ತುಮಕೂರು: ವರ್ಕ್ ಫ್ರಂ ಹೋಮ್ ಆಮಿಷಕ್ಕೆ ಒಳಗಾಗಿ ಶಿರಾ ನಗರದ ಸಪ್ತಗಿರಿ ಬಡಾವಣೆ ವಿದ್ಯಾರ್ಥಿನಿಯೊಬ್ಬರು ₹8.58 ಲಕ್ಷ ಕಳೆದುಕೊಂಡಿದ್ದಾರೆ.

ಅಪರಿಚಿತರು ಟೆಲಿಗ್ರಾಮ್ ಗ್ರೂಪ್ಗೆ ವಿದ್ಯಾರ್ಥಿನಿ ನಂಬರ್ ಸೇರಿಸಿದ್ದಾರೆ. ಸದರಿ ಗ್ರೂಪ್ನಲ್ಲಿ ಮನೆಯಲ್ಲಿದ್ದು, ಕೆಲಸ ಮಾಡಿದರೆ ತಿಂಗಳಿಗೆ ₹2,800ರಿಂದ ₹13,500ರ ವರೆಗೆ ಗಳಿಸಬಹುದು ಎಂದು ತಿಳಿಸಿದ್ದಾರೆ. ವಂಚಕರು ಹೇಳಿದ ಟಾಸ್ಕ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿನಿ ಖಾತೆಗೆ ₹100 ವರ್ಗಾವಣೆ ಮಾಡಿದ್ದಾರೆ.

ಇದಾದ ಬಳಿಕ ಪ್ರೀ–ಪೇಯ್ಡ್ ಟಾಸ್ಕ್ಗಳ ಬಗ್ಗೆ ಮಾಹಿತಿ ಹಂಚಿಕೊಂಡು, ಹಣ ಹೂಡಿಕೆ ಕುರಿತು ವಿವರಿಸಿದ್ದಾರೆ. ಮೊದಲಿಗೆ ₹2 ಸಾವಿರ ವರ್ಗಾಯಿಸಿದ್ದು, ವಿದ್ಯಾರ್ಥಿನಿ ಖಾತೆಗೆ ₹2,800 ವಾಪಸ್ ಹಾಕಿದ್ದಾರೆ. https://uzx.incan.net/ ಲಿಂಕ್ ಮೂಲಕ ಟ್ರೇಡಿಂಗ್ ಗ್ರೂಪ್ಗೆ ಸೇರಿಸಿ, ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಇದನ್ನು ನಂಬಿದ ವಿದ್ಯಾರ್ಥಿನಿ ₹8,61,888 ಹಣವನ್ನು ವಿವಿಧ ಬ್ಯಾಂಕ್ ಖಾತೆ, ಯುಪಿಐ ಐ.ಡಿಗಳಿಗೆ ವರ್ಗಾಯಿಸಿದ್ದಾರೆ. ಇದರಲ್ಲಿ ಅವರಿಗೆ ₹2,950 ಮಾತ್ರ ಜಮಾ ಮಾಡಿದ್ದಾರೆ.

ಹಣ ವಾಪಸ್ ಕೇಳಿದಾಗ ಆರೋಪಿಗಳು ‘ನಿಮ್ಮ ಖಾತೆ ನಿಷ್ಕ್ರಿಯವಾಗಿದೆ, ಕ್ರೆಡಿಟ್ ಸ್ಕೋರ್ ಕಡಿಮೆ ಇದೆ’ ಎಂಬ ಕಾರಣ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ವಿದ್ಯಾರ್ಥಿನಿ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-17-460265866

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.