ತುಮಕೂರು: ಪತ್ನಿಯನ್ನು ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ, ₹25 ಸಾವಿರ ದಂಡ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಗುಬ್ಬಿ ಪಟ್ಟಣದ ಕಾಯಿಪೇಟೆ ಬಡಾವಣೆಯ ಜಗದೀಶ ಶಿಕ್ಷೆಗೆ ಒಳಗಾದವನು. 2022 ಏಪ್ರಿಲ್ 19ರಂದು ತನ್ನ ಪತ್ನಿ ಶಿಲ್ಪ ಜತೆಗೆ ಜಗಳ ತೆಗೆದು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದನು.

15 ವರ್ಷಗಳ ಹಿಂದೆ ಜಗದೀಶ, ಶಿಲ್ಪ ವಿವಾಹ ನಡೆದಿತ್ತು. ಆದರೆ ಮಕ್ಕಳಿರಲಿಲ್ಲ. ಜಗದೀಶ ಮದ್ಯ ವ್ಯಸನಿಯಾಗಿದ್ದು, ಬೇರೆ ಹೆಂಗಸರ ಸಹವಾಸ ಹೊಂದಿದ್ದ. ಇದನ್ನು ಪ್ರಶ್ನಿಸಿದ ಶಿಲ್ಪ ಜತೆಗೆ ಜಗಳ ಮಾಡುತ್ತಿದ್ದ.

ತನ್ನ ತಮ್ಮನ ಮದುವೆ ನಿಶ್ಚಿತಾರ್ಥಕ್ಕೆ ಹೋಗುವುದಾಗಿ ಶಿಲ್ಪ ಹೇಳಿದಾಗ ಜಗಳ ತೆಗೆದು ಕೊಲೆ ಮಾಡಿದ್ದ. ತನಿಖೆ ನಡೆಸಿದ್ದ ಗುಬ್ಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎಸ್.ಶಿಲ್ಪ ಅವರು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ಸಿ.ದೀಪಕ್ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-17-154131370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.