ತುಮಕೂರು: ತ್ರಿವಿಧ ದಾಸೋಹಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 119ನೇ ಜನ್ಮ ದಿನಾಚರಣೆಗೆ ಸಿದ್ಧಗಂಗಾ ಮಠ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಸ್ವಾಮೀಜಿ ಸ್ಮರಣೆಗೆ ಮಠದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸುತ್ತಿದ್ದು, ಕಾರ್ಯಕ್ರಮದ ಮೆರುಗು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಪ್ರತಿ ವರ್ಷವೂ ಏ. 1ರಂದೇ ಸ್ವಾಮೀಜಿ ಜಯಂತ್ಯುತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಸಲವೂ ಅದ್ದೂರಿಯಾಗಿ ಆಚರಣೆ ಮಾಡಿ, ಸ್ವಾಮೀಜಿಯನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ.

ಅನ್ನ, ಅಕ್ಷರ, ಆಶ್ರಯ ನೀಡಿದ, ಜೀವನ–ಬದುಕಿಗೊಂದು ದಾರಿ ತೋರಿದ ಗುರುವನ್ನು ಸ್ಮರಿಸಲು ನಾಡಿನ ವಿವಿಧೆಡೆಗಳಿಂದ ಭಕ್ತರು ಮಠಕ್ಕೆ ಆಗಮಿಸಲಿದ್ದಾರೆ. ಬುಧವಾರ ಮಠದಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೂರದೂರಿನ ಭಕ್ತರು ಮಂಗಳವಾರವೇ ಮಠದತ್ತ ಬರಲಾರಂಭಿಸಿದ್ದಾರೆ. ಸಹಸ್ರಾರು ಭಕ್ತರು ಜಯಂತ್ಯುತ್ಸವ ಸಾಕ್ಷೀಕರಿಸಲಿದ್ದಾರೆ.

ಸಿದ್ಧಗಂಗಾ ಮಠದ ಆವರಣವನ್ನು ಸಿಂಗಾರ ಮಾಡಲಾಗಿದೆ. ಎಲ್ಲೆಲ್ಲೂ ಸ್ವಾಮೀಜಿಯನ್ನು ನೆನಪಿಸುವ ಕಟೌಟ್ಗಳು, ಬಂಟಿಂಗ್ಸ್ಗಳು ರಾರಾಜಿಸುತ್ತಿವೆ. ಜಯಂತ್ಯುತ್ಸವವನ್ನು ಸ್ಮರಣೀಯಗೊಳಿಸಲು ಭಕ್ತರ ಜತೆಗೆ ಸ್ವಯಂಸೇವಕರು ಟೊಂಕಕಟ್ಟಿ ನಿಂತಿದ್ದಾರೆ. ಎಲ್ಲೆಲ್ಲೂ ಶಿವಕುಮಾರ ಸ್ವಾಮೀಜಿಯ ನಾಮಸ್ಮರಣೆ ಕೇಳಿಬರುತ್ತಿದೆ. ಮಠವಷ್ಟೇ ಅಲ್ಲದೆ ನಗರದಲ್ಲೂ ಸ್ವಾಮೀಜಿಯನ್ನು ಸ್ಮರಿಸಲಾಗುತ್ತದೆ. ಪ್ರಮುಖ ವೃತ್ತ, ಇತರೆ ಸ್ಥಳಗಳಲ್ಲಿ ದಾಸೋಹದ ಮೂಲಕ ನೆನಪು ಮಾಡಿಕೊಳ್ಳಲಾಗುತ್ತದೆ.

ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಮಠದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಬುಧವಾರ ಮಧ್ಯಾಹ್ನದ ವರೆಗೆ ಮಾತ್ರ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಸಂಜೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಈ ಬಗ್ಗೆ ಸಿದ್ಧಲಿಂಗ ಸ್ವಾಮೀಜಿ ಹಾಗೂ ಮಠದ ಆಡಳಿತ ಮಂಡಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 12.30 ಗಂಟೆಯ ವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರಪತಿ ಮಕ್ಕಳ ಜತೆಗೂ ಕೆಲ ಹೊತ್ತು ಸಂವಾದ ನಡೆಸಲಿದ್ದಾರೆ.

ದಾಸೋಹ:

ಮಠದಲ್ಲಿ ದಾಸೋಹಕ್ಕೆ ಸಕಲ ರೀತಿಯಲ್ಲೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಐದಾರು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಬರುವ ಭಕ್ತರು ಮಠದಲ್ಲಿ ಪ್ರಸಾದ ಸೇವಿಸಿ ತೆರಳುವುದು ಸಂಪ್ರದಾಯ.

ಸಂಚಾರ ನಿಯಂತ್ರಣ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಿಂದ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರಪತಿ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿನಿಂದ ಆಗಮಿಸಲಿದ್ದು, ತುಮಕೂರು ವಿಶ್ವವಿದ್ಯಾಲಯ ಹೆಲಿಪ್ಯಾಡ್ನಲ್ಲಿ ಇಳಿಯಲಿದ್ದಾರೆ. ಅಲ್ಲಿಂದ ಬಿ.ಎಚ್.ರಸ್ತೆ,ಕ್ಯಾತ್ಸಂದ್ರ ವೃತ್ತದ ಮೂಲಕ ಸಿದ್ಧಗಂಗಾ ಮಠಕ್ಕೆ ತೆರಳಲಿದ್ದಾರೆ.

ರಾಷ್ಟ್ರಪತಿ ಸಂಚರಿಸುವ ಸಮಯದಲ್ಲಿ ನಗರದ ಬಿ.ಎಚ್.ರಸ್ತೆಯ ಎಸ್.ಎಸ್.ವೃತ್ತದಿಂದ ಬಟವಾಡಿ, ಕ್ಯಾತ್ಸಂದ್ರ ವೃತ್ತ, ಮಠದ ಮುಖ್ಯ ದ್ವಾರದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಬಿ.ಎಚ್.ರಸ್ತೆಯಲ್ಲಿ ಬೆಳಿಗ್ಗೆ 10ರಿಂದ 12.30 ಗಂಟೆ ವರೆಗೆ ಸಂಚಾರ ನಿರ್ಬಂಧಿಸಲಾಗುತ್ತದೆ. 10ರಿಂದ 11 ಗಂಟೆ ಹಾಗೂ 11.30ರಿಂದ 12.30ರ ನಡುವೆ ಯಾವುದೇ ವಾಹನ ಸಂಚಾರಕ್ಕೂ ಅವಕಾಶ ಇರುವುದಿಲ್ಲ, ಮಧ್ಯದಲ್ಲಿ ಕೆಲಹೊತ್ತು ಅವಕಾಶ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.

ಹೆಚ್ಚಿನದಾಗಿ ರಿಂಗ್ ರಸ್ತೆ, ನಗರದ ಹೊರ ಭಾಗದ ರಸ್ತೆಗಳನ್ನು ಜನರು ಬಳಸಬೇಕು. ಸಾರ್ವಜನಿಕರು ಬಂಡೆಪಾಳ್ಯ ರಸ್ತೆ ಮೂಲಕ ಮಠಕ್ಕೆ ತೆರಳಬೇಕು ಎಂದು ಕೋರಿದ್ದಾರೆ.

ಸಾರ್ವಜನಿಕರಿಗೆ ಬಂಡೆಪಾಳ್ಯ ಮಾರ್ಗದಲ್ಲಿ ಅವಕಾಶ

ರಾಷ್ಟ್ರಪತಿ ಭೇಟಿಯಿಂದಾಗಿ ಬೆಳಿಗ್ಗೆ 10ರಿಂದ 12.30 ಗಂಟೆ ವರೆಗೆ ಮಠದ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಇರುವುದಿಲ್ಲ.

ಬಂಡೇಪಾಳ್ಯ ರಸ್ತೆ ಮೂಲಕ ಮಠಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ಕಡೆಯಿಂದ ಬರುವ ಭಕ್ತರು ಬಂಡೆಪಾಳ್ಯ ಮೂಲಕ ಮಠ ತಲುಪಬಹುದು. ದನಗಳ ಜಾತ್ರೆ ನಡೆಯುವ ಜಾಗದಲ್ಲಿ ವಾಹನ ನಿಲುಗಡೆ ಮಾಡಿ, ಅಲ್ಲಿಂದ ನಡೆದುಕೊಂಡು ಕಾರ್ಯಕ್ರಮ ನಡೆಯುವ ಸ್ಥಳ ತಲುಪಬಹುದು.

ರೈಲು ನಿಲ್ದಾಣ ಮತ್ತು ಕ್ಯಾತ್ಸಂದ್ರ ಬಸ್ ನಿಲ್ದಾಣದಿಂದ ಬರುವವರು ಕೆಳ ಸೇತುವೆ ಮುಖಾಂತರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಲು ಅವಕಾಶ ಮಾಡಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.