ್ಪ ಅವರನ್ನು ಪತ್ತೆ ಹಚ್ಚಿದ್ದಾರೆ. ನಂತರ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಮಗಳ ಕೊಲೆ ವಿಚಾರ ಬಾಯಿ ಬಿಟ್ಟರು ಎಂದು ಪೊಲೀಸರು ತಿಳಿಸಿದರು.

ಇಂದು ಶವ ಹೊರಕ್ಕೆ: ‘ತಹಶೀಲ್ದಾರ್ ಸಮ್ಮುಖದಲ್ಲಿ ಸೋಮವಾರ ಮೃತದೇಹ ತೆಗೆಯಲಾಗುತ್ತದೆ. ನಂತರಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-1500107451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.