ಭಾನುವಾರ, ಜುಲೈ 25, 2021
28 °C

ಗ್ರಾಹಕರಿಗೆ ಸ್ಪಂದಿಸದ ಬ್ಯಾಂಕ್: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ‘ತಮ್ಮ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಲು ತಾಲ್ಲೂಕಿನ ಗುರುಗದಹಳ್ಳಿ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಸಹಕರಿಸುತ್ತಿಲ್ಲ. ತಿಂಗಳುಗಟ್ಟಲೇ ಬ್ಯಾಂಕ್‍ಗೆ ಅಲೆಸುತ್ತಿದ್ದಾರೆ’ ಎಂದು ಗ್ರಾಹಕರು ದೂರಿದ್ದಾರೆ.

ಬ್ಯಾಂಕ್‌ ಶಾಖೆಯಲ್ಲಿ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರು ಖಾತೆ ತೆರೆದಿದ್ದಾರೆ. ಆದರೆ ನಿರಂತರವಾಗಿ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸಿಲ್ಲ. ಆರು ತಿಂಗಳು, ವರ್ಷದ ನಂತರ ಬರುವ ಗ್ರಾಹಕರಿಗೆ ಖಾತೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎನ್ನುತ್ತಿದ್ದಾರೆ. ಚಾಲನೆ ನೀಡಲು ಹೇಳಿದರೆ ತಾಂತ್ರಿಕ ಕಾರಣ ಹೇಳಿ ನಾಳೆ ಬನ್ನಿ ಎನ್ನುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಗ್ರಾಹಕರ ಖಾತೆಗೆ ಚಾಲನೆ ನೀಡುವಂತೆ ಗುಮಾಸ್ತರಿಗೆ ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ವ್ಯವಸ್ಥಾಪಕರಾದ ಸುಶ್ಮಿತಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು