ತುಮಕೂರು: ನಗರ ಒಳಗೊಂಡಂತೆ ಜಿಲ್ಲೆಯಾದ್ಯಂತ ಶುಕ್ರವಾರ ‘ವರ್ಷದ ತೊಡಕು’ ಆಚರಿಸಲಾಯಿತು. ಬೆಳಗಿನ ಜಾವದಿಂದಲೇ ಮಾಂಸದ ಅಂಗಡಿಗಳ ಮುಂದೆ ಜನ ಸಂದಣಿ ಕಾಣಿಸಿತು. ಮಾಂಸ ಖರೀದಿಗೆ ಮುಂದಾದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತು.

ಜನರು ಮೀನು, ಕುರಿ, ಮೇಕೆ ಮತ್ತು ಕೋಳಿ ಮಾಂಸ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯಗಳು ಕಂಡು ಬಂದವು. ಕುರಿ, ಮೇಕೆ ಮಾಂಸದ ದರದಲ್ಲಿ ಹೆಚ್ಚಳವಾಗಿತ್ತು. ನಗರದಲ್ಲಿ ₹600ರಿಂದ ₹700ಕ್ಕೆ ಸಿಗುತ್ತಿದ್ದ ಕೆ.ಜಿ ಮಾಂಸ ₹700, ₹800ಕ್ಕೆ ಏರಿಕೆಯಾಗಿತ್ತು. ರೆಡಿ ಚಿಕನ್ ಕೆ.ಜಿ ₹250, ಬ್ರಾಯ್ಲರ್ ಕೋಳಿ ಕೆ.ಜಿ ₹280, ಸ್ಕಿನ್ಲೆಸ್ ಕೆ.ಜಿ ₹300ಕ್ಕೆ ಹೆಚ್ಚಳವಾಗಿತ್ತು. ತೋವಿನಕೆರೆ ಭಾಗದಲ್ಲಿ ಕುರಿ, ಮೇಕೆ ಮಾಂಸ ಕೆ.ಜಿ ₹1,100ಕ್ಕೆ ತಲುಪಿತ್ತು.

ನಗರದ ಮಾಂಸದ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಂಗಡಿಗಳ ಮುಂಭಾಗ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಹನುಮಂತಪುರ, ಕೋತಿತೋಪು, ರಿಂಗ್ ರಸ್ತೆ, ಕುಣಿಗಲ್ ರಸ್ತೆಗಳಲ್ಲಿ ವಹಿವಾಟು ಜೋರಾಗಿತ್ತು.

ಗ್ರಾಮೀಣ ಭಾಗದಲ್ಲಿ ಗುಡ್ಡೆ ಮಾಂಸಕ್ಕೆ ಬೇಡಿಕೆ ಹೆಚ್ಚಿತ್ತು. ಕೋರ, ಬೆಳ್ಳಾವಿ, ಹೆಬ್ಬೂರು ಕಡೆಗಳಲ್ಲಿ ಗುಡ್ಡೆ ಮಾಂಸ ಖರೀದಿಗೆ ಜನರು ಮುಗಿ ಬಿದ್ದಿದ್ದರು. ಗುರುವಾರ ರಾತ್ರಿಯಿಂದಲೇ ಮಾಂಸ ಮಾರಾಟ ಶುರುವಾಗಿತ್ತು. ಗೂಳಹರಿವೆ, ಕೆಸರಮಡು, ಹೊನ್ನುಡಿಕೆ, ಮಲ್ಲಸಂದ್ರ, ಹೆಗ್ಗೆರೆ ಭಾಗದಲ್ಲಿಯೂ ಗುಡ್ಡೆ ಮಾಂಸ ಮಾರಾಟ ಮಾಡಲಾಯಿತು.

ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಮಾಂಸದ ಅಂಗಡಿಗಳಲ್ಲಿ ಕಳೆದ ಎರಡು ದಿನಗಳಿಂದ ವಹಿವಾಟು ಉತ್ತಮವಾಗಿದೆ. ಶುಕ್ರವಾರ ವರ್ಷದ ತೊಡಕು ಆಚರಿಸಿದರೆ, ಶನಿವಾರ ರಂಜಾನ್ ಹಬ್ಬ ಇದೆ. ಪ್ರತಿ ಭಾನುವಾರ ಸಾಮಾನ್ಯವಾಗಿ ಮಾಂಸ ಖರೀದಿ ಹೆಚ್ಚಿರುತ್ತದೆ. ಇದು ಅಂಗಡಿ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

‘ಬೆಳಿಗ್ಗೆಯಿಂದ ವಹಿವಾಟು ಚೆನ್ನಾಗಿ ನಡೆಯುತ್ತಿದೆ. ಮುಂದಿನ ಎರಡು ದಿನ ಇನ್ನಷ್ಟು ಹೆಚ್ಚಾಗುವ ವಿಶ್ವಾಸ ಇದೆ’ ಎಂದು ಕೋತಿತೋಪು ಬಳಿಯ ರಿಜ್ವಾನ್ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-17-1064109138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.