ಶಿರಾ: ನೋಂದಣಿ ಮತ್ತು ಮುದ್ರಾಂಕಿತ ಇಲಾಖೆಯಲ್ಲಿ ಕಾವೇರಿ ತಂತ್ರಾಂಶದ ಮೂಲಕ ಪೇಪರ್ ಲೆಸ್ ಡಿಜಿಟಲ್ ನೊಂದಣಿ ಜಾರಿಗೆ ತಂದಿರುವುದು ತಕ್ಷಣ ಕೈಬಿಟ್ಟು ಹಳೆಯ ರೀತಿಯಲ್ಲೇ ನೋಂದಣಿ ಮಾಡುವಂತೆ ಜಿಲ್ಲಾ ಪತ್ರಬರಹಗಾರರ ಸಂಘದ ಅಧ್ಯಕ್ಷ ನಾಗೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ದಶರಥ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪೇಪರ್ಲೆಸ್ ಡಿಜಿಟಲ್ ನೋಂದಣಿಯಿಂದ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚು. ಆಸ್ತಿ ನೋಂದಣಿ ಸಮಯದಲ್ಲಿ ಯಾವುದೇ ರೀತಿಯ ಭೌತಿಕ ಪತ್ರಗಳನ್ನು ಖರೀದಿದಾರಿಗೆ ನೀಡುವುದಿಲ್ಲ. ಯಾವುದೇ ರೀತಿಯ ಸಹಿ ಇರುವುದಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ಹೆಚ್ಚಿನ ತೊಂದರೆಯಾಗುವುದರ ಜೊತೆಗೆ ಭೂ ಮಾಫಿಯಾ ಹೆಚ್ಚಾಗಲು ಕಾರಣವಾಗುವುದು ಎಂದರು.

ನೋಂದಣಿ ಸಮಯದಲ್ಲಿ ಪತ್ರಬರಹಗಾರರು, ಆಸ್ತಿ ಮಾರಾಟ ಮಾಡಿದವರು, ಖರೀದಿ ಮಾಡಿದವರ ಯಾರ ಸಹಿ ಸಹ ಇರುವುದಿಲ್ಲ. ಇದರಿಂದ ಅವ್ಯವಹಾರ ನಡೆದರೆ ಯಾರು ಹೊಣೆಯಾಗುತ್ತಾರೆ. ಭೌತಿಕ ಪತ್ರಗಳು ಇಲ್ಲದ ಕಾರಣ ಬ್ಯಾಂಕ್ಗಳಲ್ಲಿ ಅಡಮಾನ ಸಾಲ ಪಡೆಯಲು ತೊಂದರೆಯಾಗುವುದು. ಆಸ್ತಿ ವಿಲ್ ಮಾಡುವರಿಗೆ ಹೆಚ್ಚಿನ ತೊಂದರೆಯಾಗುವುದು ಎಂದರು.

ಪೇಪರ್ಲೆಸ್ ಡಿಜಿಟಲ್ ನೋಂದಣಿಯನ್ನು ಜಾರಿಗೆ ತರುವ ಮೊದಲು ಇದರ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಿ ಅವರಿಂದ ಜನಾಭಿಪ್ರಾಯವನ್ನು ಪಡೆಯದೆ, ಕೇವಲ ಅಧಿಕಾರಿಗಳ ಮಾಹಿತಿ ಪಡೆದು ಯೋಜನೆಯನ್ನು ರೂಪಿಸಿದ್ದಾರೆ ಎಂದು ದೂರಿದರು.

ಜಿಲ್ಲಾ ಪತ್ರಬರಹಗಾರರ ಸಂಘದ ಖಚಾಂಚಿ ನರಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.