ತುಮಕೂರು: ಇಲ್ಲಿನ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ 19ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕದ ಬದಲಾಗಿ, ಚೆಕ್ ನೀಡಿದ್ದು ರ್ಯಾಂಕ್ ಪಡೆದವರ ಆಕ್ರೋಶಕ್ಕೆ ಕಾರಣವಾಯಿತು.

ಪದವಿ ಪ್ರಮಾಣ ಪತ್ರದಲ್ಲಿಯೂ ಚಿನ್ನದ ಪದಕ ಎಂಬುದರ ಬದಲಾಗಿ, ‘ನಗದು ಪುರಸ್ಕಾರ’ ಎಂದೇ ನಮೂದಿಸಲಾಗಿತ್ತು. ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಿ ವಾಪಸ್ ಮನೆಗಳಿಗೆ ತೆರಳಿದ್ದಾರೆ. ಗುರುವಾರ ಸಂಜೆಯ ಒಳಗೆ ಎಲ್ಲ ಪ್ರಮಾಣಪತ್ರ ವಾಪಸ್ ನೀಡುವಂತೆ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಚಿನ್ನದ ಪದಕ ಸಿದ್ಧಪಡಿಸಲು ಮಧ್ಯಪ್ರದೇಶದ ಖಾಸಗಿ ಸಂಸ್ಥೆಗೆ ವಿಶ್ವವಿದ್ಯಾಲಯದಿಂದ ಟೆಂಡರ್ ನೀಡಲಾಗಿತ್ತು. ಬುಧವಾರ ಬೆಳಿಗ್ಗೆಯ ತನಕ ಕಾದು ನೋಡಿದರೂ ಪದಕಗಳು ವಿ.ವಿ ತಲುಪಲಿಲ್ಲ. ಟೆಂಡರ್ ಪಡೆದಿದ್ದ ಸಂಸ್ಥೆಯ ಸಿಬ್ಬಂದಿ ಸಂಪರ್ಕಕ್ಕೂ ಸಿಕ್ಕಿಲ್ಲ. ಹೀಗಾಗಿ ತರಾತುರಿಯಲ್ಲಿ ಚೆಕ್ ಸಿದ್ಧಪಡಿಸಿ ಮೊದಲ ರ್ಯಾಂಕ್ ಪಡೆದವರಿಗೆ ವಿತರಿಸಲಾಯಿತು.

ಪದವಿ, ಸ್ನಾತಕೋತ್ತರ ಪದವಿ ಸೇರಿ ಒಟ್ಟು 90 ವಿದ್ಯಾರ್ಥಿಗಳಿಗೆ 117 ಪದಕ ನೀಡಬೇಕಾಗಿತ್ತು. ಸಮಾರಂಭ ಶುರುವಾಗುವ ತನಕ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ‘ಚಿನ್ನದ ಪದಕ ನೀಡಲಾಗುತ್ತದೆ. ಎಲ್ಲರಿಗೂ ತೋರಿಸಿ ಸಂತಸ ಹಂಚಿಕೊಳ್ಳಬಹುದು’ ಎಂಬ ಆಸೆಯಿಂದಲೇ ಘಟಿಕೋತ್ಸವಕ್ಕೆ ಬಂದಿದ್ದವರು ನಿರಾಸೆ ಅನುಭವಿಸಿದರು.

ಕೆಲವರು ಸಪ್ಪೆ ಮೊರೆ ಹಾಕಿ ಮನೆ ಕಡೆ ತೆರಳಿದರೆ, ಇನ್ನೂ ಕೆಲವರು ‘ಯಾಕೆ ಚಿನ್ನದ ಪದಕ ನೀಡಿಲ್ಲ’ ಎಂದು ವಿ.ವಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಧ್ಯಾಹ್ನದ ನಂತರ ಘಟಿಕೋತ್ಸವ ಸಮಾರಂಭಕ್ಕೆ ಅಡ್ಡಿಪಡಿಸಿದರು. ವೇದಿಕೆ ಬಳಿಗೆ ತೆರಳಿ ಪ್ರಮಾಣಪತ್ರ ವಿತರಣೆಗೆ ವಿರೋಧ ವ್ಯಕ್ತಪಡಿಸಿದರು.

ಹಿಂದಿನ ವರ್ಷದಂತೆ ಈ ಬಾರಿಯೂ ಚಿನ್ನದ ಪದಕ ನೀಡಬೇಕು ಎಂದು ಪಟ್ಟು ಹಿಡಿದರು. ‘ಈಗಲೇ ಇದಕ್ಕೊಂದು ಪರಿಹಾರ ಒದಗಿಸಬೇಕು. ಹಣ ಕೊಟ್ಟರೆ ಎರಡು ದಿನಕ್ಕೆ ಖರ್ಚಾಗುತ್ತದೆ. ಪದಕ ನೀಡಿದರೆ ಜೀವನ ಪೂರ್ತಿ ಇಟ್ಟುಕೊಳ್ಳಬಹುದು. ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಸ್.ಮೋಹನ ರ್ಯಾಂಕ್ ವಿಜೇತರನ್ನು ಸಮಾಧಾನ ಪಡಿಸಿದರು. ‘ನಾವು ಎಲ್ಲಿಗೂ ಹೋಗಲ್ಲ, ಎಲ್ಲರ ಸಮಸ್ಯೆ ಬಗೆಹರಿಸುತ್ತೇವೆ. ಉಳಿದವರಿಗೆ ಪ್ರಮಾಣಪತ್ರ ವಿತರಿಸಲು ಅನುವು ಮಾಡಿಕೊಡಿ. ನಿಮ್ಮ ಜತೆ ಎಲ್ಲ ಮಾಹಿತಿ ಹಂಚಿಕೊಳ್ಳುತ್ತೇವೆ. ನೀವು ನಮ್ಮ ವಿದ್ಯಾರ್ಥಿಗಳೇ, ಯಾರಿಗೂ ಅನ್ಯಾಯ ಮಾಡುವುದಿಲ್ಲ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-2090352552

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.