ತುಮಕೂರು: ಎತ್ತಿನಹೊಳೆ ಯೋಜನೆ ಮುಂದುವರಿಸಲು ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಅನುಮತಿ ನೀಡಿದ್ದು, ಅಕ್ಟೋಬರ್ ಒಳಗೆ ನೀರು ಹರಿಸಲು ಪ್ರಯತ್ನಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ಎಚ್.ಎಸ್.ಆನಂದ್ ಹೇಳಿದರು.

ನಗರದ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮದ ಎತ್ತಿನಹೊಳೆ ಯೋಜನಾ ಕಚೇರಿಯಲ್ಲಿ ಶನಿವಾರ ಹಾಲಪ್ಪ ಪ್ರತಿಷ್ಠಾನದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

262 ಕಿಲೊ ಮೀಟರ್ ನಾಲಾ ಕಾಮಗಾರಿಯಲ್ಲಿ 221 ಕಿ.ಮೀ ಮುಕ್ತಾಯಗೊಂಡಿದೆ. 20 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. 10 ಕಿ.ಮೀ. ಅರಣ್ಯ ಕಾಮಗಾರಿಯಲ್ಲಿ 6 ಕಿ.ಮೀ ಬಾಕಿ ಇದೆ. ತುಮಕೂರಿನ 6 ಕೆರೆ, ಕೊರಟಗೆರೆಯ 39, ಮಧುಗಿರಿಯ 45, ಪಾವಗಡದ 23 ಕೆರೆಗೆ ನೀರು ತುಂಬಿಸಲಾಗುತ್ತಿದೆ ಎಂದು ವಿವರಿಸಿದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ‘ನಮ್ಮ ಭೂಮಿಯ ಮೇಲೆ ನಾಲೆ ಹೋದರೂ ಒಂದು ತೊಟ್ಟು ನೀರು ಪಡೆಯಲು ಆಗುತ್ತಿಲ್ಲ ಎಂಬ ಕೊರಗು ರೈತರಿಗೆ ಇದೆ. ಪರಿಹಾರದ ಹಣ ಬಗ್ಗೆಯೂ ಗೊಂದಲವಿದೆ. ಇದನ್ನು ನಿವಾರಿಸಿ, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಸ್.ಷಫಿ ಅಹ್ಮದ್, ಗಂಗಹನುಮಯ್ಯ, ಎತ್ತಿನಹೊಳೆ ಯೋಜನೆ ಉಪ ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ, ಕಾರ್ಯಪಾಲಕ ಎಂಜಿನಿಯರ್ ಮುರುಳೀಧರ, ಮುಖಂಡ ಎ.ಗೋವಿಂದರಾಜು, ಸಿ.ಡಿ.ಚಂದ್ರಶೇಖರ್, ಚಿಕ್ಕಣ್ಣ, ರಾಘವೇಂದ್ರ, ಪ್ರಸನ್ನಕುಮಾರ್, ನಂಜುಂಡಪ್ಪ, ಜವರೇಗೌಡ, ಕೆಂಪಣ್ಣ, ಲೋಕೇಶ್, ಗಿರೀಶ್, ಸೌಭಾಗ್ಯ, ಕೆಂಚಮಾರಯ್ಯ, ನಯಾಜ್, ರಾಚಪ್ಪ, ರಾಜಶೇಖರ್, ಗೋಡೆಕೆರೆ ರಾಜು, ಜೈರಾಮ್, ವೈ.ಎನ್.ನಾಗರಾಜು, ಶಿವಾಜಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-17-1333732019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.