ತಿಪಟೂರು: ನಗರದ ಮೀನುಗಾರಿಕೆ ಇಲಾಖೆಯಿಂದ ರಾಜ್ಯ, ಜಿಲ್ಲಾ ಯೋಜನೆಯಡಿ ಆಯ್ಕೆಯಾದ ಮೀನುಗಾರ ಫಲಾನುಭವಿಗಳಿಗೆ ಮೀನುಗಾರಿಕಾ ಸಲಕರಣೆ ಹಾಗೂ ವಿವಿಧ ಸವಲತ್ತುಗಳನ್ನು ಬುಧವಾರ ವಿತರಿಸಲಾಯಿತು.

ತಾಲ್ಲೂಕಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿಯ 20, ಪಂಗಡದ 10 ಹಾಗೂ ಸಾಮಾನ್ಯ ವರ್ಗದ 11 ಜನರಿಗೆ ಸವಲತ್ತು ವಿತರಿಸಲಾಯಿತು. ಒಟ್ಟು 45 ಜನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ಮೀನುಗಾರಿಕೆ ಬಗ್ಗೆ ಜನರಿಗೆ ಅರಿವು ಕಡಿಮೆ ಇದೆ. ಇದು ಆರ್ಥಿಕವಾಗಿ ಸಾಕಷ್ಟು ಸಂಪಾದನೆಗೆ ಅವಕಾಶವಿರುವ ಉದ್ದಿಮೆ. ಮೀನುಗಾರಿಕೆಯಲ್ಲಿ ತೊಡಗಿರುವ ಸೂರಿಲ್ಲದವರಿಗೆ ವಿಶೇಷ ಯೋಜನೆಯಡಿ 50 ಜನರಿಗೆ ಸರ್ಕಾರದಿಂದ ಮನೆ ಮಂಜೂರಾಗಿದ್ದು, ಅದರಲ್ಲಿ 40 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಇನ್ನೂ 10 ಮಂದಿಗೆ ಹುಡುಕಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಂತರ ಇನ್ನೂ 50 ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದರು.

ಎತ್ತಿನಹೊಳೆ ಯೋಜನೆಯಡಿ ಈ ವರ್ಷದ ಅಂತ್ಯದೊಳಗೆ ತಾಲ್ಲೂಕಿನ 105 ಕೆರೆಗಳಿಗೆ ನೀರು ಹರಿಸಲಿದ್ದು, ಈ ಎಲ್ಲ ಕೆರೆಗಳಲ್ಲಿ ಮೀನುಗಾರಿಕೆಗೆ ಸಾಕಷ್ಟು ಅವಕಾಶಗಳಿವೆ. ತಾಲ್ಲೂಕಿನಲ್ಲಿ ಜನರು ಮುಖ್ಯ ಕಸುಬಾಗಿ ತೆಂಗು ಮತ್ತು ಅಡಿಕೆ ಬೆಳೆಸುತ್ತಿದ್ದು ಉಪಕಸುಬಾಗಿ ಮೀನುಗಾರಿಕೆಯಿಂದ ಉತ್ತಮ ಸಂಪಾದನೆ ಮಾಡಬಹುದು ಎಂದು ತಿಳಿಸಿದರು.

ಕೆರೆಗಳಲ್ಲಿ ಮೀನು ಸಾಕಣೆ ಹರಾಜು ಪ್ರಕ್ರಿಯೆಯನ್ನು ಇ-ಟೆಂಟರ್ ಮೂಲಕ ನಡೆಸಲಾಗುತ್ತಿದ್ದು ಪಾರದರ್ಶಕವಾಗಿ ಇರುತ್ತದೆ. ಮೀನು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಇಲಾಖೆಯಿಂದ ಅನೇಕ ಸವಲತ್ತು ದೊರೆಯುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಬೇಕು ಎಂದರು.

ಮೀನುಗಾರಿಕಾ ಉಪನಿರ್ದೇಶಕ ಎಂ.ಎಚ್.ನಂಜುಂಡಪ್ಪ ಮಾತನಾಡಿದರು.ಸಹಾಯಕ ಮೀನುಗಾರಿಕಾ ನಿರ್ದೇಶಕ ಮೋಹನ್ಕುಮಾರ್, ತಾ.ಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಹೊಸಳ್ಳಿ ಬಸವರಾಜು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-17-2137472

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.