ತುಮಕೂರು: ತಾಲ್ಲೂಕಿನ ಮಾಚೇನಹಳ್ಳಿ ಬಳಿ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಟೂಡಾ) ನಿರ್ಮಿಸಲು ಉದ್ದೇಶಿಸಿರುವ ವಸತಿ ಬಡಾವಣೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ಮಾಚೇನಹಳ್ಳಿ ಬಳಿ ಸೋಮವಾರ ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ನಿರ್ಧಾರ ಕೈಗೊಳ್ಳಲಾಯಿತು.

‘ರೈತರ ಒಪ್ಪಿಗೆ ಇಲ್ಲದೆ ಹಾಕಿರುವ ಅಡಿಗಲ್ಲು ಹಿಂಪಡೆಯಬೇಕು. ಭೂ ಬಳಕೆ ಮತ್ತು ಭೂ ಹೊದಿಕೆ ಕಾಯ್ದೆ ಜಾರಿಗೊಳಿಸಬೇಕು. ಖಾಸಗಿ ಬಡಾವಣೆಯ ಖಾಲಿ ನಿವೇಶನ ವಶಕ್ಕೆ ಪಡೆದು, ಅಗತ್ಯ ಇರುವವರಿಗೆ ಹಂಚಿಕೆ ಮಾಡಬೇಕು. ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದರು.

‘ಹಣವಂತರಿಗೆ ಮಾತ್ರ ಸರ್ಕಾರದ ನೀತಿಗಳು ಎಂಬಂತಾಗಿದೆ. 5, 10 ಗುಂಟೆ, ಅರ್ಧ ಎಕರೆ, ಎಕರೆ ಭೂ ಹಿಡುವಳಿದಾರರ ಜಮೀನು ಕಿತ್ತುಕೊಳ್ಳಲಾಗುತ್ತಿದೆ. ಇದರ ವಿರುದ್ಧ ಹೋರಾಟ ಕಟ್ಟಬೇಕು’ ಎಂದು ಸಂಯುಕ್ತ ಹೋರಾಟ– ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು ಕರೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ರಾಜ್ಯ ಉಪಾಧ್ಯಕ್ಷೆ ಎನ್.ಪ್ರಭಾ ಬೆಳವಂಗಲ, ‘ಜಿಲ್ಲಾ ಆಡಳಿತ ರೈತರಲ್ಲಿ ಭ್ರಮೆ ಹುಟ್ಟಿಸಿ, ಭೂಮಿ ಪಡೆಯಲು ಮುಂದಾಗಿದೆ. ಅನ್ನಕ್ಕೆ ಆಧಾರವಾದ ಭೂಮಿ ಕಳೆದುಕೊಂಡು ಎಲ್ಲಿಗೆ ಹೋಗುತ್ತೀರಿ. ಯಾವುದೇ ಕಾರಣಕ್ಕೂ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಡಿ’ ಎಂದು ರೈತರಲ್ಲಿ ಮನವಿ ಮಾಡಿದರು.

ಮಾಚೇನಹಳ್ಳಿ ತಿರುಮಲ ರಂಗನಾಥಸ್ವಾಮಿ ದೇವಾಲಯದಿಂದ ಬಡಾವಣೆ ಜಾಗದ ತನಕ ನೂರಾರು ಮೆರವಣಿಗೆ ನಡೆಯಿತು. 15 ಜನರನ್ನು ಒಳಗೊಂಡ ಭೂಸ್ವಾಧೀನ ವಿರೋಧಿ ರೈತ ಹೋರಾಟ ಸಮಿತಿ ರಚಿಸಲಾಯಿತು. ಮುಖಂಡರಾದ ಮಹೇಂದ್ರ, ಕುಮಾರ್, ಲಕ್ಷ್ಮಣಯ್ಯ, ರಾಮಾಂಜಿನೇಯ, ಬೋಜರಾಜು, ಸಾವಿತ್ರಮ್ಮ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-17-260133127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.