ತುಮಕೂರು: ನೈರುತ್ಯ ರೈಲ್ವೆಯು ಹಿರೇಹಳ್ಳಿ ಯಾರ್ಡ್ನಲ್ಲಿ ಸುರಕ್ಷತೆ ಹಾಗೂ ಸಂಚಾರಿ ದೀಪ (ಸಿಗ್ನಲ್) ಕಾಮಗಾರಿ ಕೈಗೆತ್ತಿಕೊಂಡಿದ್ದು, ಮೇ 20ರಂದು ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಮಾರ್ಗ ಬದಲಾವಣೆ: ಮೇ 20ರಂದು ಯಶವಂತಪುರ– ಶಿವಮೊಗ್ಗ ಟೌನ್ (ಸಂಖ್ಯೆ 20689) ದೈನಂದಿನ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ರೈಲು ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಹಾಗೂ ತಿಪಟೂರು ಮಾರ್ಗದಲ್ಲಿ ಸಂಚರಿಸುವುದಿಲ್ಲ.

ಮೇ 20ರಂದು ಮೈಸೂರು– ಬೆಳಗಾವಿ ವಿಶ್ವಮಾನವ (ಸಂಖ್ಯೆ 20676) ದೈನಂದಿನ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ಮೈಸೂರು, ಹೊಳೆನರಸೀಪುರ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ಪಾಂಡವಪುರ, ಬೆಂಗಳೂರು, ತುಮಕೂರು, ತಿಪಟೂರು ಮಾರ್ಗದಲ್ಲಿ ಸಂಚಾರ ಮಾಡುವುದಿಲ್ಲ.

ಭಾಗಶಃ ಸಂಚಾರ ರದ್ದು: ಮೇ 20ರಂದು ಕೆಎಸ್ಆರ್ ಬೆಂಗಳೂರು– ತುಮಕೂರು ಮೆಮು ರೈಲು (ಸಂಖ್ಯೆ 66567) ದೊಡ್ಡಬೆಲೆ ನಿಲ್ದಾಣದ ವರೆಗೂ ಮಾತ್ರ ಸಂಚರಿಸಲಿದೆ. ದೊಡ್ಡಬೆಲೆ– ತುಮಕೂರು ನಿಲ್ದಾಣದ ನಡುವೆ ಸಂಚರಿಸುವುದಿಲ್ಲ.

ಮೇ 20ರಂದು ತುಮಕೂರು– ಕೆಎಸ್ಆರ್ ಬೆಂಗಳೂರು ಮೆಮು ರೈಲು (ಸಂಖ್ಯೆ 66572) ದೊಡ್ಡಬೆಲೆ ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ. ತುಮಕೂರು– ದೊಡ್ಡಬೆಲೆ ನಡುವೆ ಸಂಚಾರ ಇರುವುದಿಲ್ಲ.

ರೈಲುಗಳ ನಿಯಂತ್ರಣ: ಮೇ 19ರಂದು ವೇಲಂಕಣಿಯಿಂದ ಹೊರಡುವ ರೈಲು (ಸಂಖ್ಯೆ 17316) ವೇಲಂಕಣಿ– ವಾಸ್ಕೊಡಗಾಮ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಮಾರ್ಗಮಧ್ಯೆ 60 ನಿಮಿಷ ವಿಳಂಬವಾಗಿ ಸಂಚರಿಸಲಿದೆ.

ಮೇ 20ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ದೈನಂದಿನ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (ಸಂಖ್ಯೆ 12725) ಹಾಗೂ ಯಶವಂತಪುರ– ಹಜರತ್ ನಿಜಾಮುದ್ದೀನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (ಸಂಖ್ಯೆ 12649) ರೈಲುಗಳು ಮಾರ್ಗಮಧ್ಯೆ ತಲಾ 30 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-17-1466085970

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.