ಶಿರಾ: ಬಯಲುಸೀಮೆಯ ಪ್ರಮುಖ ತಾಲ್ಲೂಕುಗಳಲ್ಲಿ ಒಂದಾದ ಶಿರಾ ಹಿಂದುಳಿದ ಪ್ರದೇಶವಾಗಿದ್ದು, ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಮಳೆಯಾಶ್ರಿತ ಕೃಷಿಯನ್ನೇ ನಂಬಿರುವ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೆ ಮಳೆ ಬಾರದೆ, ನಿರಂತರ ತಾಪಮಾನ ಹೆಚ್ಚುತ್ತಿರುವುದರಿಂದ ಜಲಮೂಲಗಳು ಸಂಪೂರ್ಣವಾಗಿ ಬತ್ತುತ್ತಿವೆ.

ತಾಲ್ಲೂಕಿನ ಶೇ 90ರಷ್ಟು ಕೆರೆಗಳಲ್ಲಿ ಹನಿ ನೀರೂ ಇಲ್ಲದೆ, ಅವು ವಿಶಾಲ ಮೈದಾನಗಳಾಗಿವೆ. ಹಿಂದೆ 800-900 ಅಡಿಗಳಲ್ಲಿ ಲಭ್ಯವಿದ್ದ ನೀರು, ಈಗ 1,200ರಿಂದ 1,500 ಅಡಿ ಆಳಕ್ಕೆ ಕುಸಿದಿದೆ. ಅಡಿಕೆ ತೋಟಗಳು ಒಣಗುತ್ತಿದ್ದು ರೈತರು ತೋಟ ಉಳಿಸಿಕೊಳ್ಳಲು ಸಾಲ ಮಾಡಿ ಕೊಳವೆಬಾವಿ ಕೊರೆಸುತ್ತಿದ್ದಾರೆ.

ನಗರದ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿದು ಬರುವುದರಿಂದ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ವ್ಯಾಪಕವಾಗುತ್ತಿದೆ.

ಸಮಸ್ಯಾತ್ಮಕ ಗ್ರಾಮಗಳು: ತಾಲ್ಲೂಕಿನ ಮಾನಂಗಿ, ಅಜ್ಜಯ್ಯನಪಾಳ್ಯ, ಕುಸುಕುಂಟೆ, ಅರೆಹಳ್ಳಿ, ಕೆ.ರಂಗನಹಳ್ಳಿ, ಕರೆಜವನಹಳ್ಳಿ, ಗೋಮಾರದನಹಳ್ಳಿ, ಹೊನ್ನೆನಹಳ್ಳಿ, ಲಕ್ಷ್ಮೀಸಾಗರ, ದ್ವಾರಾಳು, ಮಂಗನಹಳ್ಳಿ, ಗಿಡ್ಡನಹಳ್ಳಿ, ಗಜಮಾರನಹಳ್ಳಿ, ಮೊಸರಕುಂಟೆ, ಪುರಲೇಹಳ್ಳಿ, ದಾಸರಹಳ್ಳಿ, ನಿಡಗಟ್ಟೆ, ಮಾಗೋಡು, ರಾಮನಹಳ್ಳಿ ಸೇರಿದಂತೆ 20 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಗುರ್ತಿಸಲಾಗಿದೆ.

ಟ್ಯಾಂಕರ್ ನೀರು: ಕೂಸುಕುಂಟೆ, ಅರೇಹಳ್ಳಿ ಮತ್ತು ಕುರುಬರಹಳ್ಳಿ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದರೆ, ಗೋಮಾರದಹಳ್ಳಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಹೊಸ ಕೊಳವೆ ಬಾವಿ: ಸಮಸ್ಯೆ ಹೆಚ್ಚುತ್ತಿರುವ ಗ್ರಾಮಗಳಲ್ಲಿ ಹೊಸದಾಗಿ 26 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಅದರಲ್ಲಿ 12 ಕಡೆ ನೀರು ಸಿಕ್ಕಿದರೆ, 14 ಕಡೆ ವಿಫಲವಾಗಿದೆ. ಹೊಸದಾಗಿ 16 ಕೊಳವೆ ಬಾವಿ ಕೊರೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ: ಗ್ರಾಮಾಂತರ ಪ್ರದೇಶದಲ್ಲಿ 236 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 31 ಕೆಟ್ಟು ನಿಂತಿವೆ. ನಗರಸಭೆ ವ್ಯಾಪ್ತಿಯಲ್ಲಿ 20 ಘಟಕಗಳಿದ್ದು ಅದರಲ್ಲಿ 19 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ತಾಲ್ಲೂಕಿನಾದ್ಯಂತ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳು ತಾಂತ್ರಿಕ ಕಾರಣ ಅಥವಾ ನೀರಿನ ಮೂಲ ಬತ್ತಿದ್ದರಿಂದ ಸ್ಥಗಿತಗೊಂಡಿವೆ ಎಂದು ಸ್ಥಳೀಯರು ಅವಲತ್ತುಕೊಳ್ಳುತ್ತಾರೆ.

ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶೇಂಗಾ ಬೆಳೆ ವಿಫಲವಾಗಿ ರೈತರು ನಷ್ಟ ಅನುಭವಿಸುತ್ತಿರುವ ಕಾರಣ ಅಡಿಕೆಯತ್ತ ಮುಖ ಮಾಡಿದ್ದಾರೆ. 2023-24ನೇ ಸಾಲಿನಲ್ಲಿ 11,849 ಹೆಕ್ಟೇರ್, 2024-25ನೇ ಸಾಲಿನಲ್ಲಿ 15,732 ಹೆಕ್ಟೇರ್, 2024-25ನೇ ಸಾಲಿನಲ್ಲಿ 17,867 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದು, ಮೂರು ವರ್ಷದಲ್ಲಿ ಅಡಿಕೆ ಸಸಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಅಡಿಕೆಗೆ ಹೆಚ್ಚು ನೀರು ಬೇಕಿದೆ. ಆದರೆ ಅಂತರ್ಜಲ ಕುಸಿದ ಕಾರಣ ನೀರು ಇಲ್ಲದೆ ಜೊತೆಗೆ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಅಡಿಕೆ ತೋಟಗಳು ಒಣಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳವುದು ರೈತರಿಗೆ ಸವಾಲಾಗಿದೆ.

ಕುರಿಗಾಹಿಗಳ ಸಂಕಷ್ಟ: ಕೆರೆಗಳಲ್ಲಿ ನೀರಿಲ್ಲದಿರುವುದು ಕುರಿಗಾಹಿಗಳಿಗೆ ಸಂಕಷ್ಟ ಮೂಡಿಸಿದೆ. ಮೇವಿನ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಹಸು, ಎಮ್ಮೆಗಳಿಗಾದರೆ ಬಕೇಟ್, ಪಾತ್ರೆಗಳಲ್ಲಿ ಕುಡಿಯಲು ನೀರು ಕುಡಿಸಬಹುದು. ಜೊತೆಗೆ ಪ್ರತಿ ಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲಾದೆ. ಆದರೆ ಕುರಿ ಮತ್ತು ಮೇಕೆಗಳಿಗೆ ಹರಿಯುವ ನೀರು ಅಥವಾ ಕೆರೆ ಕಟ್ಟೆಗಳಲ್ಲಿ ನೀರು ಕುಡಿಸಬೇಕು. ಆದ್ದರಿಂದ ನೀರಿರುವ ಕೆರೆಗಳಲ್ಲಿ ಹಿಂಡು ಹಿಂಡು ಕುರಿಗಳನ್ನು ಕಾಣಬಹುದಾಗಿದೆ. ತಾಲ್ಲೂಕಿನಲ್ಲಿ ಬರದ ತೀವ್ರತೆ ಕುರಿ ಸಾಕಾಣಿಕೆದಾರರಿಗೆ ಹೆಚ್ಚು ತಟ್ಟಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-17-1036942167

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.