ತಿಪಟೂರು: ತಾಲ್ಲೂಕಿನಾದ್ಯಂತ ಜೋರಾಗಿ ಬೀಸಿದ ಬಿರುಗಾಳಿ, ಗುಡುಗು-ಸಿಡಿಲಿನಬ್ಬರಕ್ಕೆ ರೈತರು ಬೆಳೆದ ಫಸಲು ಕೊಡುವ ತೆಂಗು, ಅಡಿಕೆ, ಮಾವು, ಬಾಳೆ ಮರಗಳು ಉರುಳಿಬಿದ್ದಿದ್ದು ರೈತರಿಗೆ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ. ನಷ್ಟ ಅನುಭವಿಸುತ್ತಿರುವ ರೈತರಿಗೆ ರಾಷ್ಟ್ರೀಯ ವಿಪತ್ತು ಸಹಾಯ ನಿಧಿಯಿಂದ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಟಿ.ಬಿ.ಜಯಾನಂದಯ್ಯ ಆಗ್ರಹಿಸಿದರು.

ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಕರ್ನಾಟಕ ಪ್ರಾಂತ ರೈತಸಂಘ, ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯಿಂದ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತರ ಬದುಕು ದುಸ್ತರವಾಗಿದೆ. ಒಂದು ತೆಂಗಿನ ಮರಕ್ಕೆ ₹7-8 ಸಾವಿರ, ಅಡಿಕೆಗೆ ಪ್ರತಿ ಮರಕ್ಕೆ ಸಾವಿರ ರೂಪಾಯಿ, ಮಾವಿನ ಮರಕ್ಕೆ ಸುಮಾರು ₹8-10 ಸಾವಿರ ನಷ್ಟವಾಗುತ್ತದೆ. ಮತ್ತೆ ಮರಗಳನ್ನು ಬೆಳೆಸಲು 10 ವರ್ಷ ಬೇಕಾಗುತ್ತದೆ. ಹಾಗಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಭೂಸ್ವಾಧೀನ ಮಾಡಿಕೊಂಡಾಗ ಪ್ರತಿ ತೆಂಗಿನ ಮರಕ್ಕೆ ₹18-20 ಸಾವಿರ ನೀಡುವ ಇಲಾಖೆ ಈಗ ಕೇವಲ ₹150 ರಿಂದ ₹200 ಮಾತ್ರ ಪರಿಹಾರ ಕೊಡುತ್ತಿದ್ದಾರೆ ಎಂದರು.

ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಭೂ ರಹಿತ ರೈತರು, ಅತಿ ಕಡಿಮೆ ಭೂಮಿ ಇರುವ ಬಡವರು ರಾಜ್ಯದಲ್ಲಿ ಸರ್ಕಾರಿ ಭೂಮಿ ಇದ್ದ ಕಡೆ ಭೂಮಿಯನ್ನು ಕೃಷಿ ಯೋಗ್ಯ ಮಾಡಿಕೊಂಡಿದ್ದಾರೆ. ಭೂಮಿಯನ್ನು ಬಗರ್ ಹುಕುಂ ರೈತರಿಗೆ ಮಂಜೂರು ಮಾಡಿ ಹಕ್ಕುಪತ್ರ ನೀಡಿ ಬಡವರ ಪರ ನಿಲ್ಲಬೇಕಾಗಿದ್ದ ಸರ್ಕಾರ ಈಗ ಹೊಸ ಹೊಸ ಕಾನೂನು, ಅರಣ್ಯ ಇಲಾಖೆಯ ಇತ್ತೀಚಿನ ನಡೆಗಳಿಂದ ಈ ರೈತರು ಭೂಮಿಯಿಂದ ವಂಚಿತರಾಗಿ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ತಕ್ಷಣವೇ ಸರ್ಕಾರ ಎಚ್ಚೆತ್ತು ರೈತರಿಗೆ ಭೂಮಿ ನೀಡಬೇಕು ಎಂದರು.

ರೈತ ಮುಖಂಡ ತಿಮ್ಲಾಪುರ ದೇವರಾಜು ಮಾತನಾಡಿ, ಮಳೆ ಬಂದು ಸುಮಾರು 7 ತಿಂಗಳು ಕಳೆದಿದ್ದು ಬರಗಾಲದ ಸೂಚನೆ ಕಾಣುತ್ತಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲ. ನಾವು ಬೆಳೆದಿದ್ದ ಮೇವು ಮುಗಿದಿದೆ. ದನಕರುಗಳಿಗೆ ಕುಡಿಯುವ ನೀರು, ಮೇವು ಇಲ್ಲದೆ ಹೈನುಗಾರಿಕೆ ನಂಬಿ ಬದುಕುತ್ತಿರುವ ರೈತರಿಗೆ ದಿಕ್ಕೇ ಕಾಣದಾಗಿದೆ. ನೆರವಿಗೆ ಬರಬೇಕಾದ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಸುಮ್ಮನೆ ಕುಳಿತಿದೆ. ತಕ್ಷಣವೇ ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗಡಬನಹಳ್ಳಿ ತಿಮ್ಮೇಗೌಡ, ಬೇಲೂರನಹಳ್ಳಿ ಷಡಾಕ್ಷರಯ್ಯ, ಬಿಳಿಗೆರೆ ನಾಗೇಶ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಬಳುವನೇರಲು ಸಿದ್ದಯ್ಯ, ಮಲ್ಲಿಕಾರ್ಜುನಯ್ಯ, ಸೌಹಾರ್ಧ ಅಲ್ಲಾಬಕಾಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-17-22880151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.