ತುಮಕೂರು: ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಕೇಂದ್ರ ಸಚಿವ ವಿ.ಸೋಮಣ್ಣ ಕಚೇರಿ ಎದುರು ಮುಷ್ಕರ ನಡೆಸಲು ಕಾರ್ಯಕರ್ತೆಯರು ಮುಂದಾದರು. ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ನಂತರ ಟೌನ್ಹಾಲ್ಗೆ ಬಂದು ಪ್ರತಿಭಟನೆ ನಡೆಸಿದರು. ಕೊನೆಯದಾಗಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಇರುವ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಮುಷ್ಕರ ಮುಂದುವರಿಸಿದ್ದಾರೆ.

ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘ, ಬಿಸಿಯೂಟ, ಆಶಾ ನೌಕರರ ಸಂಘದ ನೇತೃತ್ವದಲ್ಲಿ ಹೋರಾಟ ನಡೆದಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಅಂಗನವಾಡಿ, ಬಿಸಿಯೂಟ, ಆಶಾ ಯೋಜನೆ ಆರಂಭವಾಗಿ ಹಲವು ದಶಕಗಳೇ ಕಳೆದಿವೆ. ಆದರೆ ಈವರೆಗೂ ಈ ಯೋಜನೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿಯನ್ನು ಕಾಯಂ ಮಾಡಿಲ್ಲ. ಸುಮಾರು 59 ಲಕ್ಷ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೋಷಣೆ ಮತ್ತಷ್ಟು ಹೆಚ್ಚಾಗಿದೆ. ಕೇಂದ್ರ ತನ್ನ ಪಾಲಿನ ವಂತಿಗೆ ಹಣವನ್ನು ಶೇ 90ರಿಂದ 60ಕ್ಕೆ ಇಳಿಸಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಬಜೆಟ್ ಮೊತ್ತ ಹೆಚ್ಚಿಸುವ ಬದಲು ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ಯೋಜನೆ ನಿರ್ವಹಣೆ ಕಷ್ಟಕರವಾಗಿದೆ ಎಂದು ಅಸಮಾಧಾನ ತೋಡಿಕೊಂಡರು.

ಸಿಐಟಿಯು ಮುಖಂಡರಾದ ಸೈಯದ್ ಮುಜೀಬ್, ಎಂ.ವಸಂತಚಾರಿ, ಎನ್.ಕೆ.ಸುಬ್ರಮಣ್ಯ, ಸುಜೀತ್ ನಾಯಕ್, ಭೀಮರಾಜು, ವಸಿಂ ಅಕ್ರಮ, ಇಂತಿಯಾಜ್, ಟಿ.ಆರ್.ಕಲ್ಪನಾ, ಅಂಗನವಾಡಿ ನೌಕರರ ಸಂಘದ ರಾಜ್ಯ ಖಜಾಂಚಿ ಜಿ.ಕಮಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಬಿಸಿಯೂಟ ನೌಕರರ ಸಂಘದ ಹನುಮಕ್ಕ, ನಿಂಗಮ್ಮ, ಪ್ರಮುಖರಾದ ಅನಸೂಯ, ಪಾರ್ವತಮ್ಮ, ಪುಪ್ಪ, ಬಳ್ಳಾರಿ ಉಮಾ, ಈರಮ್ಮ, ಮಲ್ಲಮ್ಮ, ಉಡುಪಿ ಭಾರತಿ, ಶಾಂತ, ಚಿತ್ರದುರ್ಗದ ನಿರ್ಮಲ, ಮಂಜುಳ, ಕಲ್ಯಾಣಮ್ಮ, ವಿಜಯನಗರದ ನಾಗರತ್ನ, ಸಪ್ನ, ಮಾರಕ್ಕ, ಬಿಸಿಯೂಟ ನೌಕರರ ಸಂಘ ತುಮಕೂರಿನ ಕೆಂಚಮ್ಮ, ನಾಗರತ್ನ, ಬಳ್ಳಾರಿ ದುರ್ಗಮ್ಮ, ಗೌರಮ್ಮ, ನಾಗರತ್ನ, ಚಿತ್ರದುರ್ಗ ಶಿವಮ್ಮ, ರಾಜಮ್ಮ, ವಿಜಯನಗರ ಗೌರಮ್ಮ, ಸುಮಾ, ಯಶೋದ, ಶಿವಮೊಗ್ಗ ಸುನಿತಾ, ದಕ್ಷಿಣ ಕನ್ನಡ ಜಿಲ್ಲೆ ಭವ್ಯ ಭಾಗವಹಿಸಿದ್ದರು.

ಪ್ರಮುಖ ಬೇಡಿಕೆಗಳು

* ಅಂಗನವಾಡಿ ನೌಕರರನ್ನು ಒಳಗೊಂಡಂತೆ ದುಡಿವ ಜನರಿಗೆ ದ್ರೋಹ ಬಗೆಯುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು.

* ದುಡಿಯುವ ಜನರಿಗೆ ಶಾಸನಬದ್ಧ ಸವಲತ್ತುಗಳನ್ನು ನಿರಾಕರಿಸುವ ‘ಶ್ರಮಶಕ್ತಿ ನೀತಿ–2025’ ಜಾರಿ ಮಾಡಬಾರದು.

* ಅಂಗನವಾಡಿ ಕಾರ್ಯಕರ್ತೆಯರಿಗೂ ಮುಟ್ಟಿನ ರಜೆ ನೀಡಬೇಕು.

* 56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಬೇಕು.

* 2018ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಕೂಡಲೇ ಕನಿಷ್ಠ ವೇತನ ಜಾರಿ ಮಾಡಬೇಕು.

* ಎಫ್ಆರ್ಎಸ್ ರದ್ದು ಮಾಡಬೇಕು. ಇಲ್ಲದಿದ್ದಲ್ಲಿ 6 ತಿಂಗಳಿಗೊಮ್ಮೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವೈಪೈ ವ್ಯವಸ್ಥೆ ನೀಡಬೇಕು.

* ಐಸಿಡಿಎಸ್ ಯೋಜನೆ ಕಾಯಂ ಮಾಡಬೇಕು. ಕಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು

* 2018ರಿಂದ ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ. ಕೂಡಲೇ ಘಟಕ ವೆಚ್ಚ ಹೆಚ್ಚಿಸಬೇಕು. ಸ್ಥಳೀಯ ಆಹಾರ ಪದಾರ್ಥ ನೀಡಬೇಕು.

* ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಗೆ ನಿಯೋಜಿಸಬಾರದು.

* ಐಎಲ್ಸಿ ಶಿಫಾರಸಿನಂತೆ ಉದ್ಯೋಗಸ್ಥರೆಂದು ಪರಿಗಣಿಸಿ ಶಾಸನ ಬದ್ಧ ಸೌಲಭ್ಯ ಕೊಡಬೇಕು. 3 ಮತ್ತು 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು.

* ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.