ತಿಪಟೂರು: ನಗರದಲ್ಲಿ ವಿಶ್ವ ಹಿಂದೂ ಪರಿಷತ್ನಿಂದ (ವಿಎಚ್ಪಿ) ‘ಗಣ್ಯರೊಂದಿಗೆ ಸಂವಾದ’ ಕಾರ್ಯಕ್ರಮ ನಡೆಯಿತು.

ವಿಎಚ್ಪಿ ಪ್ರಾಂತ ವಿಶೇಷ ಸಂಪರ್ಕ ವಿಭಾಗದ ಪ್ರಮುಖರಾದ ಮಂಜುನಾಥ ಸ್ವಾಮಿ ಮಾತನಾಡಿ, ಸಂಘಟನೆಗಳು ಬಲಗೊಳ್ಳಲು ಧ್ಯೇಯ, ನೇತೃತ್ವ, ಪ್ರಾಮಾಣಿಕತೆ, ಕಾರ್ಯಬದ್ಧತೆ, ಕಾರ್ಯಕರ್ತರ ತಂಡ ಇದ್ದರೆ ಮಾತ್ರವೇ ಸಾಧ್ಯ. ಅನೇಕ ಯೋಜನೆ, ಉದ್ದೇಶಗಳನ್ನು ಇಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಾ ಬಂದಿದೆ ಎಂದು ಹೇಳಿದರು.

‘ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಅಧ್ಯಕ್ಷ ದೀಪಕ್ ರಾಜ್ ಗೋಪಾಲ್ ಮಾತನಾಡಿ, ದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದ್ದಇದರ ಬಗ್ಗೆ ಎಚ್ಚೆತ್ತು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಅನಿವಾರ್ಯತೆ ಎದುರಾಗಲಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿ ಇಂದು ಯುವಜನತೆ ಮದುವೆಯಾಗದೆ ವಿಭಿನ್ನ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾರೆ. ಇದು ಮುಂದೆ ಒಂದು ದಿನ ಹಿಂದೂಗಳ ಸಂಖ್ಯೆ ಕ್ಷೀಣಿಸಿ ದಬ್ಬಾಳಿಕೆಗೆ ಒಳಗಾಗುವ ಅನಿವಾರ್ಯತೆ ಎದುರಾಗಲಿದೆ’ ಎಂದರು.

ವಿಶ್ವ ಹಿಂದೂ ಪರಿಷತ್ ತಿಪಟೂರು ಜಿಲ್ಲೆ ಅಧ್ಯಕ್ಷ ನಟರಾಜ್, ಜಿಲ್ಲಾ ವಿಶೇಷ ಸಂಪರ್ಕ ವಿಭಾಗದ ಪ್ರಮುಖ ನಾಗೇಶ್ ರಂಗಾಪುರ, ವಿಭಾಗ ಸಂಚಾಲಕ ಸಂಜಯ್, ತುಮಕೂರು ವಿಶೇಷ ಸಂಪರ್ಕ ಪ್ರಮುಖ್ ಮಹೇಶ್, ಲೋಕೇಶ್ವರ್, ಶಾಂತಕುಮಾರ್, ಶಶಿಕಿರಣ್, ರಾಮಮೋಹನ್, ವಿನಯ್ ಮಡೆನೂರು, ಮನೋಹರ್ ರಂಗಾಪುರ, ಮುರಳೀಧರ್, ವಿಶ್ವನಾಥ್ ಹೊಸಹಳ್ಳಿ, ನವೀನ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-17-1581526388

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.