ತುಮಕೂರು: ಬೀನ್ಸ್, ಟೊಮೆಟೊ ಸೇರಿದಂತೆ ತರಕಾರಿ, ಸೊಪ್ಪು ಮತ್ತಷ್ಟು ದುಬಾರಿಯಾಗಿದೆ. ಕೋಳಿ ಮಾಂಸ ಏರಿಕೆ ದಾಖಲಿಸಿದ್ದು, ಹಣ್ಣು ಸಹ ತೇಜಿಯಾಗಿದೆ.

ಬೀನ್ಸ್ ತುಟ್ಟಿ: ಕಳೆದ ಕೆಲವು ವಾರಗಳಿಂದ ಏರಿಕೆಯತ್ತಲೇ ಮುಖಮಾಡಿರುವ ಬೀನ್ಸ್ ಬೆಲೆ ಒಮ್ಮೆಲೆ ದುಪ್ಪಟ್ಟಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹120–140ಕ್ಕೆ ಹೆಚ್ಚಳವಾಗಿದೆ. ಚಿಲ್ಲರೆಯಾಗಿ ₹150–160ರ ವರೆಗೂ ಮಾರಾಟ ಮಾಡಲಾಗುತ್ತಿದೆ. ದುಬಾರಿಯಾಗಿರುವುದು ಕಂಡವರು ಅಡುಗೆಯಲ್ಲಿ ಬೀನ್ಸ್ ಬಳಸುವುದನ್ನೇ ನಿಲ್ಲಿಸಿದ್ದಾರೆ.

ಬಿರು ಬಿಸಿಲಿಗೆ ಬೀನ್ಸ್ ಬೆಳೆ ಕಾಪಾಡಿಕೊಳ್ಳುವುದು ಕಷ್ಟಕರವಾಗಿದ್ದು, ಇರುವ ಬೆಳೆಯೂ ಒಣಗುತ್ತಿದೆ. ಇಳುವರಿ ತೀವ್ರವಾಗಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದೆ. ಒಂದು ವಾರದ ಅಂತರದಲ್ಲಿ ದರ ಎರಡು ಪಟ್ಟು ಹೆಚ್ಚಳವಾಗಿದೆ.

ಟೊಮೆಟೊ ಸಹ ಇದೇ ದಾರಿಯಲ್ಲಿ ಸಾಗುತ್ತಿದ್ದು, ಕೆ.ಜಿ 40–50ಕ್ಕೆ ಜಿಗಿದಿದೆ. ಮುಂದಿನ ಕೆಲವು ವಾರ ಮತ್ತಷ್ಟು ದುಬಾರಿ ಆಗಬಹುದು ಎಂದು ಹೇಳಲಾಗುತ್ತಿದೆ.

ಕ್ಯಾರೇಟ್, ಆಲೂಗಡ್ಡೆ, ಗಡ್ಡೆಕೋಸು, ಮೂಲಂಗಿ, ಬೆಂಡೆಕಾಯಿ, ನುಗ್ಗೆಕಾಯಿ ಏರಿಕೆ ದಾಖಲಿಸಿದೆ. ಶುಂಠಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಜಿಗಿದಿದೆ. ನಿಂಬೆಹಣ್ಣು ಮತ್ತೆ ದುಬಾರಿಯಾಗಿದೆ. ಬೀಟ್ರೂಟ್, ಹಸಿರು ಮೆಣಸಿನಕಾಯಿ ತುಸು ಕಡಿಮೆಯಾಗಿದೆ.

ಸೊಪ್ಪು ದುಬಾರಿ: ಸೊಪ್ಪಿನ ಬೆಳೆಗೂ ಬಿಸಿಲಿನ ತಾಪ ತಟ್ಟಿದೆ.ಈಗಿನ ಉಷ್ಣಾಂಶದಲ್ಲಿಸೊಪ್ಪು ಬೆಳೆಯುವುದು ಕಷ್ಟಕರವಾಗಿದ್ದು, ಧಾರಣೆ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹100–120, ಸಬ್ಬಕ್ಕಿ ಕೆ.ಜಿ ₹100–120, ಮೆಂತ್ಯ ಸೊಪ್ಪು ಕೆ.ಜಿ ₹100–120ಕ್ಕೆ ಏರಿಕೆಯಾಗಿದೆ. ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಇಳಿದಿದೆ.

ಹಣ್ಣು ಏರಿಕೆ: ದ್ರಾಕ್ಷಿ ಹೊರತುಪಡಿಸಿದರೆ ಹಣ್ಣುಗಳು ಸಹ ತುಟ್ಟಿಯಾಗಿವೆ. ಸೇಬು, ಮೂಸಂಬಿ ಮತ್ತಷ್ಟು ದುಬಾರಿಯಾಗಿದೆ. ಅಡುಗೆ ಎಣ್ಣೆ: ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹172–175, ಪಾಮಾಯಿಲ್ ಕೆ.ಜಿ ₹138–140, ಕಡಲೆಕಾಯಿ ಎಣ್ಣೆ ಕೆ.ಜಿ ₹180–185ಕ್ಕೆ ಸಿಗುತ್ತಿದೆ.

ಬೇಳೆ, ಧಾನ್ಯ: ಬೇಳೆ, ಧಾನ್ಯಗಳ ಧಾರಣೆ ತುಸು ತಗ್ಗಿದೆ. ಸಕ್ಕರೆ ದರ ಅಲ್ಪ ಹೆಚ್ಚಳವಾಗಿದೆ.

ದನಿಯಾ ದುಬಾರಿ: ದನಿಯಾ ಬೀಜ, ಬ್ಯಾಡಗಿ ಮೆಣಸಿನ ಕಾಯಿ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ. ಮಸಾಲೆ ಪದಾರ್ಥಗಳೂ ಕೊಂಚ ತೇಜಿಯಾಗಿವೆ.

ದನಿಯಾ ಕೆ.ಜಿ ₹180–200, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹450–480, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–250, ಕಾಳುಮೆಣಸು ಕೆ.ಜಿ ₹740–760, ಜೀರಿಗೆ ಕೆ.ಜಿ ₹260–270, ಚಕ್ಕೆ ಕೆ.ಜಿ ₹255–260, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,450–1,600, ಏಲಕ್ಕಿ ಕೆ.ಜಿ ₹3,300–3,500, ಬಾದಾಮಿ ಕೆ.ಜಿ ₹860–880, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹420–430ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಹೆಚ್ಚಳ: ಕಳೆದ ಕೆಲವು ದಿನಗಳಿಂದ ನಿಯಂತ್ರಣಕ್ಕೆ ಬಂದಿದ್ದ ಕೋಳಿ ಮಾಂಸದ ದರ ಒಮ್ಮೆಲೆ ಗಗನಮುಖಿಯಾಗಿದ್ದು, ಕೆ.ಜಿ.ಗೆ ₹35ರಿಂದ ₹50ರ ವರೆಗೂ ಹೆಚ್ಚಳ ದಾಖಲಿಸಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹180, ರೆಡಿ ಚಿಕನ್ ಕೆ.ಜಿ ₹265, ಸ್ಕಿನ್ಲೆಸ್ ಕೆ.ಜಿ ₹285, ಫಾರಂ ಕೋಳಿ ಕೆ.ಜಿ ₹160ಕ್ಕೆ ಜಿಗಿದಿದೆ. ಮೊಟ್ಟೆ ₹5.95ಕ್ಕೆ ಸಿಗುತ್ತಿದೆ.

ಮೀನು: ಮೀನು ಧಾರಣೆ ಸಹ ಏರಿಕೆಯತ್ತ ಮುಖ ಮಾಡಿದೆ. ಬಂಗುಡೆ ಕೆ.ಜಿ ₹430, ಬೂತಾಯಿ ₹260, ಬೊಳಿಂಜರ್ ಕೆ.ಜಿ ₹350, ಅಂಜಲ್ ಕೆ.ಜಿ ₹1,520, ಬಿಳಿಮಾಂಜಿ ₹1,690, ಕಪ್ಪುಮಾಂಜಿ ₹1,100 ಇಂಡಿಯನ್ ಸಾಲ್ಮನ್ ₹1,160, ಸೀಗಡಿ ಕೆ.ಜಿ ₹510–720, ಏಡಿ ಕೆ.ಜಿ ₹720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-17-951208671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.