ತುರುವೇಕೆರೆ: ಸರ್ಕಾರ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಮತ್ತು ಶುಚಿತ್ವದ ಹಿತ ದೃಷ್ಟಿಯಿಂದ ತಾಲ್ಲೂಕಿನಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಏಜೆನ್ಸಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸರಿಯಾದ ನಿರ್ವಹಣೆ ಇಲ್ಲದೆ ಕೆಟ್ಟು ನಿಂತು ಬೇಸಿಗೆಯಲ್ಲಿ ಜನರು ನೀರಿಗೆ ಪರಿತಪಿಸುವಂತಾಗಿದೆ.

ತಾಲ್ಲೂಕಿನಲ್ಲಿ ಈಗಾಗಲೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಯೋಜನೆಯಡಿ 96 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಅವುಗಳ ಪೈಕಿ 76 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 25 ಘಟಕ ರಿಪೇರಿ ಹಂತದಲ್ಲಿದ್ದು ವರ್ಷಗಳೇ ಕಳೆದರೂ ರಿಪೇರಿ ಮಾಡುವ ಗೋಜಿಗೆ ಯಾರು ಚಿಂತಿಸಿಲ್ಲ.

ಏಜೆನ್ಸಿ ನಿರ್ವಹಣೆಯ ಘಟಕಗಳಿಗೆ ಹಿಡಿದ ಗ್ರಹಣ: ಏಜೆನ್ಸಿ ನಿರ್ವಹಣೆಯಲ್ಲಿರುವ ತಾಲ್ಲೂಕಿನ ಅಮ್ಮಸಂದ್ರ ಗ್ರಾಮ ಪಂಚಾಯಿತಿಗೆ ಸೇರಿದ ಆದಿತ್ಯ ಪಟ್ಟಣ, ಹುಲ್ಲೇಕೆರೆ ಪಂಚಾಯಿತಿಯ ಹುಲ್ಲೇಕೆರೆ ಗ್ರಾಮ, ಕಣತೂರು ಪಂಚಾಯಿತಿ ಅಬುಕನಹಳ್ಳಿ, ಕೆ.ಮಾವಿನಹಳ್ಳಿ ಮತ್ತು ಕಣತೂರು, ಸಂಪಿಗೆ ಹೊಸಹಳ್ಳಿ ಪಂಚಾಯಿತಿಯ ಹಳೇ ಸಂಪಿಗೆ ಮತ್ತು ಸಂಪಿಗೆ ಹೊಸಹಳ್ಳಿ, ತಾಳ್ಕೆರೆ ಪಂಚಾಯಿತಿಯ ಡೊಂಕಿಹಳ್ಳಿ ಕೆಟ್ಟು ನಿಂತು ಘಟಕಗಳ ಒಳಗೆ ಗಿಡಗಳು ಬೆಳೆದಿವೆ.

ಭೈತರಹೊಸಹಳ್ಳಿ ಪಂಚಾಯಿತಿಯ ಡಿ.ಎನ್.ಪುರ, ದಬ್ಬೇಘಟ್ಟ ಪಂಚಾಯಿತಿಯ ಅರೇಹಳ್ಳಿ, ಹೊಡಕೆಘಟ್ಟ, ಗೋಣಿತುಮಕೂರು ಪಂಚಾಯಿತಿಯ ನಡುವನಹಳ್ಳಿ, ಹುಲಿಕೆರೆ ಗ್ರಾಮ, ಹುಲ್ಲೇಕೆರೆ ಪಂಚಾಯಿತಿಯಲ್ಲಿನ ರಾಮಡಿಹಳ್ಳಿ, ಕಣತೂರು ಗ್ರಾಮ ಪಂಚಾಯಿತಿಯ ಲಕ್ಕಿರಾಮನಪಾಳ್ಯ, ಮುದ್ದನಹಳ್ಳಿ, ಬೇವಿನಹಳ್ಳಿ ಮತ್ತು ಕಣತೂರು, ಕೊಡಗೀಹಳ್ಳಿ ಪಂಚಾಯಿತಿಯಲ್ಲಿನ ಕೊಟ್ಟೂರನ ಕೊಟ್ಟಿಗೆ, ಮಾಯಸಂದ್ರ ಗ್ರಾಮ ಪಂಚಾಯಿತಿಯ ದೊಡ್ಡಶೆಟ್ಟಿಕೆರೆ ಮತ್ತು ಮಾಯಸಂದ್ರ, ಮುತ್ತಗದಹಳ್ಳಿ ಪಂಚಾಯಿತಿಯ ನಾಗಲಾಪುರ, ಮುತ್ತುಗದಹಳ್ಳಿ ಮತ್ತು ಕೆ.ಹೊಸಹಳ್ಳಿ. ಸಂಪಿಗೆ ಹೊಸಹಳ್ಳಿ ಪಂಚಾಯಿತಿಯ ಟಿ.ಪಾಳ್ಯ ಮತ್ತು ಡಿ.ಪಾಳ್ಯದ ಘಟಕಗಳು ರಿಪೇರಿಯಲ್ಲಿವೆ.

ಜನರ ಪರದಾಟ: ಬಹುಪಾಲು ಘಟಕಗಳು ಕೆಟ್ಟು ಎರಡು ಮೂರು ವರ್ಷಗಳೇ ಕಳೆದಿವೆ. ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಹುಲ್ಲೇಕೆರೆ ಗ್ರಾಮದಲ್ಲಿರುವ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಎರಡು ವರ್ಷ ಕಳೆದಿವೆ. ಇಲ್ಲಿನ ಜನ ಅಮ್ಮಸಂದ್ರ, ಸಾಸಲು ಮತ್ತು ಜಕ್ಕನಹಳ್ಳಿಗೆ ಹೋಗಿ ನೀರು ತರುತ್ತಿದ್ದಾರೆ. ಡೊಂಕಿಹಳ್ಳಿ, ರಿಪೇರಿಗೆ ಬಂದು ವರ್ಷ ಮುಗಿದಿದ್ದು ರಿಪೇರಿಗೆ ಯಾವ ಅಧಿಕಾರಿಯೂ ಮುಂದಾಗಿಲ್ಲ. ಗ್ರಾಮಸ್ಥರು ಮಾದಿಹಳ್ಳಿಗೆ ಹೋಗಿ ನೀರು ತರುತ್ತಾರೆ. ಹಳೆ ಸಂಪಿಗೆಯ ಗ್ರಾಮದ ಘಟಕ ರಿಪೇರಿಯಾಗಿಲ್ಲ ಇಲ್ಲಿನ ಜನರು ನಲ್ಲಿ ನೀರನ್ನೇ ಕುಡಿಯುವಂತಾಗಿದೆ. ಬೇವಿನಹಳ್ಳಿ ಗ್ರಾಮದವರು ದೂರದ ದಿಡಗಕ್ಕೆ ಹೋಗಿ ನೀರು ತರುತ್ತಾರೆ.

ಇಚ್ಛಾಶಕ್ತಿ ಕೊರತೆ

ತಾಲ್ಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಬಹುಪಾಲು ನೀರಿನ ಘಟಕಗಳು ಕೆಟ್ಟು ನಿಂತು ಜನರ ಉಪಯೋಗಕ್ಕೆ ಬರದೆ ಸರ್ಕಾರದ ಹಣ ಪೋಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.

ಡಿ.ಎಸ್.ಸಿದ್ದಲಿಂಗ ಸ್ವಾಮಿ, ದೊಂಬರನಹಳ್ಳಿ

ಆರೋಗ್ಯ ಏರುಪೇರು

ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ತೆರೆದು ಆ ನೀರನ್ನು ಜನರಿಗೆ ಅಭ್ಯಾಸ ಮಾಡಿಸಿದರು. ಈಗ ಆ ಘಟಕಗಳು ಕೆಟ್ಟು ನಿಂತಿವೆ. ಬೇರೆ ನೀರು ಕುಡಿದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಬೇಸಿಗೆಯಲ್ಲಿ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಕೆಟ್ಟು ನಿಂತಿರುವ ಘಟಕಗಳನ್ನು ಸರಿಪಡಿಸಬೇಕು.

ಚಂದ್ರಶೇಖರ್ ಗುರಾಣಿ, ಹುಲ್ಲೇಕೆರೆ ಹಾಲು ಉತ್ಪಾದಕರ ಸಂಘದ ಸದಸ್ಯ

ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು

2014-15 ಸಾಲಿನಲ್ಲಿ ಜಾರಿಗೆ ತಂದ ನಮ್ಮ ಶುದ್ಧ ಗಂಗಾಜಲ ಯೋಜನೆ ಸಂಪೂರ್ಣ ಹಳ್ಳಹಿಡಿದು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಸೋತಿವೆ. ಹಾಗಾಗಿ ಏಜೆನ್ಸಿಗಳ ನಿರ್ವಹಣೆಯಲ್ಲಿ ಸ್ಥಗಿತಗೊಂಡ ಘಟಕಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಿದರೆ ಪಂಚಾಯಿತಿ ಅನುದಾನದಲ್ಲಿ ನಡೆಯುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು.

ಸಾಗರ್, ಮುನಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.