ತುಮಕೂರು: ಪಾರ್ಟ್ಟೈಮ್ ಕೆಲಸದ ಆಮಿಷಕ್ಕೆ ಒಳಗಾಗಿ ನಗರದ ಟಿಪ್ಪು ನಗರದ ಎಸ್.ನಿವೇದಾ ಎಂಬುವರು ₹22.45 ಲಕ್ಷ ಕಳೆದುಕೊಂಡಿದ್ದಾರೆ.

ಪಾರ್ಟ್ ಟೈಮ್ ಕೆಲಸದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಜಾಹೀರಾತು ಕ್ಲಿಕ್ ಮಾಡಿದ್ದಾರೆ. ನಂತರ ‘Adha Leffler Mega India Ltd’ ಎಂಬ ವಾಟ್ಸ್ ಆ್ಯಪ್ ಗ್ರೂಪ್ಗೆ ಅವರ ನಂಬರ್ ಸೇರಿಸಲಾಗಿದೆ. ಮನೆಯಲ್ಲಿ ಕುಳಿತು ದಿನಕ್ಕೆ ₹6,500ರಿಂದ ₹8,000 ಗಳಿಸಬಹುದು ಎಂದು ಆರೋಪಿಗಳು ಗ್ರೂಪ್ನಲ್ಲಿ ತಿಳಿಸಿದ್ದಾರೆ. ಹೋಟೆಲ್ಗಳಿಗೆ ರೇಟಿಂಗ್ಸ್ ನೀಡಿ, ಹಣ ಸಂಪಾದಿಸಬಹುದು ಎಂದಿದ್ದಾರೆ.

ನಿವೇದಾ ಆರೋಪಿಗಳು ಹೇಳಿದಂತೆ ರೇಟಿಂಗ್ಸ್ ನೀಡಿದಾಗ ಅವರ ಖಾತೆಗೆ ₹180 ವರ್ಗಾಯಿಸಿದ್ದಾರೆ. ಇದಾದ ಬಳಿಕ https://t.me/hard_work_earn_more ಲಿಂಕ್ನಲ್ಲಿ ಅಗತ್ಯ ಮಾಹಿತಿ ಸಲ್ಲಿಸಿದ್ದಾರೆ. 2.25 1000 VIP TASK GROUP ಟೆಲಿಗ್ರಾಮ್ ಗ್ರೂಪ್ಗೆ ನಿವೇದಾ ನಂಬರ್ ಸೇರಿಸಿ ಪ್ರೀಪೇಯ್ಡ್ ಟಾಸ್ಕ್ಗಳ ಬಗ್ಗೆ ವಿವರಿಸಿದ್ದಾರೆ.

ಹಣ ಹೂಡಿಕೆ ಮಾಡಿ ಟಾಸ್ಕ್ ಪೂರ್ಣಗೊಳಿಸಿದೆ ದುಪ್ಪಟ್ಟು ಲಾಭ ನೀಡಲಾಗುವುದು ಎಂದು ವಂಚಕರು ನಂಬಿಸಿದ್ದಾರೆ. ನಿವೇದಾ ಫೆ. 25ರಿಂದ ಮಾರ್ಚ್ 18ರ ವರೆಗೆ ಹಂತ ಹಂತವಾಗಿ ಒಟ್ಟು ₹22,43,756 ಹಣವನ್ನು ವಿವಿಧ ಬ್ಯಾಂಕ್ ಖಾತೆ, ಯುಪಿಐ ಐ.ಡಿಗಳಿಗೆ ವರ್ಗಾವಣೆ ಮಾಡಿದ್ದಾರೆ. ವಾಪಸ್ ಕೇಳಿದಾಗ ಮತ್ತಷ್ಟು ಹೂಡಿಕೆ ಮಾಡಬೇಕು ಎಂದು ವಂಚಕರು ಹೇಳಿದ್ದಾರೆ.

ವಂಚನೆಗೆ ಒಳಗಾದ ವಿಷಯ ತಿಳಿದ ನಂತರ ನಿವೇದಾ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಸೈಬರ್ ಆರೋಪಿಗಳ ವಿರುದ್ಧ ಕ್ರಮಕೈಗೊಂಡು, ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-17-1964644731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.