ಶಿರಾ: ನಗರದಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ ದಾಖಲೆಗಳಲ್ಲಿ ಪೂರ್ಣಗೊಂಡಿದ್ದು ಇದರಿಂದಾಗಿ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸುಮಾರು ₹42 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಯುಜಿಡಿ ಕಾಮಗಾರಿ ದಾಖಲೆಗಳ ಪ್ರಕಾರ ಮುಗಿದಿದ್ದರೂ ಜನತೆಗೆ ಇದರ ಪ್ರಯೋಜನ ದೊರೆತಿಲ್ಲ. ಇದರಿಂದ ಸಮಸ್ಯೆಗಳು ಹೆಚ್ಚಾಗಿದ್ದು ಒಂದು ಕಡೆ ಜಲ ಮೂಲಗಳು ಮಲಿನಗೊಳ್ಳುತ್ತಿದ್ದರೆ ಮತ್ತೊಂದು ಕಡೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಸಮಯದಲ್ಲಿ ನಗರಸಭೆ ಅಧಿಕಾರಿಗಳು ಯೋಜನೆ ಕಾಮಗಾರಿ ಪರಿಶೀಲನೆ ನಡೆಸದೆ ಅಪೂರ್ಣಗೊಂಡಿದ್ದ ಕಾಮಗಾರಿ ಪೂರ್ಣಗೊಂಡಿದೆ ಎಂದು ಹಸ್ತಾಂತರ ಮಾಡಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ.

ಶಾಸಕ ಟಿ.ಬಿ.ಜಯಚಂದ್ರ ಅವರು 2012ರಲ್ಲಿ ಶಾಸಕರಾಗಿದ್ದ ಸಮಯದಲ್ಲಿ ಜಿಲ್ಲಾಮಟ್ಟಕ್ಕೆ ಸೀಮಿತವಾಗಿದ್ದ ಯೋಜನೆಯನ್ನು ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಜಾರಿಗೊಳಿಸಿದರು. ಆದರೆ ಯೋಜನೆಯಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೇಬು ತುಂಬಿಸಿದ್ದು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗದೆ ಯೋಜನೆ ಒಂದು ರೀತಿಯಲ್ಲಿ ವಿಫಲವಾಗುವಂತಾಗಿದೆ.

ಒಳಚರಂಡಿ ವ್ಯವಸ್ಥೆ ಕಾಮಗಾರಿಯನ್ನು ತಾಂತ್ರಿಕವಾಗಿ ಮಾಡದೆ ಅವೈಜ್ಞಾನಿಕವಾಗಿ ಕೈಗೊಂಡಿರುವುದರಿಂದ ಬಹುತೇಕ ಕಡೆ ಮ್ಯಾನ್ಹೋಲ್ ಭರ್ತಿಯಾಗಿ ನೀರು ಮುಂದೆ ಹೋಗದೆ ರಸ್ತೆಯಲ್ಲಿ ಹರಿಯುತ್ತಿದೆ. ಕಿರಿದಾದ ಪೈಪ್ಗಳನ್ನು ಹಾಕಿರುವುದರಿಂದ ಬೇಗ ಕಟ್ಟಿಕೊಳ್ಳುತ್ತವೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಕೋಳಿ ತ್ಯಾಜ್ಯ, ಪ್ಲಾಸ್ಟಿಕ್ ಬಾಟಲಿ, ಪೇಪರ್ಗಳಿಂದ ಹೆಚ್ಚು ಕಡೆ ಪೈಪ್ ಕಟ್ಟಿಕೊಂಡು ಮ್ಯಾನ್ಹೋಲ್ಗಳಿಂದ ರಸ್ತೆಗೆ ನೀರು ಹರಿಯುತ್ತಿದೆ.

ಜಾಜಿಕಟ್ಟೆ, ಕಲ್ಲುಕೋಟೆ, ಪ್ರೆಸಿಡೆನ್ಸಿ ಹಿಂಭಾಗ, ಹನುಮಂತನಗರ, ಗಂಗಮ್ಮ ಬಡಾವಣೆ ಮೊದಲಾದ ಕಡೆ ನಿರಂತರವಾಗಿ ನೀರು ರಸ್ತೆಯಲ್ಲಿ ಹರಿಯುತ್ತಿವೆ. ನಗರಸಭೆಯಿಂದ ಎಷ್ಟೇ ಪ್ರಯತ್ನ ಪಟ್ಟರೂ ಸಮಸ್ಯೆ ಬಗೆಹರಿಯದಂತಾಗಿದೆ.

ಪೂರ್ಣಗೊಳ್ಳದ ಸಂಪರ್ಕ: ನಗರದಲ್ಲಿ ಸುಮಾರು 20 ಸಾವಿರ ಮನೆಗಳಿದ್ದು, ಇದರಲ್ಲಿ 2,500 ಮನೆಗಳಿಗೆ ಒಳಚರಂಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಮನೆಗಳ ಶೌಚಾಲಯ ಹಾಗೂ ಕೊಳಚೆ ನೀರನ್ನು ಒಳಚರಂಡಿಗೆ ಸಂಪರ್ಕ ಕಲ್ಪಿಸುವ ಕೆಲಸ ಪೂರ್ಣಗೊಂಡಿಲ್ಲ.

ನಗರಸಭೆಯಿಂದ ನೆಲಮಹಡಿಗೆ ₹3 ಸಾವಿರ, ಮೊದಲ ಮಹಡಿಗೆ ₹4 ಸಾವಿರ, ಎರಡನೇ ಮಹಡಿಗೆ ₹5 ಸಾವಿರ, ಮೂರನೇ ಮಹಡಿಗೆ ₹6 ಸಾವಿರ ಹಾಗೂ ಗೃಹೇತರ ಬಳಕೆಗೆ ಎರಡು ಪಟ್ಟು ಠೇವಣಿ ನಿಗದಿ ಮಾಡಿದ್ದರೂ ಯೋಜನೆ ಪೂರ್ಣವಾಗದೆ ನಗರಸಭೆಗೆ ಅದಾಯ ಬಾರದಂತಾಗಿದೆ.

₹5 ಕೋಟಿ: ಕಾಮಗಾರಿ ಅಪೂರ್ಣವಾಗಿರುವುದರಿಂದ ಮಿಸ್ಸಿಂಗ್ ಲಿಂಕ್ ಕಾಮಗಾರಿಗೆ ಎಂದು ₹5 ಕೋಟಿ ಮಂಜೂರಾಗಿದ್ದು ಹಣ ಬಿಡುಗಡೆಯಾದರೆ ಸಂಪರ್ಕ ಇಲ್ಲದ ಕಡೆ ಸಂಪರ್ಕ ನೀಡುವುದು ಮತ್ತು ಬಿಟ್ಟು ಹೋಗಿರುವ ಕಾಮಗಾರಿ ಕೈಕೊಳ್ಳಲು ಅನುಕೂಲವಾಗುವುದು.

ಒಳ ಚರಂಡಿ ಯೋಜನೆಯಡಿ 10.60 ಎಂಎಲ್ಡಿ ಸಾಮರ್ಥ್ಯದ ₹11.71 ಕೋಟಿ ವೆಚ್ಚದಲ್ಲಿ ಮಲಿನ ನೀರಿನ ಶುದ್ಧೀಕರಣ ಘಟಕವನ್ನು ಸ್ಥಾಪನೆ ಮಾಡಿದ್ದರೂ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಮಲಿನ ನೀರು ನೇರವಾಗಿ ಹಳ್ಳದಲ್ಲಿ ಹರಿದು ಹೋಗುವಂತಾಗಿದೆ.

ಶಾಸಕ ಟಿ.ಬಿ.ಜಯಚಂದ್ರ ಅವರ ಮಹತ್ವಾಕಾಂಕ್ಷೆಯ ಯೋಜನೆ ಅವರ ಕಣ್ಣು ಮುಂದೆಯೇ ಹಳ್ಳ ಹಿಡಿದಿದೆ. ಸಾರ್ವಜನಿಕರ ತೆರಿಗೆ ಹಣಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವುದು ಸಾರ್ವಜನಿಕರ ದೂರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-17-205930704

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.